ETV Bharat / bharat

ಅನಾಥ ಮಕ್ಕಳ ಬಳಿಕ ಕೋವಿಡ್​ನಿಂದ ವಿಧವೆಯಾದವರಿಗೆ ಪರಿಹಾರ ಘೋಷಿಸಿದ CM

ಕೋವಿಡ್​ನಿಂದ ಮೃತಪಡುವ ಪತ್ರಕರ್ತರ ಕುಟುಂಬಕ್ಕೆ, ಪೋಷಕರನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳಿಗೆ ನೆರವು ನೀಡುವುದಾಗಿ ಘೋಷಿಸಿದ್ದ ಉತ್ತರ ಪ್ರದೇಶ ಸರ್ಕಾರ ಇದೀಗ ವೈರಸ್​ನಿಂದಾಗಿ ಗಂಡಂದಿರನ್ನು ಕಳೆದುಕೊಂಡವರಿಗೂ ನೆರವು ನೀಡುವ ಘೋಷಣೆ ಮಾಡಿದೆ.

UP CM Yogi announces relief for Covid widows
ಯೋಗಿ ಆದಿತ್ಯನಾಥ್
author img

By

Published : Jul 1, 2021, 1:47 PM IST

ಲಖನೌ (ಉತ್ತರ ಪ್ರದೇಶ): ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವ ಬೆನ್ನಲ್ಲೇ ಸಾಲು ಸಾಲು ಪರಿಹಾರ ಯೋಜನೆಗಳನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಘೋಷಿಸುತ್ತಿದೆ. ಇದೀಗ ಕೊರೊನಾದಿಂದ ಗಂಡಂದಿರನ್ನು ಕಳೆದುಕೊಂಡು ವಿಧವೆಯಾದ ರಾಜ್ಯದ ಮಹಿಳೆಯರಿಗೆ ನೆರವು ನೀಡಲು ಯುಪಿ​ ಸರ್ಕಾರ ಮುಂದಾಗಿದೆ.

ಈ ಪರಿಹಾರವು ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಹಾಯ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯದ ಎಲ್ಲ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ವಿಧವೆಯರ ಸಮಸ್ಯೆ ಆಲಿಸಿ, ಪಿಂಚಣಿ ಸೇರಿದಂತೆ ಅಗತ್ಯ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚಿಸಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಯೋಜನೆಗಳನ್ನು ರೂಪಿಸಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: Bihar Politics: ಅಮಿತ್ ಶಾ ಭೇಟಿಯಾದ ಜೀತನ್ ರಾಮ್​ ಮಾಂಜಿ!

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನಾರಚನೆ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಿಎಂ ಬದಲಾವಣೆಯಾಗಬೇಕೆಂಬ ಕೂಗೂ ಕೇಳಿ ಬಂದಿತ್ತು. ಅಲ್ಲದೇ ಕೋವಿಡ್​ ಅಸಮರ್ಪಕ ನಿರ್ವಹಣೆ ವಿಚಾರವಾಗಿ ಹಾಗೂ ಗಂಗೆಯಲ್ಲಿ ಹೆಣಗಳು ತೇಲಿಬಂದು ಸರ್ಕಾರವನ್ನು ಟೀಕಿಸಲಾಗಿತ್ತು.

ಈ ಬಳಿಕ ಎಚ್ಚೆತ್ತುಕೊಂಡ ಸಿಎಂ ಯೋಗಿ, ಕೋವಿಡ್​ನಿಂದ ಮೃತಪಡುವ ಪತ್ರಕರ್ತರ ಕುಟುಂಬಕ್ಕೆ, ಪೋಷಕರನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳಿಗೆ ನೆರವು ನೀಡುವುದಾಗಿ ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.