ETV Bharat / bharat

ಮಳೆಗೆ ಕುಸಿದ ಹೆದ್ದಾರಿ: ಯಮುನೋತ್ರಿಯಲ್ಲಿ ಸಿಲುಕಿರುವ 4000ಕ್ಕೂ ಹೆಚ್ಚು ಯಾತ್ರಾರ್ಥಿಗಳು - ಯಮುನೋತ್ರಿಯಲ್ಲಿ ಮಳೆಗೆ ಕುಸಿದ ಹೆದ್ದಾರಿ

ಇನ್ನು ಜಾಂಕಿಚಟ್ಟಿಯಿಂದ ಬಾರ್ಕೋಟ್‌ಗೆ ಪ್ರಯಾಣಿಸುತ್ತಿದ್ದ 1,200 ಯಾತ್ರಿಕರು ಮತ್ತು ಬಾರ್ಕೋಟ್‌ನಿಂದ ಜಾಂಕಿಚಟ್ಟಿಗೆ ಪ್ರಯಾಣಿಸುತ್ತಿದ್ದ 3,000 ಯಾತ್ರಾರ್ಥಿಗಳು ರಸ್ತೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಯಮುನೋತ್ರಿಯಲ್ಲಿ ಮಳೆಗೆ ಕುಸಿದ ಹೆದ್ದಾರಿ
ಯಮುನೋತ್ರಿಯಲ್ಲಿ ಮಳೆಗೆ ಕುಸಿದ ಹೆದ್ದಾರಿ
author img

By

Published : May 19, 2022, 7:45 PM IST

ಉತ್ತರಕಾಶಿ: ಜಿಲ್ಲೆಯ ಯಮುನೋತ್ರಿ ಧಾಮಕ್ಕೆ ತೆರಳುವ ಮಾರ್ಗದಲ್ಲಿ ರಣಚಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಚಾರ್ ಧಾಮ್ ಯಾತ್ರಾರ್ಥಿಗಳ ಸಂಚಾರ ಸ್ಥಗಿತಗೊಂಡಿದೆ. ಯಮುನೋತ್ರಿ ಧಾಮಕ್ಕೆ ಸುಮಾರು 25 ಕಿಮೀ ಅಂತರದ ಈ ಪ್ರದೇಶದಲ್ಲಿ ಈ ಅನಾಹುತ ಸಂಭವಿಸಿದೆ.

ಈ ಭೂಕುಸಿತದಿಂದಾಗಿ ಯಮುನೋತ್ರಿ ಧಾಮ ಯಾತ್ರಾ ಮಾರ್ಗವನ್ನು ದೊಡ್ಡ ವಾಹನಗಳಿಗೆ ನಿರ್ಬಂಧಿಸಲಾಗಿದೆ ಎಂದು ಯಮುನೋತ್ರಿ ಧಾಮ ಯಾತ್ರಾ ಯಾತ್ರಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಸಣ್ಣ ವಾಹನಗಳ ಮಾರ್ಗಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಎನ್‌ಎಚ್ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಉತ್ತರಕಾಶಿ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

  • आवश्यक सूचना
    कृपया यमुनोत्री धाम यात्रा पर आने वाले यात्रीगण/आमजनमानस को सूचित किया जाता है कि यमुनोत्री धाम यात्रा मार्ग राणाचट्टी के पास लैंडस्लाइड होने के कारण बड़े वाहनों के लिए अवरुद्ध हो गया है, छोटे वाहनों के लिए मार्ग सुचारू है।
    मौके पर एन0एच0 की टीम कार्य कर रहे है। pic.twitter.com/SVz2UM9lG8

    — Uttarkashi Police Uttarakhand (@SP_Uttarkashi) May 18, 2022 " class="align-text-top noRightClick twitterSection" data=" ">

ಇನ್ನು ಜಾಂಕಿಚಟ್ಟಿಯಿಂದ ಬಾರ್ಕೋಟ್‌ಗೆ ಪ್ರಯಾಣಿಸುತ್ತಿದ್ದ 1,200 ಯಾತ್ರಿಕರು ಮತ್ತು ಬಾರ್ಕೋಟ್‌ನಿಂದ ಜಾಂಕಿಚಟ್ಟಿಗೆ ಪ್ರಯಾಣಿಸುತ್ತಿದ್ದ 3,000 ಯಾತ್ರಾರ್ಥಿಗಳು ರಸ್ತೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂದು ಸಂಜೆಯವರೆಗೂ ಹೆದ್ದಾರಿ ತೆರೆಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಆಡಳಿತದ ಮೂಲಗಳು ತಿಳಿಸಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ತಂಡವು ಪ್ರಸ್ತುತ ಹಾನಿಗೊಳಗಾದ ಪ್ರದೇಶವನ್ನು ಸರಿಪಡಿಸುವಲ್ಲಿ ತೊಡಗಿದೆ. 24 ದೊಡ್ಡ ಪ್ರವಾಸಿ ಬಸ್‌ಗಳು ಮತ್ತು 17 ಮಿನಿ ಬಸ್‌ಗಳು ಪ್ರಸ್ತುತ ಈ ಮಾರ್ಗದಲ್ಲಿ ಸಿಲುಕಿಕೊಂಡಿವೆ.

ಪವಿತ್ರ ಕ್ಷೇತ್ರಕ್ಕೆ ಭೇಟಿ ನಿಗದಿ: ಹೇಮಕುಂಡ್ ಸಾಹಿಬ್‌ನ ಬಾಗಿಲು ಮೇ 22 ರಂದು ತೆರೆಯುತ್ತಿದ್ದು, ಹೇಮಕುಂಡ್ ಸಾಹಿಬ್ ಪಾದಚಾರಿ ಮಾರ್ಗವು ಬೀದಿ ದೀಪಗಳಿಂದ ಕಂಗೊಳಿಸುತ್ತಿದೆ. ಸರ್ಕಾರ ಮತ್ತು ಗುರುದ್ವಾರ ಶ್ರೀ ಹೇಮಕುಂಡ್ ಮ್ಯಾನೇಜ್‌ಮೆಂಟ್ ಟ್ರಸ್ಟ್ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಿದೆ.

ಪ್ರತಿದಿನ ಸುಮಾರು 5000 ಯಾತ್ರಿಕರು ಗರ್ಭಗುಡಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಮ್ಯಾನೇಜ್‌ಮೆಂಟ್ ಟ್ರಸ್ಟ್ ಉಪಾಧ್ಯಕ್ಷ ನರೇಂದ್ರ ಜೀತ್ ಸಿಂಗ್ ಬಿಂದ್ರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೈ.ವಿ. ರವಿಶಂಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.