ETV Bharat / bharat

ಗ್ಯಾಂಗ್​ಸ್ಟರ್​​ ಅತೀಕ್ ಪುತ್ರನ ಎನ್‌ಕೌಂಟರ್‌: ಸಿಎಂ ಯೋಗಿಗೆ ಉಮೇಶ್ ಪಾಲ್ ಕುಟುಂಬದ ಧನ್ಯವಾದ - ಗ್ಯಾಂಗ್​ಸ್ಟರ್​​ ಅತೀಕ್ ಅಹ್ಮದ್

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಅಸದ್ ಮತ್ತು ಶೂಟರ್​​ ಗುಲಾಮ್​ನನ್ನು ಉತ್ತರ ಪ್ರದೇಶದ ಪೊಲೀಸರು ಇಂದು ಎನ್​ಕೌಂಟರ್​ ಮಾಡಿದ್ದಾರೆ.

UP CM holds key meeting
ಸಿಎಂ ಯೋಗಿ ಧನ್ಯವಾದ ತಿಳಿಸಿದ ಉಮೇಶ್ ಪಾಲ್ ಕುಟುಂಬ
author img

By

Published : Apr 13, 2023, 4:28 PM IST

ಲಖನೌ (ಉತ್ತರ ಪ್ರದೇಶ): ರಾಜಕಾರಣಿ, ಗ್ಯಾಂಗ್​ಸ್ಟರ್​​ ಅತೀಕ್ ಅಹ್ಮದ್ ಪುತ್ರ ಅಸದ್ ಎಂಬಾತನ ಪೊಲೀಸ್ ಎನ್​ಕೌಂಟರ್​ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ. ಇದೇ ವೇಳೆ ಶೂಟೌಟ್‌ನಲ್ಲಿ ಭಾಗಿಯಾಗಿರುವ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡವನ್ನು ಸಿಎಂ ಶ್ಲಾಘಿಸಿದರು.

ಪ್ರಯಾಗ್‌ರಾಜ್‌ನ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಅಸದ್ ಮತ್ತು ಶೂಟರ್​​ ಗುಲಾಮ್ ಇಂದು ಬೆಳಗ್ಗೆ ಝಾನ್ಸಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು ಹೊಡೆದುರುಳಿಸಿದ್ದರು ಈ ಬಗ್ಗೆ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಂದ ಸಿಎಂ ಯೋಗಿ ಮಾಹಿತಿ ಪಡೆದರು. ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಿದರು. ಎಸ್‌ಟಿಎಫ್​ ಇಡೀ ತಂಡದ ಕುರಿತ ಯೋಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್‌ಕೌಂಟರ್ ಕುರಿತ ಸಂಪೂರ್ಣ ವರದಿಯನ್ನು ಸಿಎಂಗೆ ಪೊಲೀಸ್​ ತಂಡ ಸಲ್ಲಿಸಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಇದೇ ವೇಳೆ ಉಪ ಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ ಸಹ ಎಸ್‌ಟಿಎಫ್​ ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

ಸಿಎಂಗೆ ಧನ್ಯವಾದ ತಿಳಿಸಿ ಉಮೇಶ್ ಪಾಲ್ ಕುಟುಂಬ: ಅತೀಕ್ ಅಹ್ಮದ್ ಪುತ್ರ ಅಸದ್ ಎನ್​ಕೌಂಟರ್​ನಲ್ಲಿ ಹತನಾದ ವಿಷಯ ತಿಳಿಯುತ್ತಿದ್ದಂತೆ ವಕೀಲ ಉಮೇಶ್ ಪಾಲ್ ಕುಟುಂಬದ ಸಿಎಂ ಯೋಗಿ ಅವರಿಗೆ ಧನ್ಯವಾದ ತಿಳಿಸಿದೆ. ಇದು ನನ್ನ ನನಗೆ ಮಗನಿಗೆ ಸಲ್ಲಿಸಿದ ಗೌರವವಾಗಿದೆ. ನ್ಯಾಯ ಒದಗಿಸಿರುವುದಕ್ಕೆ ಸಿಎಂ ಯೋಗಿ ಅವರಿಗೆ ಧನ್ಯವಾದ ತಿಳಿಸುತ್ತವೆ. ಮುಂದೆ ಕೂಡ ಹೀಗೆ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ. ಸಿಎಂ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ತಾಯಿ ಶಾಂತಿದೇವಿ ತಿಳಿಸಿದರು.

