ETV Bharat / bharat

ಕಪಿಚೇಷ್ಟೆಗೆ ಹಾರಿ ಹೋಯ್ತು ಹಸುಳೆ ಪ್ರಾಣ..ಮಗು ಎತ್ತೊಯ್ದು ಟೆರೇಸ್​ನಿಂದ ಬಿಸಾಡಿದ ವಾನರಸೇನೆ - ಕೆಲ ಭಾಗಗಳಲ್ಲಿ ಹೆಚ್ಚುತ್ತಲೇ ಇದೆ ಮಂಗಗಳ ಹಾವಳಿ

ಉತ್ತರಪ್ರದೇಶದ ಬಂಡಾ ಜಿಲ್ಲೆಯಲ್ಲಿ ಕಪಿಚೇಷ್ಟೆಗೆ ಮಗುವೊಂದು ಹತವಾಗಿದೆ. ಮಲಗಿದ್ದ ಮಗುವನ್ನು ಮನೆಯ ಟೆರೇಸ್​ ಮೇಲೆ ಹೊತ್ತೊಯ್ದು ಬಿಸಾಡಿದ್ದರಿಂದ ಪುಟ್ಟ ಕಂದಮ್ಮ ಜೀವ ಕಳೆದುಕೊಂಡಿದೆ.

monkeys throw infant from terrace
ಕಪಿಚೇಷ್ಟೆಗೆ ಹಾರಿ ಹೋಯ್ತು ಹಸುಳೆ ಪ್ರಾಣ
author img

By

Published : Jan 5, 2023, 12:20 PM IST

ಬಂಡಾ(ಉತ್ತರಪ್ರದೇಶ): ಮಂಗನಾಟಕ್ಕೆ ಹಸುಳೆಯೊಂದು ದಾರುಣವಾಗಿ ಪ್ರಾಣ ಕಳೆದುಕೊಂಡಿದೆ. ಕೋತಿಗಳ ಹಿಂಡು ಮನೆಯಂಗಳದಲ್ಲಿ ಮಲಗಿದ್ದ ಮಗುವನ್ನು ಟೆರೇಸ್​ ಮೇಲೆ ಎತ್ತಿಕೊಂಡು ಹೋಗಿ ಅಲ್ಲಿಂದ ಬಿಸಾಡಿವೆ. ಬಿದ್ದ ರಭಸಕ್ಕೆ 2 ತಿಂಗಳ ಮಗು ಅಲ್ಲಿಯೇ ಸಾವನ್ನಪ್ಪಿದೆ.

ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಚಾಪರ್ ಗ್ರಾಮದಲ್ಲಿ ಈ ದಾರುಣ ನಡೆದಿದೆ. ಕೋತಿಗಳ ಹಿಂಡಿನ ಮಧ್ಯೆ ಕಾದಾಟ ನಡೆಡಿದೆ. ಈ ವೇಳೆ ಮನೆಯಂಗಳದಲ್ಲಿ ಮಲಗಿದ್ದ ಮಗುವನ್ನು ಕಪಿಗಳು ಎತ್ತಿಕೊಂಡು ಹೋಗಿವೆ. ಇದನ್ನು ಕಂಡ ಮನೆಯವರು ರಕ್ಷಣೆಗೆ ಧಾವಿಸಿದಾಗ ಅವುಗಳು ಮನೆಯ ಟೆರೇಸ್​ ಮೇಲೆ ಹತ್ತಿವೆ. ಮಗುವನ್ನು ರಕ್ಷಿಸುವ ಪ್ರಯತ್ನದ ವೇಳೆ ವಾನರ ಸೇನೆ ಹಸುಳೆಯನ್ನು ಅಲ್ಲಿಂದ ಬಿಸಾಡಿವೆ.

ಮನೆಯ ಮೇಲಿಂದ ನೆಲಕ್ಕೆ ಅಪ್ಪಳಿಸಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ತಕ್ಷಣವೇ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಸಾವನ್ನಪ್ಪಿದ್ದಾಗಿ ಘೋಷಿಸಿದರು. ಇದರಿಂದ ಕಪಿಚೇಷ್ಟೆಗೆ ಪುಟ್ಟ ಪ್ರಾಣವೊಂದು ಹಾರಿಹೋಗಿದೆ.

