ಬೆಂಗಳೂರು: ಜಾಗತಿಕ ಆರ್ಥಿಕ ಕುಸಿತದ ಭೀತಿ ಉದ್ಯೋಗಿಗಳಲ್ಲಿ ಅಭದ್ರತೆ ಭಾವ ಮೂಡಿಸಿದೆ. ಜಾಗತಿಕ ಆರ್ಥಿಕ ಪ್ರಗತಿ ಕುಂಠಿತದಿಂದ ಮುಂದಿನ ದಿನಗಳಲ್ಲಿ ಐಟಿ ಕಂಪನಿಗಳಲ್ಲಿ ಹಿಂಜರಿತ ಕಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೈತ್ಯ ಟೆಕ್ ಕಂಪನಿಗಳಾದ ಟ್ವಿಟರ್, ಫೇಸ್ಬುಕ್ ತಮ್ಮ ನೌಕರರ ವಜಾಗೆ ಮುಂದಾಗಿವೆ. ಈ ಸಾಲಿಗೆ ಈಗ ಬೆಂಗಳೂರಿನ ಮೂಲದ ಸ್ಟಾರ್ಟ್ ಅಪ್ ಕಂಪನಿ ಕೂಡ ಸೇರ್ಪಡೆಯಾಗಿದೆ. ಪ್ರಮುಖ ಎಜುಟೆಕ್ ಸಂಸ್ಥೆಯಾಗಿರುವ ಅನ್‌ಅಕಾಡೆಮಿ ಸೋಮವಾರ ತನ್ನ ಸಂಸ್ಥೆಯ ಶೇ 10 ರಷ್ಟು ಅಂದರೆ ಸರಿ ಸುಮಾರು 350 ಉದ್ಯೋಗಿಗಳನ್ನು ವಜಾ ಮಾಡಿದೆ.
ಈ ಸಂಬಂಧ ಸಂಸ್ಥೆಯ ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಗೌರವ್ ಮುಂಜಲ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಸಂಸ್ಥೆಯ ಶೇ 10ರಷ್ಟು ಉದ್ಯೋಗಿಗಳು ಇದರ ಪರಿಣಾಮ ಎದುರಿಸುತ್ತಿದ್ದಾರೆ. ಅದರಲ್ಲಿ ನೀವು ಒಬ್ಬರು. ಈ ಸಂಬಂಧ ಮುಂದಿನ 48 ಗಂಟೆಗಳೊಳಗೆ ನೀವು ಎಚ್ಆರ್ ಕಡೆಯಿಂದ ವಿವರವಾದ ಮಾಹಿತಿ ಪಡೆಯುತ್ತೀರಾ ಎಂದ ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ಅನ್‌ಅಕಾಡೆಮಿ ಸಿಇಒ, ಪರಿಸ್ಥಿತಿ ಸಾಕಷ್ಟು ಹದಗೆಡುತ್ತಿದೆ. ಈ ಬಗ್ಗೆ ಅರಿತು ಕೆಲವು ಕ್ರಮ ಕೈಗೊಂಡರೂ ಅದು ಸಾಧ್ಯವಾಗಲಿಲ್ಲ. ನಮ್ಮ ಖರ್ಚು ವೆಚ್ಚ ನಿಯಂತ್ರಣ, ಮಾರ್ಕೆಟಿಂಗ್ ಬಜೆಟ್ ಸೀಮಿತಕ್ಕೆ ಕ್ರಮ ಸೇರಿದಂತೆ ಹಲವು ಕಾರ್ಯಕ್ಕೆ ಮುಂದಾದರೂ ಅದು ಸಾಕಾಗಲಿಲ್ಲ.
ಅನ್‌ಅಕಾಡೆಮಿಯ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಗುಡ್ಬೈ ಹೇಳುತ್ತಿರುವುದು ನಿಜಕ್ಕೂ ದುಃಖಕರವಾಗಿದೆ. ಸಂಸ್ಠೆಯ ಗ್ರೂಪ್ನೆಲ್ಲೆಡೆ ಈ ಕಟು ನಿಯಮವನ್ನು ನಾವು ತೆಗೆದುಕೊಳ್ಳಬೇಕಿದೆ ಅಥವಾ ಸಂಪೂರ್ಣವಾಗಿ ಮುಚ್ಚಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಥೆಯ ಉದ್ಯೋಗಿಗಳನ್ನು ವಜಾ ಮಾಡಿದ್ದರಿಂದ ನಾನು ಎಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆದರೆ ಮಾರುಕಟ್ಟೆಯ ಸವಾಲುಗಳು ನಮ್ಮ ನಿರ್ಧಾರಗಳನ್ನು ಮರುಮೌಲ್ಯಮಾಪನ ಮಾಡಲು ಒತ್ತಾಯಿಸಿದೆ ಎಂದರು. ಅನ್ ಅಕಾಡೆಮಿಯ ಫಂಡಿಂಗ್ ಗಮನಾರ್ಹ ಮಟ್ಟದಲ್ಲಿ ಕಡಿತಗೊಂಡಿದೆ. ಅಲ್ಲದೇ, ಸಂಸ್ಥೆಯ ವ್ಯವಹಾರ ಬಹುತೇಕ ಆಫ್ಲೈನ್ನತ್ತ ಹೊರಳಿದೆ.
ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಇದರ ಸಂಪೂರ್ಣ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇವೆ. ಸಂಸ್ಥೆಗೆ ನೀವು ಸಾಕಷ್ಟ ಕೊಡುಗೆ ಯಶಸ್ಸು ನೀಡಿದ್ದೀರ. ಸಂಸ್ಥೆ ಯಾವಗಲೂ ಅದಕ್ಕೆ ಋಣಿಯಾಗಿರುತ್ತದೆ. ಆದರೆ ನಮಗೆ ಬೇರೆ ದಾರಿ ಇರಲಿಲ್ಲ. ಅಲ್ಲದೇ ಇದು ಸಂಪೂರ್ಣವಾಗಿ ಬೇರ್ಪಡುವುದಲ್ಲ ಎಂದಿದ್ದಾರೆ.
ಇದನ್ನೂ ಓದಿ: ಆರ್ಥಿಕ ಹಿಂಜರಿತ: ಸಾಫ್ಟವೇರ್ ನೇಮಕಾತಿ ಶೇ 25 ರಿಂದ 30 ರಷ್ಟು ಕುಸಿತ ಸಾಧ್ಯತೆ!