ಕೋಲ್ಕತ್ತಾ: ಕೋಲ್ಕತ್ತಾ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ ಪಡೆದು ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಇಮ್ರಾನ್ ತಾಹೀರ್ ತಮ್ಮ ಯಶಸ್ವಿ ಬೌಲಿಂಗ್ ಪ್ರದರ್ಶನಕ್ಕೆ ಧೋನಿ ನೀಡುವ ಸಲಹೆಗಳೆ ಕಾರಣ ಎಂದು ತಿಳಿಸಿದ್ದಾರೆ.
12ನೇ ಆವೃತ್ತಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಸಿಎಸ್ಕೆ ತಂಡದ ತಾಹಿರ್ ಪ್ರತಿ ಪಂದ್ಯದಲ್ಲೂ ಸಿಎಸ್ಕೆ ಗೆಲುವಿಗೆ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ರನ್ ಕಂಟ್ರೋಲ್ ಜೊತೆಗೆ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ತನ್ನ ಕರಾರುವಾಕ್ ಸ್ಪಿನ್ ಬೌಲಿಂಗ್ ದಾಳಿಗೆ ಬೀಳಿಸುತ್ತಿರುವ ತಾಹೀರ್ ತಮಗೆ ಧೋನಿ ನೀಡುವ ಸಲಹೆಯಿಂದ ಎಂದಿದ್ದಾರೆ.
-
Our #ParasakthiExpress on his bowling chronicles under #Thala's guidance! #WhistlePodu #Yellove🦁💛 pic.twitter.com/IYZu6n5HYw
— Chennai Super Kings (@ChennaiIPL) April 15, 2019 " class="align-text-top noRightClick twitterSection" data="
">Our #ParasakthiExpress on his bowling chronicles under #Thala's guidance! #WhistlePodu #Yellove🦁💛 pic.twitter.com/IYZu6n5HYw
— Chennai Super Kings (@ChennaiIPL) April 15, 2019Our #ParasakthiExpress on his bowling chronicles under #Thala's guidance! #WhistlePodu #Yellove🦁💛 pic.twitter.com/IYZu6n5HYw
— Chennai Super Kings (@ChennaiIPL) April 15, 2019
ಧೋನಿ ವಿಶ್ವಶ್ರೇಷ್ಠ ನಾಯಕ, ನಾನು ಅವರ ನಾಯಕತ್ವದಲ್ಲಿ ಆಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಎದುರಾಳಿಯ ಪ್ರತಿಯೊಂದು ಚಲನೆಯನ್ನು ಗಮನಿಸುವ ಧೋನಿ ನಮಗೆ ಬ್ಯಾಟ್ಸ್ಮನ್ ಯಾವರೀತಿ ಬ್ಯಾಟಿಂಗ್ ಮಾಡುತ್ತಾನೆ, ನಾವು ಯಾವ ರೀತಿ ಬೌಲಿಂಗ್ ಚಲನೆಯನ್ನು ಬದಲಾಯಿಸಬೇಕು ಎಂಬುದನ್ನು ಧೋನಿ ತಿಳಿಸುತ್ತಾರೆ. ಅದನ್ನು ಪಾಲಿಸಿರುವುದರಿಂದಲೇ ನಮ್ಮ ತಂಡ ಇಷ್ಟು ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ತಾಹೀರ್ ಧೋನಿಯನ್ನು ಹಾಡಿಹೊಗಳಿದ್ದಾರೆ.
ತಾಹೀರ್ 7 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ 12ನೇ ಆವೃತ್ತಿಯಲ್ಲಿ 13 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ಗಳ ಪೈಕಿ ಡೆಲ್ಲಿ ಕ್ಯಾಪಿಟಲ್ನ ಕಗಿಸೋ ರಬಡಾ(16) ಮೊದಲ ಸ್ಥಾನದಲ್ಲಿದ್ದಾರೆ.