ETV Bharat / bharat

ಪ್ರವಾಹ ತಂದ ಸಂಕಟ.. ಇಲ್ಲಿ ಟೊಮೆಟೊ ಕೆಜಿಗೆ 300 ರೂಗೆ ಮಾರಾಟ - ಚಂಡೀಗಢದ ಮಂಡಿಯಲ್ಲಿ ಕೆಜಿಗೆ 200 ರಿಂದ 250 ದರ

ಚಂಡೀಗಢದ ಮಂಡಿಯಲ್ಲಿ ಕೆಜಿಗೆ 200 ರಿಂದ 250 ದರದಲ್ಲಿ ಬಿಕರಿಯಾದರೆ, ಹೊರಗಿನ ಅಂಗಡಿಗಳಲ್ಲಿ ಟೊಮೆಟೊ ಕೆಜಿಗೆ 300ರಿಂದ 400 ರೂ.ಗೆ ಏರಿಕೆಯಾಗಿ ಗ್ರಾಹಕರ ಕೈ ಸುಡುತ್ತಿದೆ. ಗ್ರಾಹಕರು ಕಾಳಧನಿಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪಂಜಾಬ್​ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

tomato
ಟೊಮೆಟೊ
author img

By

Published : Jul 14, 2023, 11:05 PM IST

ಚಂಡೀಗಢ:(ಪಂಜಾಬ್​) ಉತ್ತರ ಭಾರತದ ಪಂಜಾಬ್​ ಸೇರಿ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೆಲ್ಲದರ ನಡುವೆಯೂ ದೇಶಾದ್ಯಂತ ಟೊಮೆಟೊ ಬೆಲೆ ನಿರಂತರ ಏರಿಕೆಯಾಗುತ್ತಿದೆ.

ಕೆಲ ದಿನಗಳ ಹಿಂದೆ ಕೆಜಿಗೆ 30 ರಿಂದ 40 ರೂ ಗೆ ಮಾರಾಟವಾಗುತ್ತಿದ್ದ ಟೊಮೆಟೊ, ಶುಕ್ರವಾರ ಚಂಡೀಗಢದ ಮಂಡಿಯಲ್ಲಿ ಕೆಜಿಗೆ 200 ರಿಂದ 250 ದರದಲ್ಲಿ ಬಿಕರಿಯಾಗಿದೆ. ಆದರೆ ಅಂಗಡಿಗಳಲ್ಲಿ ಟೊಮೆಟೊ ಕೆಜಿಗೆ 300ರಿಂದ 400 ರೂ.ಗೆ ಏರಿಕೆಯಾಗಿ ದಾಖಲೆಯಲ್ಲಿ ಮಾರಾಟವಾಗುತ್ತಿದೆ.

ಚಂಡೀಗಢ ನಗರದಲ್ಲಿ ಗುಣಮಟ್ಟದ ಟೊಮೆಟೊ ಬೆಲೆ 300 ರೂ., ಕಲುಷಿತ ಟೊಮೆಟೊ ಕೆಜಿಗೆ 100-150 ರೂ. ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದನ್ನು ಕಂಡ ತರಕಾರಿ ಖರೀದಿದಾರರು, ಗ್ರಾಹಕರು, ಕಾಳಧನಿಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಚಂಡೀಗಢಕ್ಕೆ ಬರುವ ತರಕಾರಿಗಳು ಹೆಚ್ಚಾಗಿ ಪಂಜಾಬ್, ಹರಿಯಾಣ ಮತ್ತು ಹಿಮಾಚಲದಿಂದ ಬರುತ್ತವೆ. ಹಿಮಾಚಲ ಪ್ರದೇಶದ ತರಕಾರಿಗಳು ಚಂಡೀಗಢದ ಮಂಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದರೆ ಟೊಮೆಟೊ ಮತ್ತು ಈರುಳ್ಳಿಯನ್ನು ನಾಸಿಕ್‌ನಿಂದ ತರಲಾಗುತ್ತದೆ. ಆದರೆ, ನಿರಂತರ ಮಳೆಯಿಂದ ನಾಸಿಕ್‌ನಿಂದ ಬರುತ್ತಿದ್ದ ಪೂರೈಕೆ ಸ್ಥಗಿತಗೊಂಡಿದೆ. ಹರಿಯಾಣ ಮತ್ತು ಪಂಜಾಬ್‌ನ ಬಹುತೇಕ ಪ್ರದೇಶಗಳಲ್ಲಿ ನೀರು ಜಲಾವೃತಗೊಂಡಿದ್ದರಿಂದ ಅನೇಕ ತರಕಾರಿ ಬೆಳೆಗಳು ಹಾನಿಗೊಳಗಾಗಿವೆ. ಸದ್ಯ ಹಾಗಲಕಾಯಿ, ಬೆಂಡೆಕಾಯಿ, ಹಸಿಮೆಣಸಿನಕಾಯಿಯಂತಹ ತರಕಾರಿಗಳು ಹರಿಯಾಣದಿಂದ ಮಾತ್ರ ಬರುತ್ತಿವೆ.ಟೊಮೆಟೊ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಚಂಡೀಗಢದಲ್ಲಿ ಪ್ರತಿ ಕೆಜಿ ಟೊಮೆಟೊಗೆ 300-400: ಸೆಕ್ಟರ್ -26 ರ ಮಾರುಕಟ್ಟೆಯ ತರಕಾರಿ ಅಂಗಡಿ ಮಾಲೀಕ ಮುಖೇಶ್ ಅವರು , ಪ್ರಸ್ತುತ ಹಿಮಾಚಲದ ಸೋಲನ್ ಜಿಲ್ಲೆಯಿಂದ ಟೊಮೆಟೊಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 250 ರಿಂದ 300 ರೂ.ವರೆಗೆ ಬಿಕರಿಯಾಗುತ್ತಿದ್ದರೆ, ಹೊರಗಿನ ಅಂಗಡಿಗಳಲ್ಲಿ ಅದರ ಬೆಲೆ 300ರಿಂದ 400 ರೂ.ವರೆಗೆ ಏರಿಕೆಯಾಗಿದೆ ಎಂದು ಹೇಳುತ್ತಾರೆ.

ಖರೀದಿದಾರರು ಹೇಳುವುದೇನು?: ಸೆಕ್ಟರ್-26ರಲ್ಲಿ ಖರೀದಿಗೆ ಬಂದಿದ್ದ ವ್ಯಾಪಾರಿ ಎನ್.ಸಿಂಗ್ , ಕಳೆದೊಂದು ತಿಂಗಳಲ್ಲಿ ಟೊಮೆಟೊ ಕೆಜಿಗೆ 30 ರಿಂದ 40 ರೂ.ಗೆ ಖರೀದಿಯಾಗುತ್ತಿತ್ತು. ಈಗ ಅದರ ಬೆಲೆ ಕೆಜಿಗೆ 300 ರೂ. ಆಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಸುತ್ತಾಡಿ 150 ರೂಪಾಯಿ ಕೆಳದರ್ಜೆಯ ಟೊಮೆಟೊ ಖರೀದಿಸಿರುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೊಮೆಟೊ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿ ಗ್ರಾಹಕರನ್ನು ಬೆಚ್ಚಿಬೀಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರವಾಹವುಂಟಾದರೆ, ದಕ್ಷಿಣ ರಾಜ್ಯಗಳಲ್ಲಿ ಬರಗಾಲ ಛಾಯೆ ಆವರಿಸಿದರೆ. ಇದರ ನಡುವೆ ಟೊಮೆಟೊ ಬೆಳೆ ಕೊರತೆಯಾಗಿ ಏರಿಕೆ ಗಗನದತ್ತ ಸಾಗುತ್ತಿದೆ.

ಇದನ್ನೂಓದಿ:ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗುತ್ತಿರುವ ಟೊಮೆಟೊ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.