ETV Bharat / briefs

ದುಬಾರಿಯಾಯ್ತು ಚಿನ್ನ, ನಾಲ್ಕು ತಿಂಗಳಲ್ಲೇ ಗರಿಷ್ಠ ಬೆಲೆ! - ಜಾಗತಿಕ ವಿದ್ಯಮಾನ

ಕಳೆದ ನಾಲ್ಕು ತಿಂಗಳಲ್ಲೇ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದೆ. ಜಾಗತಿಕ ವ್ಯಾಪಾರ ಸಂಬಂಧಿ ಗೊಂದಲಗಳು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚುತ್ತಿರುವುದು ಹಳದಿ ಲೋಹದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ದುಬಾರಿಯಾಯ್ತು ಚಿನ್ನ
author img

By

Published : Jun 14, 2019, 7:50 PM IST

ಮುಂಬೈ: ಚಿನ್ನ ಬಡ ಮತ್ತು ಮಧ್ಯಮ ವರ್ಗಕ್ಕೆ ಗಗನ ಕುಸುಮವಾಗುತ್ತಿದೆ. ಕಳೆದ ನಾಲ್ಕು ತಿಂಗಳಿಗೆ ಹೋಲಿಸಿದರೆ, ಪ್ರತಿ ಗ್ರಾಂ ಹಳದಿ ಲೋಹದ ಬೆಲೆ 331 ರೂಪಾಯಿ ಏರಿಕೆ ಕಂಡಿದ್ದು ಗ್ರಾಹಕರು 10 ಗ್ರಾಂಗೆ 33,290 ರೂಪಾಯಿ ಪಾವತಿಸಬೇಕಿದೆ.

Gold price hits four-month high
ದುಬಾರಿಯಾಯ್ತು ಚಿನ್ನ

ಭೌಗೋಳಿಕ ರಾಜಕೀಯ ಗೊಂದಲಗಳು, ಅಂತರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕಾ ಮತ್ತು ಚೀನಾ ನಡುವಿನ ಪೈಪೋಟಿ, ಅಮೆರಿಕ ಕೇಂದ್ರ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರ ಇಳಿಸುವ ಸಾಧ್ಯತೆ ಕಡಿಮೆ ಇರುವ ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜುಲೈ 5 ರಂದು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದು, ಇದರ ಬೆನ್ನಲ್ಲೇ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.