ರಾಂಚಿ (ಜಾರ್ಖಂಡ್): ವ್ಯಕ್ತಿಯೋರ್ವ ತನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳು ಇರುವ ವಿಷಯ ಮುಚ್ಚಿಟ್ಟು ಮತ್ತೊಂದು ಮದುವೆಗೆ ಸಜ್ಜಾಗಿದ್ದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ. ವರನ ಹಿನ್ನೆಲೆ ತಿಳಿದ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ. ಅಲ್ಲದೇ, ವಂಚಕನ ವಿರುದ್ಧ ಪೊಲೀಸ್ ಕೇಸ್ ದಾಖಲಿಸಲು ಸಹ ಯುವತಿ ನಿರ್ಧರಿಸಿದ್ದಾಳೆ.
ಇಲ್ಲಿನ ಡೊರಾಂಡಾ ಪ್ರದೇಶದ ಯುವತಿಗೆ ಅಸ್ಗರ್ ಖಾನ್ ಎಂಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಮೇ 26ಕ್ಕೆ ಮದುವೆಗೆ ದಿನಾಂಕ ನಿಗದಿಯಾಗಿತ್ತು. ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ವರನ ಬಗ್ಗೆ ಅಸಲಿ ಸತ್ಯ ಗೊತ್ತಾಗಿದೆ. ಅಲ್ಲದೇ, ಈ ಹಿಂದೆ ಜೈಲಿಗೆ ಸೇರಿದ್ದ ಮತ್ತು ಈಗ ಸರ್ಕಾರಿ ನೌಕರ ಎಂದು ಸುಳ್ಳು ಹೇಳಿ ಮೋಸ ಮಾಡಲು ಯತ್ನಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ವೆಬ್ಸೈಟ್ ಮಾಹಿತಿ ನೋಡಿ ಮದುವೆಗೆ ಒಪ್ಪಿಗೆ: ಅಸ್ಗರ್ ಖಾನ್ ತನ್ನ ಸ್ವವಿವರವನ್ನು ಮದುವೆ ವೆಬ್ಸೈಟ್ವೊಂದರಲ್ಲಿ ಹಾಕಿದ್ದ. ಇದನ್ನು ಗಮನಿಸಿದ್ದ ಯುವತಿಯ ಸಹೋದರ ಅಸ್ಗರ್ನನ್ನು ಸಂಪರ್ಕಿಸಿದ್ದರು. ಈ ವೇಳೆ ಜಾರ್ಖಂಡ್ ಸರ್ಕಾರದಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪಂದ್ರಾ ಸೇರಿದಂತೆ ಹಲವೆಡೆ ಸ್ವಂತ ಮನೆಗಳು ಇದೆ ಎಂದು ಹೇಳಿಕೊಂಡಿದ್ದ. ಇದು ನಿಜ ಎಂದು ಮದುವೆಗೆ ನಿಶ್ಚಯಿಸಲಾಗಿತ್ತು.
ಆಸಲಿ ವಿಷಯ ಬಯಲು: ಮದುವೆ ಸಮಾರಂಭ ಹಿನ್ನೆಲೆಯಲ್ಲಿ ಅಂಜುಮನ್ ಇಸ್ಲಾಮಿಯಾ ಪ್ರಧಾನ ಕಾರ್ಯದರ್ಶಿ ಡಾ.ತಾರಿಖ್ ಹುಸೇನ್ ನೇತೃತ್ವದ ತಂಡ ಗುರುವಾರ ಯುವತಿಯ ಮನೆಗೆ ತಲುಪಿದೆ. ಈ ಕುರಿತು ಸ್ಥಳೀಯರು ಹಾಗೂ ಯುವತಿಯ ಕುಟುಂಬದವರಿಂದ ವರನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದಾದ ಬಳಿಕ ಅಸ್ಗರ್ ಖಾಣ್ನ ಪೂರ್ವಪರ ತಿಳಿಯಲು ಅಂಜುಮನ್ ಕಡೆಯವರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮದುವೆ ಮಂಟಪದಿಂದ ಓಡಿ ಹೋದ ಪ್ರಿಯಕರ: 20 ಕಿಮೀ ಬೆನ್ನಟ್ಟಿ ಹಿಡಿದ ಪ್ರಿಯತಮೆ!
ಆಗ ಅಸ್ಗರ್ ಖಾನ್ಗೆ ಈ ಹಿಂದೆಯೇ ಮದುವೆಯಾಗಿರುವುದು ಬಯಲಾಗಿದೆ. ಅಂತೆಯೇ, ಮೊದಲ ಪತ್ನಿ ಹಾಗೂ ಆಕೆಯ ಕುಟುಂಬ ಸೇರಿ ಇತರರನ್ನು ಸಂಪರ್ಕಿಸಿ ಮಾಹಿತಿ ವಿಚಾರಿಸಿದ್ದಾರೆ. ಜೊತೆಗೆ ವಂಚಕ ಮಾದಕ ವ್ಯಸನಿಯಾಗಿದ್ದಾನೆ. ಈ ಹಿಂದೆ ಪತ್ನಿಯನ್ನೂ ಕೊಲ್ಲಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಇದಲ್ಲದೇ ಹಲವು ಪ್ರಕರಣಗಳಲ್ಲಿ ಆರೋಪಿ ಜೈಲು ಸೇರಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಅಲ್ಲಿಂದ ನೇರವಾಗಿ ಮದುವೆ ಆಗಬೇಕಿದ್ದ ಯುವತಿ ಮನೆಗೆ ಬಂದ ಅಂಜುಮನ್ ತಂಡದವರು ಕುಟುಂಬ ಸದಸ್ಯರಿಗೆ ಸಂಪೂರ್ಣವಾಗಿ ಆಸಲಿ ವಿಷಯವನ್ನು ವಿವರಿಸಿದ್ದಾರೆ. ಆಗ ಯುವತಿ ಸಹ ಅಸ್ಗರ್ ಖಾನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದೀಗ ಆರೋಪಿ ವಿರುದ್ಧ ಪ್ರಕರಣ ನಾನು ದಾಖಲಿಸುತ್ತೇನೆ. ಈ ಮೂಲಕ ಬೇರೆ ಯುವತಿಯರು ಜೀವನ ಹಾಳಾಗಬಾರದು ಹಾಗೂ ಮೋಸ ಹೋಗದಂತೆ ತಡೆಯಬೇಕೆಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ: ಹಣವಿಲ್ಲದಿದ್ದರೇನು ವಿಡಿಯೋ ಕಾನ್ಪರೆನ್ಸ್ ಇದೆಯೆಲ್ಲ; ಆನ್ಲೈನ್ನಲ್ಲೇ ನಿಕಾಹ್ ಓದಿ ಭಾರತದ ಹೊಸ್ತಿಲು ತುಳಿದ ವಧು!