ETV Bharat / bharat

ಮಿಜೊರಾಂ, ಛತ್ತೀಸ್‌ಗಢದಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ಆರಂಭ - ಮತದಾನಕ್ಕೆ ಬಹಿಷ್ಕಾರ

Voting for Mizoram, Chhattisgarh Assembly Elections: ಮಿಜೊರಾಂನ 40 ಮತ್ತು ಛತ್ತೀಸ್‌ಗಢದಲ್ಲಿ ಮೊದಲ ಹಂತದ 20 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

Assembly Elections 2023 begins  Voting for Mizoram Chhattisgarh Assembly Elections  Mizoram Chhattisgarh Assembly Elections 2023  ಛತ್ತೀಸ್‌ಗಢದಲ್ಲಿ ಬಿಗಿ ಭದ್ರತೆ ನಡುವೆ ಮತದಾನ ಆರಂಭ  ಕೆಲ ವಾರ್ಡ್​ನಲ್ಲಿ ಚುನಾವಣೆ ಬಹಿಷ್ಕಾರ  ಛತ್ತೀಸ್‌ಗಢದಲ್ಲಿ ಮೊದಲ ಹಂತದ 20 ಸ್ಥಾನಗಳಿಗೆ ಮತದಾನ  20 ಸ್ಥಾನಗಳಲ್ಲಿ 10 ನಕ್ಸಲ್ ಪೀಡಿತ  60 ಸಾವಿರಕ್ಕೂ ಹೆಚ್ಚು ಯೋಧರ ಭದ್ರತೆಯ ನಡುವೆ ಮತದಾನ  ಛತ್ತೀಸ್‌ಗಢದಲ್ಲಿ ಮತದಾನ ಆರಂಭ  ಮತದಾನಕ್ಕೆ ಬಹಿಷ್ಕಾರ  ಮೀಜೊರಾಂನಲ್ಲಿ ಮತದಾನ ಆರಂಭ
ಮೀಜೊರಾಂ, ಛತ್ತೀಸ್‌ಗಢದಲ್ಲಿ ಬಿಗಿ ಭದ್ರತೆ ನಡುವೆ ಮತದಾನ ಆರಂಭ
author img

By ETV Bharat Karnataka Team

Published : Nov 7, 2023, 8:22 AM IST

Updated : Nov 7, 2023, 10:10 AM IST

ಮೀಜೊರಾಂ/ಛತ್ತೀಸ್‌ಗಢ: ಛತ್ತೀಸ್‌ಗಢ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 223 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,304 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 40,78,681 ಮತದಾರರು ಮತದಾನ ಮಾಡುವರು. 19,93,937 ಪುರುಷ ಮತ್ತು 20,84,675 ಮಹಿಳಾ ಮತದಾರರಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ 69 ತೃತೀಯಲಿಂಗಿಗಳೂ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

  • #WATCH | An elderly man leaves after casting his vote for the Chhattisgarh Assembly Elections 2023; voters standing in a queue outside a polling booth in Bhanpuri Assembly Constituency Election to cast their votes. pic.twitter.com/jKPLDWI09i

    — ANI (@ANI) November 7, 2023 " class="align-text-top noRightClick twitterSection" data=" ">

ಈ ಪೈಕಿ 10 ಸ್ಥಾನಗಳು ನಕ್ಸಲ್‌ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿವೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ವೋಟಿಂಗ್ ಮುಂದುವರಿಯುತ್ತದೆ. ಉಳಿದ 10 ಸ್ಥಾನಗಳಲ್ಲಿ ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದ್ದು, ಸಂಜೆ 5ರವರೆಗೆ ನಡೆಯಲಿದೆ. 20 ಸ್ಥಾನಗಳಲ್ಲಿ 25,249 ಮತಗಟ್ಟೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಕ್ಮಾ, ಬಿಜಾಪುರ, ದಾಂತೇವಾಡ, ಕಂಕೇರ್ ಮತ್ತು ನಾರಾಯಣಪುರದ ದೂರದ ಪ್ರದೇಶಗಳಿಗೆ 156 ಮತಗಟ್ಟೆ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಕಳುಹಿಸಲಾಗಿದೆ. 2,431 ಬೂತ್‌ಗಳಲ್ಲಿ ವೆಬ್‌ ಕಾಸ್ಟಿಂಗ್‌ ಮಾಡಲಾಗುತ್ತಿದೆ.

