ETV Bharat / bharat

ಅತ್ಯಾಚಾರ ಸಂತ್ರಸ್ತೆ ತಾಯಿ ಮೇಲೆ ರೇಪ್​ ಮಾಡಿದ ಯುಪಿ ಪೊಲೀಸ್ ಬಂಧನ

author img

By

Published : Aug 30, 2022, 7:04 AM IST

Updated : Aug 30, 2022, 1:00 PM IST

ಮಹಿಳೆ ದೂರಿನಲ್ಲಿ, ಮೌರ್ಯ ತನ್ನ ಮಗಳ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸುತ್ತಿದ್ದು, ಆಗಸ್ಟ್ 28ರಂದು ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್​ಗೆ ಬರ ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿ ಇನ್​ಸ್ಪೆಕ್ಟರ್ ಅನುಪ್ ಮೌರ್ಯ ಅಮಾನತು ಮಾಡಲಾಗಿದೆ.

UP cop held for raping mother of teen survivor
ಅತ್ಯಾಚಾರ ಸಂತ್ರಸ್ತೆ ತಾಯಿ ಮೇಲೆ ಅತ್ಯಾಚಾರವೆಸಗಿದ ಯುಪಿ ಪೊಲೀಸ್ ಬಂಧನ

ಕನೌಜ್(ಉತ್ತರ ಪ್ರದೇಶ): ಕನೌಜ್ ಜಿಲ್ಲೆಯ ಸದರ್ ಪ್ರದೇಶದಲ್ಲಿ ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್‌ನಲ್ಲಿ 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಮೇಲೆ ರೇಪ್​ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಆರೋಪಿ ಇನ್​ಸ್ಪೆಕ್ಟರ್ ಅನುಪ್ ಮೌರ್ಯ ಅವರನ್ನು ಅಮಾನತು ಮಾಡಲಾಗಿದೆ.

ಮಹಿಳೆ ದೂರಿನಲ್ಲಿ, ಮೌರ್ಯ ತನ್ನ ಮಗಳ ಅತ್ಯಾಚಾರ ಪ್ರಕರಣ ನಿರ್ವಹಿಸುತ್ತಿದ್ದು, ಆಗಸ್ಟ್ 28ರಂದು ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ ತನ್ನನ್ನು ಭೇಟಿಯಾಗಲು ಹೇಳಿದ್ದನು. ಅಲ್ಲಿಂದ ತನ್ನ ಕ್ವಾರ್ಟರ್ಸ್‌ಗೆ ಹಿಂಬಾಲಿಸುವಂತೆ ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ, ಬಂಧಿತ ಅಧಿಕಾರಿ ತಾನು ಕೆಲವು ದಾಖಲೆಗಳ ಮೇಲೆ ಸಹಿ ತೆಗೆದುಕೊಳ್ಳಲು ದೂರುದಾರರನ್ನು ತನ್ನ ಕೋಣೆಗೆ ಬರ ಹೇಳಿದ್ದು ಎಂದು ಹೇಳಿದ್ದಾನೆ.

ಪ್ರಾಥಮಿಕವಾಗಿ, ಸಂತ್ರಸ್ತೆಯ ಆರೋಪಗಳು ನಿಜವೆಂದು ಕಂಡು ಬಂದಿದೆ. ಇನ್​ಸ್ಪೆಕ್ಟರ್ ಅನ್ನು ಅಮಾನತುಗೊಳಿಸಿದ್ದು, ಅತ್ಯಾಚಾರ ಎಸಗಿದ್ದಕ್ಕಾಗಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಕನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ. ಘಟನೆಯ ಕುರಿತು ಸರ್ಕಲ್ ಅಧಿಕಾರಿ (ಸದರ್) ಶಿವ ಪ್ರತಾಪ್ ಸಿಂಗ್ ಪ್ರಾಥಮಿಕ ತನಿಖೆ ನಡೆಸಿದ್ದು, ಮೌರ್ಯ ಅವರು ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.

ಇದನ್ನೂ ಓದಿ : ಮುರುಘಾಮಠದ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

Last Updated : Aug 30, 2022, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.