ಬೆಂಗಳೂರು: ಮೆಡಿಕಲ್ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ನೀಡಲು ಮುಂದಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದ ಕೋರ್ಸ್ಗಳ ಶುಲ್ಕದಲ್ಲಿ ಹೆಚ್ಚಳವಾಗಿದೆ.
ಪಿಯುಸಿ ಪರೀಕ್ಷೆ ಮುಗಿಸಿ ಮೆಡಿಕಲ್, ಡೆಂಟಲ್ ಕೋರ್ಸ್ಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ದೊಡ್ಡ ಶಾಕ್ ನೀಡಲು ಮುಂದಾಗಿದೆ. ಪಿಜಿ ಮೆಡಿಕಲ್ ವಿದ್ಯಾರ್ಥಿಗಳಿಗೂ ಕೋರ್ಸ್ಗಳ ಶುಲ್ಕ ಹೆಚ್ಚಿಸಿವ ಬಿಸಿ ತಟ್ಟಿದೆ. ಖಾಸಗಿ ಕಾಲೇಜುಗಳ ಫೀಸ್ ಈ ವರ್ಷ ಹೆಚ್ಚಳವಾಗಲಿದೆ. ಸರ್ಕಾರಿ ಮೆಡಿಕಲ್ ಕಾಲೇಜು, ಕಾಮೆಡ್-ಕೆ, ಎನ್ಆರ್ ಮತ್ತು ಇತರೆ ಮ್ಯಾನೇಜ್ಮೆಂಟ್ ಕೋಟಾದ ಪಿಜಿ ಮೆಡಿಕಲ್ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸರ್ಕಾರ ಕಳೆದ ವರ್ಷವಷ್ಟೇ ಶೇ. 8ರಷ್ಟು ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಜೊತೆ ರಾಜ್ಯ ಸರ್ಕಾರ ಯುಜಿ ಮೆಡಿಕಲ್ ಮತ್ತು ಪಿಜಿ ಮೆಡಿಕಲ್ ಶುಲ್ಕವನ್ನು ಹೆಚ್ಚಳ ಮಾಡಿ ಬಿಸಿ ಮುಟ್ಟಿಸಿತ್ತು. ಈ ವರ್ಷವೂ ಪಿಜಿಯ ಎಲ್ಲಾ ಕೋರ್ಸ್ಗಳಿಗೆ ಶೇ. 15ರಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ. ಪಿಜಿ ಮೆಡಿಕಲ್ ಡಿಗ್ರಿಯ ಸರ್ಕಾರಿ ಕೋಟಾದ ಶುಲ್ಕ 5 ಲಕ್ಷದ 6 ಸಾವಿರದಿಂದ 5 ಲಕ್ಷದ 81 ಸಾವಿರದವರೆಗೂ ಹೆಚ್ಚಳವಾದ್ರೆ, ಕಾಮೆಡ್-ಕೆ ಮೂಲಕ ಪ್ರವೇಶ ಪಡೆಯೊ ಪಿಜಿ ಮೆಡಿಕಲ್ ಡಿಗ್ರಿಯ ಶುಲ್ಕ 7 ಲಕ್ಷ 59 ಸಾವಿರದಿಂದ 8 ಲಕ್ಷ 72 ಸಾವಿರದ 850ಕ್ಕೆ ಹೆಚ್ಚಳವಾಗಲಿದೆ. ಇನ್ನು ಪಿಜಿ ಮೆಡಿಕಲ್ ಡಿಪ್ಲೋಮಾ ಸರ್ಕಾರಿ ಕೋಟಾದ ಶುಲ್ಕ 3 ಲಕ್ಷದ 79 ಸಾವಿರದ 500 ರೂಪಾಯಿಯಿಂದ 4 ಲಕ್ಷದ 36 ಸಾವಿರದ 425ಕ್ಕೆ ಏರಿಕೆಯಾಗಿದೆ.
ಪಿಜಿ ಮೆಡಿಕಲ್ ಡಿಪ್ಲೋಮಾ ಕಾಮೆಡ್-ಕೆ ಶುಲ್ಕ 5 ಲಕ್ಷದ 75 ಸಾವಿರದಿಂದ 6 ಲಕ್ಷದ 61 ಸಾವಿರ 250 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಪಿಜಿ ಡೆಂಟಲ್ ಕೋರ್ಸ್ ಸರ್ಕಾರಿ ಕೋಟಾದ ಶುಲ್ಕ 2 ಲಕ್ಷದ 58 ಸಾವಿರದ 750 ರೂಪಾಯಿಯಿಂದ2 ಲಕ್ಷದ 97 ಸಾವಿರದ 562 ರೂ.ಗೆ ಏರಿಕೆಯಾಗಿದೆ. ಕಾಮೆಡ್-ಕೆ ಮೂಲಕ ಪಿಜಿ ಡೆಂಟಲ್ ಕೋರ್ಸ್ ಪ್ರವೇಶ ಪಡೆಯುವವರ ಶುಲ್ಕ 4 ಲಕ್ಷದ 4 ಸಾವಿರದ800 ರೂಪಾಯಿ. ಇದೀಗ 4 ಲಕ್ಷದ 65 ಸಾವಿರದ520 ರೂಪಾಯಿಗೆ ಏರಿಕೆಯಾಗಲಿದೆ. ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ನಡೆದ ಸಭೆಯಲ್ಲಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಕಾಮೆಡ್ - ಕೆ ಚೇರ್ಮನ್ ಎಂ.ಆರ್.ಜಯರಾಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
![undefined](https://s3.amazonaws.com/saranyu-test/etv-bharath-assests/images/ad.png)