ETV Bharat / bharat

ಪ್ರತಾಪ್​​​ ಬಗ್ಗೆ ಏನೂ ಹೇಳದೇ ಅಕ್ಬರ್​ಗೆ ಬಿರುದು ನೀಡಿದ ಇತಿಹಾಸಕಾರರು: ಯೋಗಿ ಅಸಮಾಧಾನ - Ram Mandir

ರಾಜ್ಯದಲ್ಲಿ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರಗಳು ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸಿದವು. ಆದರೆ, ನಮ್ಮ ಸರ್ಕಾರವು ನಿಶದ್ರಜ್, ಮಹಾರಾಜ್ ಸುಹಲ್ದೇವ್, ಮಹಾರಾಣಿ ಲಕ್ಷ್ಮಿಬಾಯಿ, ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ಝಲ್ಕರಿ ಮುಂತಾದ ನಾಯಕರು ಒದಗಿಸಿದ ಅಭಿವೃದ್ಧಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

uttar-pradesh
ಯೋಗಿ ಆದಿತ್ಯನಾಥ್
author img

By

Published : Sep 20, 2021, 10:14 AM IST

ಅಯೋಧ್ಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತಿಹಾಸಕಾರರ ವಿರುದ್ಧ ಆಕ್ರೋಶ ಹೊರಹಾಕಿದ್ದು, ರಾಜ ಮಹಾರಾಣಾ ಪ್ರತಾಪರ ಬಗ್ಗೆ ಏನೂ ಹೇಳದಿದ್ದರೂ ಅಕ್ಬರ್​ನನ್ನು ಮಹಾನ್ ನಾಯಕ ಎಂದು ಬಿಂಬಿಸಿರುವುದಕ್ಕೆ ಆಪ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗ ಮೋರ್ಚಾ (ಸೆಲ್)ದ ಮೂರು ದಿನಗಳ ಕಾರ್ಯಕಾರಿ ಸಮಿತಿಯ ಸಭೆಯ ಸಮಾರೋಪ ದಿನದಂದು ಅವರು ಮಾತನಾಡಿ ಈ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರಗಳು ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸಿದವು. ಆದರೆ, ನಮ್ಮ ಸರ್ಕಾರವು ನಿಶದ್ರಜ್, ಮಹಾರಾಜ್ ಸುಹಲ್ದೇವ್, ಮಹಾರಾಣಿ ಲಕ್ಷ್ಮಿಬಾಯಿ, ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ಝಲ್ಕರಿ ಮುಂತಾದ ನಾಯಕರು ಒದಗಿಸಿದ ಅಭಿವೃದ್ಧಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ಜನರು ತಮ್ಮ ಸಮಾಜಕ್ಕಾಗಿ ಮಾತ್ರವಲ್ಲ ರಾಷ್ಟ್ರಕ್ಕಾಗಿ ಹೋರಾಡಿದವರು. ಒಂದು ಸಮುದಾಯವನ್ನು ಉಪಜಾತಿ ಮತ್ತು ಗುಂಪುಗಳಾಗಿ ವಿಭಜಿಸುವುದು ಯಾವಾಗಲೂ ಅವರ ವಿಘಟನೆಗೆ ಕಾರಣವಾಗಿದೆ ಎಂದು ಯೋಗಿ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಹೊರತು ಸಮುದಾಯಕ್ಕಾಗಿ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಚೀನಾದಂತಹ ನಾಸ್ತಿಕ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕೋವಿಡ್ ಸಮಯದಲ್ಲಿ, ಭಾರತದಲ್ಲಿ ವಿಗ್ರಹವನ್ನು ಮಾಡಬೇಕೆಂದು ನಾವು ನಿರ್ಧರಿಸಿದೆವು. ಇದಕ್ಕಾಗಿ ರಾಜ್ಯದಲ್ಲಿ ಮಾತಿ ಕಲಾ ಮಂಡಳಿಯನ್ನು ರಚಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.