ನವದೆಹಲಿ: ಇಂದು ಅಂತಾರಾಷ್ಟ್ರೀಯ ನ್ಯಾಯ ದಿನ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯು ಪಾರದರ್ಶಕವಾಗಿದ್ದರೂ, ಜನಸಂಖ್ಯೆ ವಿಪರೀತವಾಗಿರುವುದರಿಂದ ನ್ಯಾಯಾಲಯದಲ್ಲಿ ಜನರಿಗೆ ನ್ಯಾಯ ಸಿಗುವುದು ವಿಳಂಬವಾಗಿದೆ.
77 ಲಕ್ಷ ಪ್ರಕರಣಗಳು ಬಾಕಿ
ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನ್ಯಾಯಾಧೀಶರಿಗೆ ಹೊರೆಯಾಗುತ್ತಿದೆ. ಪ್ರತಿ ನ್ಯಾಯಾಧೀಶರ ಬಳಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಪ್ರತಾಪ್ಚಂದ್ರ, ರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಲಯಗಳು ಮಾಡುತ್ತಿರುವ ಕಾರ್ಯಗಳ ಮೇಲೆ ನಿಗಾ ವಹಿಸುವ ನ್ಯಾಯಾಂಗ ದತ್ತಾಂಶ ಬಿಡುಗಡೆ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಅಂದಾಜು 77 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ.
ವಿಚಾರಣಾ ಸಮಯ ಕಡಿತ
ಕೋರ್ಟ್ಗಳಲ್ಲಿ ಇತ್ತೀಚೆಗೆ ಆರೋಪಿಯ ವಿಚಾರಣಾ ಸಮಯವನ್ನು ಕಡಿತಗೊಳಿಸಲಾಗಿದೆ. ಮೊದಲು ಐದು ನಿಮಿಷವಿದ್ದ ಸಮಯವನ್ನು ಇದೀಗ ಎರಡೂವರೆ ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿ ಪ್ರಕರಣದ ವಿಚಾರಣೆಯ ಸರಾಸರಿ ಗರಿಷ್ಠ ಸಮಯ ಕೇವಲ 15 ನಿಮಿಷಗಳಾಗಿವೆ. ಇಂಥ ಪರಿಸ್ಥಿತಿಯಲ್ಲಿ ಕಾನೂನು ಪ್ರಕ್ರಿಯೆ ಹೇಗೆ ಸಾಧ್ಯ ಅನ್ನೋದು ಪ್ರಮುಖ ಪ್ರಶ್ನೆಯಾಗಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹೊರೆ ಕಡಿಮೆ ಮಾಡುವಲ್ಲಿ ಸರ್ಕಾರ ಮತ್ತು ಕಾನೂನು ಆಯೋಗದ ಪ್ರಮುಖ ಪಾತ್ರ ವಹಸಿವೆ. ವಿಚಾರಣಾ ಸಮಯವನ್ನು ಕಡಿಮೆ ಮಾಡಿ, ನ್ಯಾಯಾಧೀಶರ ಮೇಲಿನ ಒತ್ತಡ ಕಡಿಮೆ ಮಾಡಿವೆ.
ಹಿರಿಯ ವಕೀಲ ಪ್ರತಾಪ್ ಚಂದ್ರರ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಬದಲಾಯಿಸಿದ್ದರಿಂದ ಸಮಯ ಕಡಿಮೆಯಾಗುತ್ತಿದೆ ಎಂದರು.
73 ಸಾವಿರ ಜನರಿಗೆ ಒಬ್ಬ ನ್ಯಾಯಾಧೀಶ
ಭಾರತದಲ್ಲಿ 73 ಸಾವಿರ ಜನರಿಗೆ ಒಬ್ಬ ನ್ಯಾಯಾಧೀಶರಿದ್ದಾರೆ. ಅಮೆರಿಕದಲ್ಲಿ ಈ ಅನುಪಾತವು ಏಳು ಪಟ್ಟು ಕಡಿಮೆಯಿದೆ. ಪ್ರತಿ ಹೈಕೋರ್ಟ್ ನ್ಯಾಯಾಧೀಶರ ಬಳಿ ಸರಾಸರಿ 1,300 ಪ್ರಕರಣಗಳು ಬಾಕಿ ಉಳಿದಿವೆ. ಪ್ರಕರಣಗಳ ವಿಚಾರಣೆಯ ಸಮಯ ನಿಗದಿಪಡಿಸಿ, ರಾತ್ರಿ ಕೋರ್ಟ್ಗಳು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ಸಂಖ್ಯೆ ಹೆಚ್ಚಿಸಿದರೆ, ನ್ಯಾಯಾಂಗ ವ್ಯವಸ್ಥೆ ಸುಧಾರಿಸಬಹುದು.
ಯಾವ್ಯಾವ ಕೋರ್ಟ್ಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ಬಾಕಿ?
- ದೇಶದ ಜಿಲ್ಲಾ ಮತ್ತು ತಹಶೀಲ್ದಾರ ನ್ಯಾಯಾಲಯಗಳಲ್ಲಿ 28 ಲಕ್ಷ ಪ್ರಕರಣಗಳು ಬಾಕಿ
- ಈ ಪೈಕಿ 5,00,000 ಕ್ಕೂ ಹೆಚ್ಚು ಪ್ರಕರಣಗಳು 20 ವರ್ಷಗಳಿಂದ ಹಳೆಯವು
- ಮೂರು ದಶಕಗಳಿಂದ 85,141 ಪ್ರಕರಣಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ
- ದೇಶಾದ್ಯಂತ 25 ಹೈಕೋರ್ಟ್‌ಗಳ ಮುಂದೆ 47 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ
- ಈ ಪ್ರಕರಣಗಳಲ್ಲಿ, 9,20,000 ಕ್ಕೂ ಹೆಚ್ಚು ಪ್ರಕರಣಗಳು 10 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿವೆ
- ಕಳೆದ 20 ವರ್ಷಗಳಲ್ಲಿ 6,60,000 ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಕಾಯುತ್ತಿವೆ.
- 30 ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆ 1,31,000 ಇವೆ.
ಇದನ್ನೂ ಓದಿ : ಅಯ್ಯಪ್ಪನ ದೇಗುಲಕ್ಕೆ ಅರ್ಚಕರ ನೇಮಕ ವಿಚಾರ: TDB ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಪೂಜಾರಿ