ETV Bharat / bharat

ಪಶ್ಚಿಮ ಬಂಗಾಳದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸ್ಫೋಟ, ಸಾವು ಪ್ರಕರಣಗಳು: ಎನ್​ಎಸ್​ಜಿ ಮಾಜಿ ಅಧಿಕಾರಿ ಮಾಹಿತಿ

ಪಶ್ಚಿಮ ಬಂಗಾಳದಲ್ಲಿ ಒಂದರ ಹಿಂದೆ ಒಂದರಂತೆ ಪಟಾಕಿ ಕಾರ್ಖಾನೆಗಳು ಸ್ಫೋಟವಾಗಿ ಅನಾಹುತಗಳು ಸಂಭವಿಸುತ್ತಿವೆ. ದೇಶದಲ್ಲೇ ಅತಿ ಹೆಚ್ಚು ಅನಾಹುತ ಸಂಭವಿಸಿದ್ದು ರಾಜ್ಯದಲ್ಲಿ ಎಂದು ಎನ್​ಎಸ್​ಜಿ ಮಾಜಿ ಭದ್ರತಾ ಸಿಬ್ಬಂದಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಸ್ಫೋಟ ಪ್ರಕರಣ
ಪಶ್ಚಿಮಬಂಗಾಳದಲ್ಲಿ ಸ್ಫೋಟ ಪ್ರಕರಣ
author img

By ETV Bharat Karnataka Team

Published : Aug 29, 2023, 8:58 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಹಿಂದಷ್ಟೇ ಪಟಾಕಿ ತಯಾರಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಮಂದಿ ಸಾವಿಗೀಡಾಗಿದ್ದರು. ರಾಜ್ಯದಲ್ಲಿ ಪದೇ ಪದೇ ಇಂತಹ ದುರಂತಗಳು ಸಂಭವಿಸುತ್ತಿದ್ದರೂ ಸರ್ಕಾರ ಮಾತ್ರ ಬಿಗಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್​ಎಸ್​ಜಿ) ಮಾಜಿ ಕಮಾಂಡರ್​ವೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿಯೇ ಪಶ್ಚಿಮಬಂಗಾಳದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟ ಘಟನೆಗಳು ಸಂಭವಿಸಿದೆ. ಇದರಿಂದಾಗುವ ಸಾವಿನಲ್ಲೂ ರಾಜ್ಯವೇ ಮುಂದಿದೆ. ಇದು ಇಲ್ಲಿನ ಭದ್ರತಾ ಅವ್ಯವಸ್ಥೆ ತೋರಿಸುತ್ತದೆ. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಕ್ಕೆ ಒಳನುಸುಳುಕೋರರ ಸಮಸ್ಯೆ ಹೆಚ್ಚಾಗಿದೆ. ಇದೇ ಮೊದಲ ಸಮಸ್ಯೆಯಾಗಿದೆ ಎಂದು ಎನ್​ಎಸ್​ಜಿ ಉನ್ನತ ದರ್ಜೆಯ ಮಾಜಿ ಭದ್ರತಾ ಅಧಿಕಾರಿ ದೀಪಾಂಜನ್​ ಚಕ್ರವರ್ತಿ ಅಭಿಪ್ರಾಯಪಟ್ಟರು.

ಬಾಂಗ್ಲಾ ಒಳನುಸುಳುವಿಕೆ ಕಾರಣ: ಬಾಂಗ್ಲಾದೇಶದಿಂದ ಒಳನುಸುಳುವಿಕೆ ಪಶ್ಚಿಮ ಬಂಗಾಳದಲ್ಲಿ ಜ್ವಲಂತ ಸಮಸ್ಯೆಯಾಗಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದಕ್ಕೆ ಪ್ರಮುಖ ಕಾರಣವಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಈ ಬಗ್ಗೆ ಕಣ್ಣು ಮುಚ್ಚಿ ಕೂತಿದೆ ಎಂದು ಬಿಜೆಪಿ ಆಗಾಗ್ಗೆ ಆರೋಪಿಸುತ್ತದೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಸ್ಫೋಟಗಳು ಮತ್ತು ಅದರ ಸಾವಿನ ಲೆಕ್ಕವನ್ನು ಗುಣಿಸಿದಲ್ಲಿ, ಬಂಗಾಳವು ಗರಿಷ್ಠ ಸಂಖ್ಯೆಯ ಅನಾಹುತಗಳು ಮತ್ತು ಸಾವುಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ನಾನು ಕಳೆದ 35 ವರ್ಷಗಳಿಂದ ಹಲವಾರು ಏಜೆನ್ಸಿಗಳೊಂದಿಗೆ ಕೆಲಸ ಮಾಡಿದ್ದೇನೆ. ನನ್ನ ಅನುಭವದ ಮೇಲೆ ಹೇಳುವುದಾದರೆ, ಪಶ್ಚಿಮ ಬಂಗಾಳವು ಅತ್ಯಂತ ದುರ್ಬಲವಾದ ಭದ್ರತಾ ವ್ಯವಸ್ಥೆ ಹೊಂದಿದೆ ಎಂದು ದೀಪಾಂಜನ್ ಚಕ್ರವರ್ತಿ 'ಈವಿಟಿ ಭಾರತ್‌'ಗೆ ತಿಳಿಸಿದರು.

ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆ: ಇಂತಹ ಅವಘಡಗಳು ಹೆಚ್ಚುತ್ತಿದ್ದರೂ, ಪೊಲೀಸರು ಮತ್ತು ಸರ್ಕಾರ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನೈಹಟಿಯ ಎಗ್ರಾದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಪೊಲೀಸರು ಮತ್ತು ಸರ್ಕಾರವೇ ಹೊಣೆ ಎಂದು ಜನರು ಆರೋಪಿಸಿದ್ದಾರೆ. ಇದೀಗ ದತ್ತಪುಕೂರ್ ಪ್ರದೇಶದಲ್ಲಿ ಅಂಥದ್ದೇ ಘಟನೆ ಸಂಭವಿಸಿದೆ. ಇದು ಅಸಮರ್ಥತೆ ಮಾತ್ರವಲ್ಲದೇ ಇಚ್ಛಾಶಕ್ತಿಯ ಕೊರತೆಯನ್ನೂ ತೋರಿಸುತ್ತದೆ ಎಂದು ಚಕ್ರವರ್ತಿ ಹೇಳಿದರು.

ಅಕ್ರಮ ಪಟಾಕಿ ಕಾರ್ಖಾನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದಾರೆ. ಇವೆಲ್ಲವೂ ಪಶ್ಚಿಮ ಬಂಗಾಳದ ಪೊಲೀಸರ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಇಷ್ಟು ಪಟಾಕಿ ಕಾರ್ಖಾನೆಗಳು ಏಕೆ ಇವೆ?. ಪಟಾಕಿ ಕಾರ್ಖಾನೆ ನಿರ್ಮಾಣಕ್ಕೆ ಕಡ್ಡಾಯ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಉದ್ಯಮಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಕಾರ್ಖಾನೆಗಳನ್ನು ನಡೆಸುತ್ತಿದ್ದು, ಅನಾಹುತಕ್ಕೆ ಕಾರಣವಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 9ಕ್ಕೆ ಏರಿಕೆ.. ಓರ್ವನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.