ಕುಷ್ಟಗಿ: ಕೊರೊನಾ ನಡುವೆಯೂ ತಾಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ, ಪರೀಕ್ಷೆ ಮುಗಿದ ನಂತರ ಸುರಕ್ಷಿತವಾಗಿ ಮನೆಗೆ ತಲುಪಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿನಂದನೆಗೆ ಪಾತ್ರವಾಗಿದೆ.
ಕುಷ್ಟಗಿ ಸಾರಿಗೆ ಸಿಬ್ಬಂದಿ ಪರವಾಗಿ ಘಟಕದ ವ್ಯವಸ್ಥಾಪಕ ಸಂತೋಷ ಕುಮಾರ ಶೆಟ್ಟಿ ಹಾಗೂ ನಿಲ್ದಾಣ ನಿಯಂತ್ರಕ ಕಾಸೀಂಸಾಬ್ ಕಾಯಗಡ್ಡಿ ಅವರನ್ನು ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯ ಸಂದರ್ಭದಲ್ಲಿ ಸಾರಿಗೆ ನೋಡಲ್ ಅಧಿಕಾರಿ ಸೋಮನಗೌಡ ಪಾಟೀಲ ಅವರಿಗೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ವಾಪಸ್ ಸುರಕ್ಷಿತವಾಗಿ ತಲುಪಿಸುವ ಕಾರ್ಯ ನಿಜಕ್ಕೂ ಸವಾಲಾಗಿತ್ತು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಎನ್ ಕೆ ಆರ್ ಟಿ ಸಿ ನಿರ್ವಹಿಸಿದೆ. ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಈ ವೇಳೆ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಕೆ. ಬಿಳಿಯಪ್ಪನರ್, ರಾಜು ಬಾಳಿತೋಟ, ಇಸಿಇ ವಾಲೀಕಾರ ಮತ್ತಿತರರಿದ್ದರು.