ETV Bharat / briefs

ಪೆಟ್ಟು ತಿಂದ ರೂಟ್​ ಮುಖದಲ್ಲಿ ನಗು ತರಿಸಿದ ಯೂನಿವರ್ಸಲ್​ ಬಾಸ್ ರಿಯಾಕ್ಷನ್... ವಿಡೀಯೋ ನೋಡಿ! - ಕ್ರಿಸ್​ ಗೇಲ್​

40 ವರ್ಷದ ಗೇಲ್​  ತಮ್ಮ ಕೊನೆಯ ವಿಶ್ವಕಪ್​ ಆಡುತ್ತಿದ್ದು, ತಮ್ಮ ಮೊದಲ ಓವರ್​ನಲ್ಲೇ ಕೇವಲ ಒಂದು ರನ್​ ನೀಡಿ ಗಮನ ಸೆಳೆದರು. ಈ ಓವರ್​ ವೇಳೆ ಗೇಲ್​ ಎಸೆದ ಒಂದು ಬಾಲ್​ ರೂಟ್​ ಹೊಟ್ಟೆಗೆ ತಾಕಿ ಕೆಳಗೆ ಕುಳಿತು. ಈ ವೇಳೆ ಕ್ರಿಸ್​ ಗೇಲ್​ ಕೊಟ್ಟ ಸ್ಪಂದನೆಗೆ ಸ್ವತಃ ರೂಟ್​ ಮೊಗದಲ್ಲಿ ನಗು ಬರುವಂತೆ ಮಾಡಿತು.

Root entertained by Gayle
author img

By

Published : Jun 15, 2019, 12:21 PM IST

ಸೌತಮ್​ಟನ್​: ವಿಶ್ವದೆಲ್ಲೆಡೆ ತನ್ನ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಯುನಿವರ್ಸಲ್​ ಬಾಸ್​ ಎಂದೇ ಹೆಸರಾಗಿರುವ ಕ್ರಿಸ್​ಗೇಲ್​ ಮೈದಾನದಲ್ಲಿದ್ದರೆ ಬೌಂಡರಿ, ಸಿಕ್ಸರ್​ ಮೂಲಕವಲ್ಲದೇ ತಮ್ಮ ಇತರ ಚಟುವಟಿಕೆಯಿಂದ ನೆರೆದಿರುವ ಸಾವಿರಾರು ಅಭಿಮಾನಿಗಳನ್ನು ರಂಜಿಸಿದ್ದಾರೆ.

ನಿನ್ನೆ ಆತಿಥೇಯ ಇಂಗ್ಲೆಂಡ್​ ವಿರುದ್ಧ ವೆಸ್ಟ್​ ಇಂಡೀಸ್​ 8 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತ್ತು. ಆದರೆ, ಇಂಗ್ಲೆಂಡ್​ ಪಂದ್ಯ ಗೆದ್ದಿದ್ದಕ್ಕಿಂತ ಹೆಚ್ಚಿನ ಮನರಂಜನೆ ನೀಡಿದ್ದು ವಿಂಡೀಸ್​ನ ಸಿಕ್ಸರ್​ ಕಿಂಗ್​ ಕ್ರಿಸ್​ ಗೇಲ್​.

ಮೊದಲು ಬ್ಯಾಟಿಂಗ್​ ಮಾಡಿದ ವಿಂಡೀಸ್​ ಪರ ಗೇಲ್​ 36 ರನ್​ಗಳಿಸಿದ ಗೇಲ್​ ಎರಡನೇ ಇನ್ನಿಂಗ್ಸ್​ ವೇಳೆ ಬೌಲಿಂಗ್​ ಸಹಾ ಮಾಡಿ ಸೈ ಎನಿಸಿಕೊಂಡರು. ಬೌಲಿಂಗ್​ ಬರುವ ವೇಳೆ ಮೈದಾನದಲ್ಲಿ ಡ್ಯಾನ್ಸ್​ ಮಾಡುವ ಮೂಲಕ ವಾರ್ಮ್​ ಅಪ್​ ಮಾಡಿ ಅಭಿಮಾನಿಗಳನ್ನು ರಂಜಿಸಿದರು.

ಬೌಲಿಂಗ್ ಮಾಡುತ್ತಿರುವ ಕ್ರಿಸ್​ ಗೇಲ್​

40 ವರ್ಷದ ಗೇಲ್​ ತಮ್ಮ ಕೊನೆಯ ವಿಶ್ವಕಪ್​ ಆಡುತ್ತಿದ್ದು, ತಮ್ಮ ಮೊದಲ ಓವರ್​ನಲ್ಲೇ ಕೇವಲ ಒಂದು ರನ್​ ನೀಡಿ ಗಮನ ಸೆಳೆದರು. ಈ ಓವರ್​ ವೇಳೆ ಗೇಲ್​ ಎಸೆದ ಒಂದು ಬಾಲ್​ ರೂಟ್​ ಹೊಟ್ಟೆಗೆ ತಾಕಿ ಕೆಳಗೆ ಕುಳಿತು. ಈ ವೇಳೆ ಕ್ರಿಸ್​ ಗೇಲ್​ ಕೊಟ್ಟ ಸ್ಪಂದನೆಗೆ ಸ್ವತಃ ರೂಟ್​ ಮೊಗದಲ್ಲಿ ನಗು ಬರುವಂತೆ ಮಾಡಿತು.

ಒಟ್ಟಿನಲ್ಲಿ ಸೋಲು - ಗೆಲುವನ್ನು ಮನದಲ್ಲಿಟ್ಟುಕೊಳ್ಳದ ಗೇಲ್​ ಮೈದಾನದಲ್ಲಿ ತಮ್ಮ ವಯಸ್ಸು ಲೆಕ್ಕಿಸದೇ ಲವಲವಿಕೆಯಿಂದ ಓಡಾಡಿಕೊಂಡಿರುವುದನ್ನು ಕಂಡು ಎದುರಾಳಿ ಅಭಿಮಾನಿಗಳು ಕೂಡ ಗೇಲ್​ ಹೆಸರನ್ನು ಚೀರುತ್ತಿದ್ದಾರೆ. ಸಿಕ್ಸರ್​-ಬೌಂಡರಿ ಮೂಲಕ ಯೂನಿವರ್ಸಲ್ ಬಾಸ್​ ಎಂಬ ಹೆಸರು ಪಡೆದಿರುವ ಗೇಲ್​, ವಿಶ್ವಕಪ್​ನಲ್ಲಿ ಗ್ಲೋಬಲ್​ ಎಂಟೈಟನರ್​ ಆಗಿ ಬದಲಾಗುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.