ETV Bharat / bharat

'ವರುಣ್ ಓರ್ವ​​ ಹೋರಾಟಗಾರ'... ವೀರಪುತ್ರನ ಆರೋಗ್ಯದ ಬಗ್ಗೆ ತಂದೆ ಹೇಳಿದ್ದೇನು!? - ಕ್ಯಾಪ್ಟನ್​ ವರುಣ್​ ಸಿಂಗ್​ ಆರೋಗ್ಯ

ಸೇನಾ ಹೆಲಿಕಾಪ್ಟರ್​ ಪತನದಲ್ಲಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್​ ವರುಣ್​ ಸಿಂಗ್​​ಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಅವರ ತಂದೆ ಮಾತನಾಡಿದ್ದಾರೆ.

Varun Singh father Colonel KP Singh
Varun Singh father Colonel KP Singh
author img

By

Published : Dec 11, 2021, 6:38 PM IST

ಬೆಂಗಳೂರು: ತಮಿಳುನಾಡಿನ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನದಲ್ಲಿ ಪವಾಡ ಸದೃಶ ರೀತಿ ವಾಯುಪಡೆಯ ಗ್ರೂಪ್​​ ಕ್ಯಾಪ್ಟನ್​​ ವರುಣ್​​​ ಸಿಂಗ್​​ ಬದುಕುಳಿದಿದ್ದು, ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಕಮಾಂಡೋ ಚಿಕಿತ್ಸೆ ನೀಡಲಾಗ್ತಿದ್ದು, ಅವರ ಆರೋಗ್ಯದ ಸ್ಥಿತಿ ಗತಿ ಬಗ್ಗೆ ವರುಣ್​​​ ಸಿಂಗ್​​​​ ಅವರ ತಂದೆ ನಿವೃತ್ತ ಕರ್ನಲ್​ ಕೆಪಿ ಸಿಂಗ್ ಮಾತನಾಡಿದ್ದಾರೆ. ಪಿಟಿಐ ಜೊತೆ ಮಾಹಿತಿ ಹಂಚಿಕೊಂಡಿರುವ ಅವರು, ಮಗನ ಆರೋಗ್ಯದಲ್ಲಿ ಅನೇಕ ರೀತಿಯ ಏರಿಳಿತಗಳು ಕಂಡು ಬರುತ್ತಿವೆ. ಪ್ರತಿ ಗಂಟೆಗೂ ವರುಣ್​ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ನುರಿತ ತಜ್ಞ ವೈದ್ಯರಿಂದ ತಪಾಸಣೆ ನಡೆದಿದೆ ಎಂದಿದ್ದಾರೆ.

ಮಗನ ಆರೋಗ್ಯದ ಬಗ್ಗೆ ಇಡೀ ದೇಶದ ಪಾರ್ಥನೆ ಇದೆ. ಅನೇಕರು ವರುಣ್​​​​ ಆರೋಗ್ಯ ವಿಚಾರಿಸಲು ಬರುತ್ತಿದ್ದಾರೆ. ಆತನಿಗೆ ಸಿಕ್ಕಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದರು. ಖಂಡಿತವಾಗಲೂ ಆತ ವಿಜಯಶಾಲಿ ಆಗಿ ಹೊರಬರುತ್ತಾನೆ. ಆತನೊಬ್ಬ ಹೋರಾಟಗಾರ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಗೋವಾದಲ್ಲಿ TMC ಸರ್ಕಾರ ರಚಿಸುವ ಕಸರತ್ತು: ಮಹಿಳೆಯರ ಅಕೌಂಟ್​ಗೆ ತಿಂಗಳಿಗೆ 5 ಸಾವಿರ ರೂ. ನೀಡುವ ಘೋಷಣೆ

ಲಭ್ಯವಾಗಿರುವ ಇತ್ತೀಚಿನ ಮಾಹಿತಿ ಪ್ರಕಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆದರೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸೇನಾ ಹೆಲಿಕಾಪ್ಟರ್​​ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನ ತಮಿಳುನಾಡಿನ ವೆಲ್ಲಿಂಗ್ಟನ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಸುಲೂರು ಏರ್​ಬೇಸ್​ನಿಂದ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈಗಲೂ ಲೈಫ್​ ಸಪೋರ್ಟ್​​ನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ತಮಿಳುನಾಡಿನ ನೀಲಿಗಿರಿಯಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ 14 ಜನರ ಪೈಕಿ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಅವರ ಧರ್ಮಪತ್ನಿ ಸೇರಿದಂತೆ 13 ಜನರು ಹುತಾತ್ಮರಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.