ETV Bharat / bharat

ವಿಕೃತ ಕಾಮಿಯ ಅಸ್ವಾಭಾವಿಕ ಲೈಂಗಿಕತೆಗೆ ಇಬ್ಬರು ಬಾಲಕರು ಬಲಿ! - ಕ್ರೂರ ಕಾಮುಕ ಗೋಪಿ

ಪ್ರಕರಣದ ಹೆಚ್ಚಿನ ತನಿಖೆ ಮಾಡಿದ ಪೊಲೀಸರಿಗೆ ಕಾಮುಕ ಗೋಪಿ ಎಂಬಾತ ಸಿಕ್ಕಿ ಹಾಕಿಕೊಂಡಿದ್ದಾನೆ. ತಾನು ಹುಡುಗನನ್ನು ಅಪಹರಿಸಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊನೆಗೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

unnatural sex with a boy and brutal murder case chased by police
ವಿಕೃತ ಕಾಮಿಯ ಅಸ್ವಾಭಾವಿಕ ಲೈಂಗಿಕತೆಗೆ ಇಬ್ಬರು ಬಾಲಕರು ಬಲಿ
author img

By

Published : Mar 19, 2021, 9:14 PM IST

Updated : Mar 19, 2021, 11:00 PM IST

ಆಂಧ್ರ ಪ್ರದೇಶ: ತನ್ನ ಅಸ್ವಾಭಾವಿಕ ಲೈಂಗಿಕ ಆಸೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಕ್ರೂರಿಯೋರ್ವ ಮಕ್ಕಳ ಜೀವನವನ್ನೇ ಬಲಿ ತೆಗೆದುಕೊಂಡಿದ್ದಾನೆ.

ಗುಂಟೂರು ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಅಮಾನುಷವಾಗಿ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಗೋಪಿ ಎಂಬುವನನ್ನು ಬಂಧಿಸಿದ್ದಾರೆ.

ಗುಂಟೂರು ಜಿಲ್ಲೆಯ ಮೆಲ್ಲೆಂಪುಡಿ ಗ್ರಾಮಕ್ಕೆ ಸೇರಿದ ಬಾಲಕ ನಾಪತ್ತೆಯಾಗಿದ್ದ. ಈ ಸಂಬಂಧ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಪ್ರಾರಂಭಿಸಿದ್ದರು. ಅಂತಿಮವಾಗಿ ಹುಡುಗನ ಶವ ಪೊದೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಕೊಲೆ ಎಂದು ಶಂಕಿಸಲಾಗಿತ್ತು.

ವಿಕೃತ ಕಾಮಿಯ ಅಸ್ವಾಭಾವಿಕ ಲೈಂಗಿಕತೆಗೆ ಇಬ್ಬರು ಬಾಲಕರು ಬಲಿ

ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿದ ಪೊಲೀಸರಿಗೆ ಗೋಪಿ ಸಿಕ್ಕಿಹಾಕಿಕೊಂಡಿದ್ದಾನೆ. ತಾನು ಹುಡುಗನನ್ನು ಅಪಹರಿಸಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊನೆಗೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅದೇ ರೀತಿ ಆರೋಪಿ ನವೆಂಬರ್ 11 ರಂದು ವಡೇಶ್ವರಂನಲ್ಲಿ ಕಾಣೆಯಾದ ಬಾಲಕನನ್ನು ಕೂಡ ಕೊಂದು ಆತನ ಮೃತದೇಹವನ್ನು ಕಾಲುವೆಯಲ್ಲಿ ಎಸೆದಿದ್ದ ಎನ್ನಲಾಗಿದೆ.

ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗುವುದು. ಆರೋಪಿ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗುವುದು ಮತ್ತು ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸುವ ಮೂಲಕ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಸ್​ಪಿ ಅಮ್ಮಿರೆಡ್ಡಿ ಮಾಹಿತಿ ನೀಡಿದ್ದಾರೆ.

Last Updated : Mar 19, 2021, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.