ದೊಡ್ಡ ಯಶಸ್ಸೆಂದ ಎಡಿಜಿ: ಎನ್​ಕೌಂಟರ್​ ಬಗ್ಗೆ ವಿಶೇಷ ಕಾರ್ಯಪಡೆಯ ಅಮಿತಾಭ್​ ಯಶ್ ಪ್ರತಿಕ್ರಿಯಿಸಿದ್ದು, ಉಮೇಶ್ ಪಾಲ್ ಹತ್ಯೆಯ ಪ್ರಮುಖ ಶೂಟರ್‌ಗಳಾದ ಅಸದ್ ಮತ್ತು ಗುಲಾಮ್​ನನ್ನು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಇದೊಂದು ಪ್ರಮುಖ ಮತ್ತು ಸವಾಲಿನ ಪ್ರಕರಣವಾಗಿತ್ತು. ಈ ಇಬ್ಬರು ಕ್ರಿಮಿನಲ್‌ಗಳ ಹತ್ಯೆಯು ಒಂದು ದೊಡ್ಡ ಯಶಸ್ಸು. ಎನ್‌ಕೌಂಟರ್​ಗೂ ಮುನ್ನ ಕ್ರಿಮಿನಲ್‌ಗಳ ಬಳಿ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿವೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು ಎಂದು ಹೇಳಿದರು.

ಉಮೇಶ್ ಪಾಲ್​ಗೆ ಗುಂಡಿಕ್ಕಿದ್ದ ಅಸದ್: 2005ರ ಜನವರಿ 25ರಂದು ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ನಡೆದಿತ್ತು. ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ವಕೀಲ ಉಮೇಶ್​ ಪಾಲ್ ಆಗಿದ್ದರು. 2023ರ ಫೆಬ್ರುವರಿ​ 24ರಂದು ಉಮೇಶ್​ ಪಾಲ್ ಅವರನ್ನೂ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಧೂಮಂಗಂಜ್‌ನಲ್ಲಿ ಉಮೇಶ್ ಪಾಲ್‌ ಮೇಲೆ ಅಸಾದ್ ಗುಂಡಿನ ದಾಳಿ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂದು ಝಾನ್ಸಿಯಲ್ಲಿ ಪೊಲೀಸ್ ಕಾರ್ಯಾಚರಣೆ ವೇಳೆ ಅಸದ್ ಮತ್ತು ಶೂಟರ್​ ಗುಲಾಮ್‌ ಇಬ್ಬರಿಗೂ ಶರಣಾಗುವಂತೆ ಪೊಲೀಸ್ ತಂಡ ಸೂಚಿಸಿತ್ತು. ಆದರೆ, ಪೊಲೀಸರ ಮೇಲೆ ಆರೋಪಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ನಮ್ಮ ಪೊಲೀಸ್​ ತಂಡವು ಪ್ರತಿದಾಳಿ ನಡೆಸಬೇಕಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

2005-06 ಸಾಲಿನಲ್ಲಿ ರಾಜು ಪಾಲ್‌ ಹತ್ಯೆ ಪ್ರಕರಣದಿಂದ ಹಿಂದೆ ಸರಿಯುವಂತೆ ಉಮೇಶ್​ ಪಾಲ್​ಗೆ ಗ್ಯಾಂಗ್​ಸ್ಟರ್​​ ಅತೀಕ್ ಅಹ್ಮದ್​ ಬೆದರಿಕೆಯಾಗಿದ್ದ. ಇದಕ್ಕೊಪ್ಪದ ಕಾರಣಕ್ಕೆ ಉಮೇಶ್​ ಪಾಲ್​​ರನ್ನು 2006ರ ಫೆಬ್ರವರಿ 28ರಂದು ಅಪಹರಣ ಮಾಡಲಾಗಿತ್ತು. ಪ್ರಕರಣದಲ್ಲಿ ಇದೇ ಮಾರ್ಚ್​ 28ರಂದು ಅತೀಕ್​ ಅಹ್ಮದ್​ ಸೇರಿದಂತೆ ಮೂವರಿಗೆ ಪ್ರಯಾಗ್‌ರಾಜ್‌ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಇದನ್ನೂ ಓದಿ: ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.