ETV Bharat / briefs

ಒಂದೇ ಗ್ರಾಮದಲ್ಲಿ 35 ಜನರಿಗೆ ಸೋಂಕು: ಅಧಿಕಾರಿಗಳ ಭೇಟಿ, ಪರಿಶೀಲನೆ - Vijayapura Corona

ಉತ್ನಾಳ ತಾಂಡ 2ರಲ್ಲಿ ಒಟ್ಟು 35 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಉಪವಿಭಾಗಾಧಿಕಾರಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

 ಅಧಿಕಾರಿಗಳ ಭೇಟಿ
ಅಧಿಕಾರಿಗಳ ಭೇಟಿ
author img

By

Published : May 25, 2021, 9:13 PM IST

ವಿಜಯಪುರ: ತಾಲೂಕಿನ ಉತ್ನಾಳ ಎಲ್​ಟಿ ತಾಂಡಾ 2ದಲ್ಲಿ 35 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಕೊರೊನಾ ಸೋಂಕಿತ ಕುಟುಂಬಸ್ಥರನ್ನು ಭೇಟಿ ಮಾಡಿ, ಕೊರೊನಾ ಸೋಂಕಿತರು ಪ್ರತ್ಯೇಕವಾಗಿ ವಾಸಿಸಲು ತಿಳಿಸಿದ್ದಾರೆ. ಉತ್ನಾಳ ತಾಂಡ 2ರಲ್ಲಿ ಒಟ್ಟು 35 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಪ್ರತ್ಯೇಕ ಕೋಣೆ ಇರದೇ ಇದ್ದಲ್ಲಿ ಗ್ರಾಮದಲ್ಲಿರುವ ಶಾಲೆಯಲ್ಲಿ ವಾಸ‌ವಿರುವಂತೆ ತಿಳಿಸಿದ್ದಾರೆ. ವೈದ್ಯರು ನೀಡಿದ ಮಾತ್ರೆಗಳನ್ನು ತಪ್ಪದೇ ಸೇವಿಸುವಂತೆ ಮತ್ತು ಆರೋಗ್ಯದಲ್ಲಿ ಏರುಪೇರು ಆದಲ್ಲಿ‌ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.