ಪ್ರಯಾಗ್ರಾಜ್(ಯುಪಿ): ಕಳೆದ 22 ವರ್ಷಗಳ ಹಿಂದೆ ಒಂದೇ ಕುಟುಂಬದ ಐವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಾಂಡಿಲ್ ಸೇರಿ ಇತರ ಒಂಬತ್ತು ಮಂದಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
1997ರ ಜನವರಿ 26ರಂದು ಬಿಜೆಪಿ ಮುಖಂಡ ಶುಕ್ಲಾ ಹಾಗೂ ಅಶೋಕ್ ಸಿಂಗ್ ಚಾಂಡಿಲ್ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಶುಕ್ಲಾ ಇಬ್ಬರು ಸಹೋದರರಾದ ರಾಕೇಶ್, ರಾಜೇಶ್ ಮತ್ತು ಇವರಿಬ್ಬರ ಪತ್ನಿಯರಾದ ಅಂಬುಜಾ , ವೇದಾ ನಾಯಕ ಹಾಗೂ ಶ್ರೀಕಾಂತ್ ಪಾಂಡೆ ಸಾವನ್ನಪ್ಪಿದ್ದರು. ಜತೆಗೆ ಐವರು ಘಟನೆಯಲ್ಲಿ ಗಾಯಗೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.
ಇನ್ನು 2002ರ ಜುಲೈ 15ರಂದು ಚಾಂಡಿಲ್ ನಿರಪರಾಧಿ ಎಂದು ಜಿಲ್ಲಾ ನ್ಯಾಯಲಯ ತೀರ್ಪು ನೀಡಿತ್ತು. ಈ ವೇಳೆ ಸರಿಯಾದ ಸಾಕ್ಷಿಗಳಿಲ್ಲದಕ್ಕಾಗಿ ಈ ರೀತಿಯ ತೀರ್ಪು ಹೊರಬಿದ್ದಿತು. ಇದನ್ನ ಪ್ರಶ್ನೆ ಮಾಡಿ ಶುಕ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ.