ನವದೆಹಲಿ: ನಿಮ್ಮ ಪ್ರೀತಿಪಾತ್ರರೊಡನೆ ಹಬ್ಬದ ಸೌಂದರ್ಯವನ್ನು ಹೆಚ್ಚಿಸಿ. ಕೋವಿಡ್ನಿಂದ ನಿಮ್ಮನ್ನು - ನಿಮ್ಮವರನ್ನು ರಕ್ಷಿಸಿ. ಹಬ್ಬಗಳು ಬಂದಾಯ್ತು. ಆದರೆ ಮಾಸ್ಕ್ ಧರಿಸುವ, ಆರು ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವ, ಆಗಾಗ್ಗೆ ಕೈ ತೊಳೆಯುವುದು - ಈ ಮೂರು ವಿಚಾರಗಳನ್ನು ಮರೆಯದಿರಿ ಎಂದು ಆರೋಗ್ಯ ಇಲಾಖೆ ಸರಣಿ ಟ್ವೀಟ್ಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 47,638 ಸೋಂಕಿತರು ಪತ್ತೆಯಾಗಿದ್ದು, 670 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 84,11,724 ಹಾಗೂ ಮೃತರ ಸಂಖ್ಯೆ 1,24,985ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.92ಕ್ಕೂ ಹೆಚ್ಚು (77,65,966) ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 5,20,773 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 5ರ ವರೆಗೆ 11,54,29,095 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 12,20,711 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.