ಈ ಬಗ್ಗೆ ನೋವು ತೋಡಿಕೊಂಡ ಮಗುವಿನ ತಂದೆ, ಊರಿನಲ್ಲಿ ಮಂಗಗಳ ಕಾಟ ವಿಪರೀತವಾಗಿದೆ. ಈಗಾಗಲೇ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಮನೆಯಂಗಳದಲ್ಲಿ ಮಗಲಗಿದ್ದ ಮಗುವನ್ನು ಹೊತ್ತೊಯ್ದ ಬಿಸಾಡಿ ಸಾವಿಗೆ ಕಾರಣವಾಗಿದೆ. ಕಪಿಗಳ ಬಗ್ಗೆ ದೂರು ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದ ಕೆಲ ಭಾಗಗಳಲ್ಲಿ ಹೆಚ್ಚುತ್ತಲೇ ಇದೆ ಮಂಗಗಳ ಹಾವಳಿ: ಇಂತಹ ಹಲವಾರು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗುತ್ತಲೇ ಇವೆ. ಮಂಗಳಗಳ ದಾಳಿಯಿಂದ ಉತ್ತರ ಪ್ರದೇಶದ ಅಲಿಘಡದ ಕಾಲೇಜು ತಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಲು ಕಾವಲುಗಾರರನ್ನೇ ನೇಮಕ ಮಾಡಿವೆ.

ಅಲಿಘಡದ ಕಾಲೇಜುವೊಂದರದಲ್ಲಿ ಹತ್ತಾರು ವಿದ್ಯಾರ್ಥಿಗಳ ಮೇಲೆ ಮಂಗಗಳು ದಾಳಿ ನಡೆಸಿವೆ. ಇವುಗಳಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತೊಂದರೆಯಾಗಿತ್ತು. ಕೋತಿಗಳ ಕಾಟದ ಹಿನ್ನೆಲೆ ಪ್ರಾಂಶುಪಾಲರು ನಗರಸಭೆಗೆ ಪತ್ರ ಬರೆದು ಮಂಗಗಳಿಂದ ರಕ್ಷಣೆ ಕೊಡಿ ಎಂದು ಒತ್ತಾಯಿಸಿದ ಪ್ರಕರಣವೂ ನಡೆದಿದೆ. ಕಳೆದ ಐದಾರು ತಿಂಗಳ ಹಿಂದೆ ಧರ್ಮ ಸಮಾಜ ಕಾಲೇಜಿನ ಹತ್ತಾರು ವಿದ್ಯಾರ್ಥಿಗಳ ಮೇಲೆ ಕೋತಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಇದರಿಂದಾಗಿ ಅಲ್ಲಿನ ಪ್ರಾಂಶುಪಾಲರು ಮಂಗಗಳನ್ನು ಓಡಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದರು. ಹತ್ತಾರು ಸಾವಿರ ರೂ ಖರ್ಚು ಮಾಡಿ ಕಾಲೇಜು ಆವರಣದಲ್ಲಿ 10 ಸ್ಥಳಗಳಲ್ಲಿ ಲಾಂಗುರ್​ಗಳ ಛಾಯಾಚಿತ್ರಗಳನ್ನು ಅಳವಡಿಸಿ ಮಂಗಗಳ ಹಾವಳಿ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು.

ಕೋತಿಗಳ ಕಾಟ ತಪ್ಪಿಸಲು ಲಾಂಗುರ್​​​​​​​​​​​​​ ನೇಮಕ: ಕಾಲೇಜಿನಲ್ಲಿ ಲಾಂಗುರ್ ಕೂಡ ಇಡಲಾಗಿದೆ. ಲಾಂಗುರ್ ಮಾಲೀಕನಿಗೆ ತಿಂಗಳಿಗೆ ಒಂಬತ್ತು ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿದೆ. ಆಗ್ರಾದ ಕಾಲೇಜಿನಲ್ಲಿ ಲಾಂಗುರ್‌ಗಳ ಛಾಯಾಚಿತ್ರಗಳನ್ನು ಹಾಕಲಾಗಿತ್ತು.

ಓದಿ: 1,500 ರೂ.ಗಾಗಿ ಚಿಕಿತ್ಸೆ ನೀಡದ ವೈದ್ಯರು, ಗರ್ಭಿಣಿ ಸಾವು: ಅಂತ್ಯಸಂಸ್ಕಾರಕ್ಕೆ ₹3 ಸಾವಿರ ಕೊಟ್ಟ ಮುಖಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.