ಅಭ್ಯರ್ಥಿಗಳೆಷ್ಟು?: ಅಂತಗಢ ವಿಧಾನಸಭಾ ಕ್ಷೇತ್ರದಲ್ಲಿ 13, ಭಾನುಪ್ರತಾಪುರದಲ್ಲಿ 14, ಕಂಕೇರ್‌ನಲ್ಲಿ 9, ಕೇಶ್ಕಲ್‌ನಲ್ಲಿ 10, ಕೊಂಡಗಾಂವ್‌ನಲ್ಲಿ 8, ನಾರಾಯಣಪುರದಲ್ಲಿ 9, ಬಸ್ತಾರ್‌ನಲ್ಲಿ 8, ಜಗದಲ್‌ಪುರದಲ್ಲಿ 11, ಚಿತ್ರಕೋಟೆಯಲ್ಲಿ 7, ದಂತೇವಾಡದಲ್ಲಿ 7, 8 ಅಭ್ಯರ್ಥಿಗಳು. ಬಿಜಾಪುರದಲ್ಲಿ 8, ಕೊಂಟಾದಲ್ಲಿ 8, ಖೈರಗಢದಲ್ಲಿ 11, ಡೊಂಗರಗಢದಲ್ಲಿ 10, ರಾಜನಂದಗಾಂವ್‌ನಲ್ಲಿ 29, ಡೊಂಗರಗಾಂವ್‌ನಲ್ಲಿ 12, ಖುಜ್ಜಿಯಲ್ಲಿ 10, ಮೊಹ್ಲಾ-ಮಾನ್‌ಪುರದಲ್ಲಿ 9, ಕವರ್ಧಾದಲ್ಲಿ 16 ಮತ್ತು ಪಂಡರಿಯಾದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತ ಬಹಿಷ್ಕಾರಕ್ಕೆ ಕರೆ: ಛತ್ತೀಸ್‌ಗಢದಲ್ಲಿ ರಾಯ್‌ಪುರದ ನಂತರ ಬಿಲಾಸ್‌ಪುರ್ ದೊಡ್ಡ ನಗರ. ನಗರದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಬೋದ್ರಿ ನಗರ ಪಂಚಾಯತ್‌ನ ಈ ವಾರ್ಡ್ ಹಳ್ಳಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಇಲ್ಲಿನ ಜನರಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಚರಂಡಿಗಳಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲೇ ಇವರ ಓಡಾಟ. ಈ ವಾರ್ಡಿನ ಜನತೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ. ಆದರೆ ಎಲ್ಲರೂ ತಮ್ಮ ಮತ ಚಲಾಯಿಸುವಂತೆ ಈಟಿವಿ ಭಾರತ ತಂಡ ಮನವಿ ಮಾಡಿದೆ.

ಮಿಜೊರಾಂನಲ್ಲಿ ಮತದಾನ: ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬಿಗಿ ಪೊಲೀಸ್ ಭದ್ರತೆಯ ನಡುವೆ 8.57 ಲಕ್ಷಕ್ಕೂ ಹೆಚ್ಚು ಮತದಾರರು 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧರಿಸಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ.

ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ರಾಜ್ಯದ 1,276 ಮತಗಟ್ಟೆಗಳಲ್ಲಿ 8,00,000ಕ್ಕೂ ಹೆಚ್ಚು ಅರ್ಹ ಮತದಾರರು ಮತ ಚಲಾಯಿಸಲಿದ್ದಾರೆ. MNF ಪಕ್ಷ ಅಧಿಕಾರ ಉಳಿಸಿಕೊಳ್ಳಲು ಬಯಸುತ್ತಿದೆ. 2018ರಲ್ಲಿ ಮುಖ್ಯಮಂತ್ರಿ ಝೋರಂತಂಗಾ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) 28 ಸ್ಥಾನಗಳನ್ನು ಗೆದ್ದಿತ್ತು.

  • Mizoram elections | An elderly voter, B Lalrinawma shows his inked finger after casting his vote at a polling booth in Aizawl West 3 constituency. pic.twitter.com/j5NUWzh85k

ಚುನಾವಣೆಯಲ್ಲಿ ಬಿಜೆಪಿ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ಮಿಜೋರಾಂನಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಮೈತೇಯಿ ಸಮುದಾಯವು ಈ ಪ್ರದೇಶ ತೊರೆದಿದೆ. ಅನೇಕರು ಮೇ ನಿಂದ ಜುಲೈ ವರೆಗೆ ಅಸ್ಸೋಂನಲ್ಲಿ ಆಶ್ರಯ ಪಡೆಯುತ್ತಿದ್ದರು. ಅವರಲ್ಲಿ ಅನೇಕರು ಮಿಜೋರಾಂನಲ್ಲಿ ಮತದಾರರಾಗಿದ್ದರೂ ಸಹ ಇಂದು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಛತ್ತೀಸ್​ಗಢ ಚುನಾವಣೆ: ಮೊದಲ ಹಂತದ ಮತದಾನಕ್ಕೆ ಮುನ್ನ ಬಾಂಬ್​ ಸ್ಫೋಟ: ಇಬ್ಬರು ಚುನಾವಣಾಧಿಕಾರಿಗಳು,​ ಯೋಧನಿಗೆ ಗಾಯ

Last Updated : Nov 7, 2023, 10:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.