ETV Bharat / briefs

ಸರ್ಪ ಸಂಸ್ಕಾರ ವಿವಾದ : ಅರ್ಚಕರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು - ಅರ್ಚಕರ ಮೇಲೆ ಹಲ್ಲೆ

ಮಂಗಳೂರಿನ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಅರ್ಚಕ ಸರ್ಪ ಸಂಸ್ಕಾರ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಮಠದ ಅರ್ಚಕ ಕುಮಾರ ಬನ್ನಿಂತಾಯ ಆರೋಪಿಸಿದ್ದಾರೆ

ಆಸ್ಪತ್ರೆಯಲ್ಲಿ ದಾಖಲಾದ ಅರ್ಚಕ ಕುಮಾರ
author img

By

Published : Jun 2, 2019, 11:18 PM IST

ಮಂಗಳೂರು : ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ‌ ಮಠದಲ್ಲಿ ಸರ್ಪಸಂಸ್ಕಾರ ಮಾಡಲಾಗುತ್ತದೆ ಎಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಮಠದ ಅರ್ಚಕ‌ ಕುಮಾರ ಬನ್ನಿಂತಾಯ ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾದ ಅರ್ಚಕ ಕುಮಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಚೇರಿಯಲ್ಲಿ ಮಠದ ಅರ್ಚಕ ಕುಮಾರ ಬನ್ನಿಂತಾಯ ಅವರ ಮೇಲೆ ಶನಿವಾರ ಸಂಜೆ ಹಲ್ಲೆ ನಡೆಸಲಾಗಿದೆ. ನನಗೆ ಕರೆ ಮಾಡಿ ಇಲ್ಲಿನ ರಥ ಬೀದಿಗೆ ಬರಲು ಹೇಳಿದರು. ನಾನು ಹೋಗುತ್ತಿರುವಾಗ ಇಬ್ಬರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಫೀಸ್​ಗೆ ಕರೆದುಕೊಂಡು ಹೋದರು. ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಂತಹ ಹಲ್ಲೆಗಳನ್ನು ಖಂಡಿಸುತ್ತೇವೆ. ನಮಗೆ ಎಲ್ಲಾ ಹಿಂದೂಗಳು ಒಂದೇ. ಮಠ, ಮಂದಿರಗಳು ಎಲ್ಲವೂ ಸಮಾನ. ಈ ಹಲ್ಲೆಗೈದವರ ಮೇಲೆ ಪೊಲೀಸ್ ಇಲಾಖೆ ಶೀಘ್ರವಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ಡಾ.ಕೆ‌ ಪ್ರಸನ್ನ ಹೇಳಿದರು. ಸುಬ್ರಹ್ಮಣ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ‌ ಮಠದಲ್ಲಿ ಸರ್ಪಸಂಸ್ಕಾರ ಮಾಡಲಾಗುತ್ತದೆ ಎಂದು ನನಗೆ ಮಾರಣಾಂತಿಕ ಹಲ್ಲೆ ಗೈಯಲಾಗಿದೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಮಠದ ಅರ್ಚಕ‌ ಕುಮಾರ ಬನ್ನಿಂತಾಯ ತಿಳಿಸಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಚೇರಿಯಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ‌ ಮಠದ ಅರ್ಚಕರಾದ ಕುಮಾರ ಬನ್ನಿಂತಾಯರಿಗೆ ನಿನ್ನೆ ಸಂಜೆ ಹಲ್ಲೆ ನಡೆಸಲಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿಗೆ ನನಗೆ ಫೋನ್ ಕರೆ ಮಾಡಿ, ರಥಬೀದಿಗೆ ಬರಲು ಹೇಳಿದರು. ನಾನು ಹೋಗುತ್ತಿರುವಾಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಫೀಸ್ ನ ಇಬ್ಬರು ಬಂದು ಕರೆದುಕೊಂಡು ಹೋಗಿ ಮೊದಲಿಗೆ ನನಗೆ ಹೊಡೆದು ಹಲ್ಲೆ ಮಾಡಿದರು. ಸುಮಾರು ಒಂದುವರೆ ತಾಸುಗಳ ಕಾಲ ಆಫೀಸ್ ನಲ್ಲಿ ಕೂರಿಸಿದ್ದಾರೆ. ಅಲ್ಲದೆ ಸ್ವಾಮೀಜಿಗಳಿಗೆ, ಜೋಯಿಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ 'ನೀನು ಭಟ್ಟ ಅಲ್ಲವಾ ಹೊಟ್ಟೆಗೆ ಅನ್ನ ತಿನ್ನುತ್ತೀಯಾ ಅಥವಾ ಏನು ತಿನ್ನುತ್ತೀಯಾ' ಅಂದಿದ್ದಾರೆ. ಬಳಿಕ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ದಾಖಲಿಸಿಲಾಗಿದೆ. ತುಂಬಾ ಒತ್ತಡದಲ್ಲಿದ್ದರಿಂದ ಮತ್ತೆ ಏನು ಆಗಿದೆ ಎಂದು ಗೊತ್ತಾಗಿಲ್ಲ. ಬರುತ್ತಾ ದಾರಿಯಲ್ಲಿ ಬಿದ್ದಿದ್ದೆ. ಬಳಿಕ ಮಠದವರಿಗೆ ಗೊತ್ತಾಗಿ, ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ‌ ಎಂದು ಕುಮಾರ ಬನ್ನಿಂತಾಯ ಹೇಳಿದರು.

Body:ಈ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ‌.ಪ್ರಸನ್ನ ಮಾತನಾಡಿ, ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶಿಷ್ಯರಿಗೆ ನಿನ್ನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಚೇರಿಯಲ್ಲಿ ಹಲ್ಲೆ ನಡೆಸಲಾಗಿದೆ. ಈ‌ ಹಲ್ಲೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಯಾರೇ ಇರಲಿ ನಮಗೆ ಎಲ್ಲಾ ಹಿಂದೂಗಳು ಒಂದೇ. ಮಠ, ಮಂದಿರಗಳು ಎಲ್ಲವೂ ಸಮಾನ. ಈ ಹಲ್ಲೆಗೈದವರ ಮೇಲೆ ಪೊಲೀಸ್ ಇಲಾಖೆ ಶೀಘ್ರವಾಗಿ ಸೂಕ್ತ ಕ್ರಮಕೈಗೊಳ್ಳ ಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.