ETV Bharat / bharat

ಇಂದೋರ್: ಗುಡಿಸಲಿಗೆ ಬೆಂಕಿ ಬಿದ್ದು ಮಲಗಿದ್ದ ಇಬ್ಬರು ಸಹೋದರಿಯರ ಸಜೀವ ದಹನ - ಇಂದೋರ್ ಗುಡಿಸಲಿಗೆ ಬೆಂಕಿ ಬಿದ್ದು ಇಬ್ಬರು ಸಜೀವ ದಹನ

ಮುಸ್ಕಾನ್ ಶ್ರೀ (6) ನಂದು (4) ಎಂಬ ಬಾಲಕಿಯರು ಮೃತರಾಗಿದ್ದಾರೆ. ಅವರ ಕುಟುಂಬ ಇಂದೋರ್‌ನ ರಾಜೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೋಯಿತ್ರಮ್ ಮಂಡಿ ಬಳಿಯ ಪ್ರಕಾಶ್ ನಗರದ ಗುಡಿಸಲಿನಲ್ಲಿ ವಾಸಿಸುತ್ತಿತ್ತು. ಕುಟುಂಬವು ಮೂಲತಃ ಬರ್ವಾನಿಯವರು. ಆದರೆ, ಕೆಲಸ ಹುಡುಕಿಕೊಂಡು ಇಂದೋರ್‌ನ ಪ್ರಕಾಶ್ ನಗರಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ.

died childrens
ಮೃತ ಮಕ್ಕಳು
author img

By

Published : Apr 5, 2022, 3:29 PM IST

ಇಂದೋರ್: ಇಲ್ಲಿನ ರಾಜೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಿಸಲಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ರಭಸಕ್ಕೆ ಗುಡಿಸಿಲಿನಲ್ಲಿ ಮಲಗಿದ್ದ ಇಬ್ಬರು ಬಾಲಕಿಯರು ಸಜೀವ ದಹನವಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಘಟನೆಗೆ ಕಾರಣಳಾದ ಮಕ್ಕಳ ಚಿಕ್ಕಮ್ಮ ಕಾಮಿನಿ ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ.

ಗುಡಿಸಲಿಗೆ ಹಠಾತ್ ಬೆಂಕಿ: ಮುಸ್ಕಾನ್ ಶ್ರೀ (6) ನಂದು (4) ಎಂಬ ಬಾಲಕಿಯರು ಮೃತರಾಗಿದ್ದಾರೆ. ಅವರ ಕುಟುಂಬ ಇಂದೋರ್‌ನ ರಾಜೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೋಯಿತ್ರಮ್ ಮಂಡಿ ಬಳಿಯ ಪ್ರಕಾಶ್ ನಗರದ ಗುಡಿಸಲಿನಲ್ಲಿ ವಾಸಿಸುತ್ತಿತ್ತು. ಕುಟುಂಬವು ಮೂಲತಃ ಬರ್ವಾನಿಯವರು. ಆದರೆ, ಕೆಲಸ ಹುಡುಕಿಕೊಂಡು ಇಂದೋರ್‌ನ ಪ್ರಕಾಶ್ ನಗರಕ್ಕೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.

ಅವಘಡ ನಡೆದ ದಿನ ತಡರಾತ್ರಿ ಇದ್ದಕ್ಕಿದ್ದಂತೆ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು ಆ ವೇಳೆ ಮಲಗಿದ್ದ ಇಬ್ಬರು ಪುಟ್ಟ ಮಕ್ಕಳಿಗೆ ಬೆಂಕಿ ತಗುಲಿದೆ. ನಂತರ ಸುಟ್ಟಗಾಯಗಳಿಂದ ನರಳುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಿದರೂ ದುರಾದೃಷ್ಟವಶಾತ್ ಅವರು ಮೃತರಾಗಿದ್ದಾರೆ.

ಘಟನೆ ವೇಳೆ, ಗುಡಿಸಲಿನಲ್ಲಿ ಕಟ್ಟಿಹಾಕಿದ್ದ ಕೆಲವು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ. ಘಟನೆಯ ವಿಷಯ ತಿಳಿದ ತಕ್ಷಣ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಗುಡಿಸಲಿಗೆ ಬೆಂಕಿ ಹಚ್ಚಿರುವುದು ತನಿಖೆಯಿಂದ ತಿಳಿದು ಬಂದಿದೆ. ಚಿಕ್ಕಮ್ಮ ಕಾಮಿನಿಯ ಪ್ರೇಮ ಪ್ರಕರಣ ಕುಟುಂಬಕ್ಕೆ ತಿಳಿದು ಬಂದಿದ್ದರಿಂದ ಆಕೆಯೇ ಗುಡಿಸಲಿಗೆ ಬೆಂಕಿ ಹಚ್ಚಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈಗಾಗಲೇ ಪೊಲೀಸರು ಕಾಮಿನಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಓದಿ: ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.