ರಾಜಸ್ಥಾನದಲ್ಲಿ ಗೋಧಿ ತುಂಬಿದ್ದ ಲಾರಿ ಪಲ್ಟಿ: ನಾಲ್ವರು ಸಾವು - Truck overturned
ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ಮೈರಾ ಘಾಟಾದಲ್ಲಿ ಗೋಧಿ ತುಂಬಿದ ಟ್ರಕ್‌ನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.
ಜೈಪುರ(ರಾಜಸ್ಥಾನ): ಗೋಧಿ ತುಂಬಿದ ಟ್ರಕ್‌ನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ಮೈರಾ ಘಾಟಾದಲ್ಲಿ ಭಾನುವಾರ ನಡೆದಿದೆ.
ಮೈರಾ ಘಾಟಾ ಪ್ರದೇಶದಿಂದ ಗೋಧಿ ತುಂಬಿಕೊಂಡು ಬಂದ ಲಾರಿ ಹೆದ್ದಾರಿಗೆ ಬರುವ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ರತನ್ ಕುಮಾರ್, ಚಿತ್ತೋರಗಢ ಬಿಜೆಪಿ ಶಾಸಕ ಚಂದ್ರಭನ್ ಸಿಂಗ್ ಅಕ್ಯಾ, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಮಾಜಿ ಜಿಲ್ಲಾಧ್ಯಕ್ಷ ಹರ್ಷವರ್ಧನ್ ಸಿಂಗ್ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಒಡಿಶಾ: ಗ್ರಾಮದ ಮೇಲೆ 20ಕ್ಕೂ ಹೆಚ್ಚು ಬಾಂಬ್ ದಾಳಿ, 30 ಮನೆಗಳಿಗೆ ಹಾನಿ