ETV Bharat / bharat

ಮುಂಬೈ ಸ್ಫೋಟದ ರೂವಾರಿ ತಹವ್ವೂರ್ ಹುಸೈನ್ ಗಡಿಪಾರು ಅರ್ಜಿ ಜೂನ್​ 24ಕ್ಕೆ ವಿಚಾರಣೆ - ಅಮೆರಿಕ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ

ತಹವ್ವೂರ್ ಹುಸೈನ್ ರಾಣಾ ಗಡಿಪಾರು ಅರ್ಜಿ ವಿಚಾರಣೆಯನ್ನು ಅಮೆರಿಕದ ಫೆಡರಲ್ ಕೋರ್ಟ್​ ಗುರುವಾರ ನಡೆಸಲಿದ್ದು, ಭಾರತೀಯ ಅಧಿಕಾರಿಗಳು ವಿಚಾರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

US court to hold in-person extradition hearing of Tahawwur Rana on Thursday
ಮುಂಬೈ ಸ್ಫೋಟದ ರೂವಾರಿ ತಹವ್ವೂರ್ ಹುಸೈನ್ ಗಡಿಪಾರು ಅರ್ಜಿ ಜೂನ್​ 24ಕ್ಕೆ ವಿಚಾರಣೆ
author img

By

Published : Jun 22, 2021, 11:59 AM IST

Updated : Jun 22, 2021, 12:06 PM IST

ವಾಷಿಂಗ್ಟನ್(ಅಮೆರಿಕ): 2008ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ ತಹವ್ವೂರ್ ಹುಸೈನ್ ರಾಣಾ ಗಡಿಪಾರು ಅರ್ಜಿ ವಿಚಾರಣೆಯನ್ನು ಅಮೆರಿಕದ ಫೆಡರಲ್ ಕೋರ್ಟ್​ ಗುರುವಾರ ನಡೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿಯೂ ಆಗಿರುವ ತಹವ್ವೂರ್ ರಾಣಾ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದು, ಭಾರತದ ಅಧಿಕಾರಿಗಳ ತಂಡವೊಂದು ವಿಚಾರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾದ 59 ವರ್ಷದ ತಹವ್ವೂರ್ ರಾಣಾನನ್ನು ಲಾಸ್ ಏಂಜಲೀಸ್​ನಲ್ಲಿ 2020ರ ಜೂನ್ 10ರಂದು ಬಂಧಿಸಲಾಗಿತ್ತು. ಈ ವೇಳೆ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.

ಭಾರತ ಸರ್ಕಾರವು ತಹವ್ವೂರ್ ರಾಣಾನನ್ನು ದೇಶ ಭ್ರಷ್ಟ ಎಂದು ಘೋಷಿಸಿದ್ದು, ಅವನನ್ನು ಹಸ್ತಾಂತರ ಮಾಡಬೇಕೆಂದು ಕೆಲವು ವರ್ಷಗಳ ಹಿಂದೆಯೇ ಅಮೆರಿಕಕ್ಕೆ ಮನವಿ ಮಾಡಿತ್ತು. ಮತ್ತೊಂದೆಡೆ ತಹವ್ವೂರ್ ರಾಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಜಾಮೀನು ನೀಡಲು ಅಮೆರಿಕ ಕೋರ್ಟ್ ನಿರಾಕರಿಸಿತ್ತು.

ಇದನ್ನೂ ಓದಿ: ಸಿಂಧಿಯಾ ಕಾರಿಗೆ ಭದ್ರತೆ ನೀಡಲು ವಿಫಲ: 11 ಮಂದಿ ಪೊಲೀಸರು ಅಮಾನತು

ತಹವ್ವೂರ್ ರಾಣಾ ವಿರುದ್ಧ ಯುದ್ಧ ಮಾಡಲು ಪಿತೂರಿ, ಭಯೋತ್ಪಾದನೆ ಕೃತ್ಯ, ಯುದ್ಧ, ಕೊಲೆ ಆರೋಪ ಮತ್ತು ಭಯೋತ್ಪಾದಕ ಕೃತ್ಯದ ಆರೋಪಗಳನ್ನು ಹೊರಿಸಲಾಗಿದ್ದು, ಈ ಪ್ರಕರಣಗಳ ವಿಚಾರಣೆ ಕೂಡಾ ನಡೆಯುತ್ತಿದೆ.

Last Updated : Jun 22, 2021, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.