ETV Bharat / bharat

ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ ಮುಕ್ತಾಯ: ಶೇ 55.8ರಷ್ಟು ವೋಟಿಂಗ್​​

ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಣದಲ್ಲಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

UP Assembly Election
UP Assembly Election
author img

By

Published : Mar 3, 2022, 9:48 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, 57 ಕ್ಷೇತ್ರಗಳಲ್ಲಿ ಶೇ. 55.8ರಷ್ಟು ವೋಟಿಂಗ್​ ಆಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸ್ಪರ್ಧಿಸಿದ್ದ ಗೋರಖ್​ಪುರ್ ಕ್ಷೇತ್ರ​​ ಸೇರಿದಂತೆ 57 ಕ್ಷೇತ್ರಗಳಿಗೆ ಮತ ಚಲಾವಣೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಸ್ವಾಮಿ ಪ್ರಸಾದ್​ ಮೌರ್ಯ ಸೇರಿದಂತೆ ದಿಗ್ಗಜರು ಮತ್ತು ಕೋಟ್ಯಧಿಪತಿಗಳು ಅಖಾಡದಲ್ಲಿದ್ದರು. ಒಟ್ಟು 2.14 ಕೋಟಿ ಮತದಾರರು ಇಂದು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಿದ್ದು ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಇಂದು ಪ್ರಮುಖವಾಗಿ ಅಂಬೇಡ್ಕರ್​ನಗರ, ಬಲ್ರಾಮ್​ಪುರ್, ಸಿದ್ಧಾರ್ಥನಗರ, ಬಸ್ತಿ, ಶಾಂತಿ ಕಬೀರ್ ನಗರ, ಗೋರಖ್​​ಪುರ್​​​ ಹಾಗು ಕುಶಿನಗರದಲ್ಲಿ ವೋಟಿಂಗ್ ಆಗಿದೆ.

2017ರ ವಿಧಾನಸಭೆ ಚುನಾವಣೆಯ ವೇಳೆ 57 ಕ್ಷೇತ್ರಗಳ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ, ಈ ಸಲದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಚುನಾವಣೆ ಕಣದಲ್ಲಿ 676 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.