ಭುವನೇಶ್ವರ: ಇಲ್ಲಿ ನಡೆಯುತ್ತಿರುವ ಎಫ್ಐಎ ಪುರುಷರ ಹಾಕಿ ಸಿರೀಸ್ನ ಫೈನಲ್ನಲ್ಲಿ ಪೊಲೆಂಡ್ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿದೆ.
ರಷ್ಯಾತಂಡವನ್ನು 10-0 ಗೋಲುಗಳಿಂದ ಮಣಿಸಿದ್ದ ಭಾರತ ನಿನ್ನೆ ನಡೆದ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತು.
ಭಾರತದ 2 ಗೋಲುಗಳನ್ನು ಮನ್ಪ್ರೀತ್ ಸಿಂಗ್ 21 ನೇ ನಿಮಿಷದಲ್ಲಿ ಗೋಲುಗಳಿಸಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟರು. ಆದರೆ, ಈ ಸಂತೋಷ ಭಾರತದ ಪಾಲಿಗೆ ಹೆಚ್ಚಿನ ಸಮಯ ಉಳಿಯಲಿಲ್ಲ. ಪೋಲೆಂಡ್ ತಂಡದ ಮಾಟ್ಯೂಸ್ಜ್ ಹಲ್ಬೋಜ್ 25ನೇ ನಿಮಿಷದಲ್ಲಿ ಗೋಲುಗಳಿಸಿ ಸಮಬಲ ತಂದರು.
26 ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಗೋಲ್ಗಳಿಸಿ 2-1 ರಲ್ಲಿ ಮುನ್ನಡೆ ದೊರೆಕಿಸಿಕೊಟ್ಟರು. ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಗೋಲುಗಳಿಸದೇ ಇರುವುದರಿಂದ ಭಾರತ ಜಯ ಸಾಧಿಸಿತು.