ETV Bharat / bharat

ಮುಂಬೈ: ಸಚಿವಾಲಯದ ಮುಂದೆ ಇಬ್ಬರು ಮಹಿಳೆಯರು, ಓರ್ವ ದಿವ್ಯಾಂಗ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ - ಸಚಿವಾಲಯದ ಮುಂದೆ ಆತ್ಮಹತ್ಯೆಗೆ ಯತ್ನ

ಮುಂಬೈನಲ್ಲಿ ಸಚಿವಾಲಯದ ಮುಂದೆ ಇಬ್ಬರು ಮಹಿಳೆಯರು ಹಾಗೂ ಓರ್ವ ವಿಶೇಷ ಚೇತನ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.

three-attempted-the-suicide-in-front-of-state-ministry-in-mumbai
ಮುಂಬೈನಲ್ಲಿ ಸಚಿವಾಲಯದ ಮುಂದೆ ಇಬ್ಬರು ಮಹಿಳೆಯರು, ಓರ್ವ ಅಂಗವಿಕಲ ಆತ್ಮಹತ್ಯೆಗೆ ಯತ್ನ
author img

By

Published : Mar 29, 2023, 9:09 AM IST

Updated : Mar 29, 2023, 2:45 PM IST

ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಸಚಿವಾಲಯದ ಮುಂದೆ ಮೂವರು ವ್ಯಕ್ತಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಇದರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇಲ್ಲಿನ ಧೂಳೆ ಎಂಐಡಿಸಿ ಪ್ರದೇಶದ ನಿವಾಸಿ ಶೀತಲ್ ಗಡೇಕರ್ (47) ಮೃತಪಟ್ಟಿದ್ದಾರೆ. ಇವರು ಸಚಿವಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿ ಕೀಟನಾಶಕ ಸೇವಿಸಿದ್ದರು. ತಕ್ಷಣವೇ ಸರ್ ಜೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಶೀತಲ್ ಅವರ ಪತಿ ರವೀಂದ್ರ ಗಡೇಕರ್ ಅವರು ಧೂಳೆ ಎಂಐಡಿಸಿ ಪ್ರದೇಶದ ಹೆಸರಿನಲ್ಲಿ 9 ಗುಂಟೆ ಜಾಗ ಹೊಂದಿದ್ದರು. ಈ ಜಾಗವನ್ನು ನರೇಶ್ ಕುಮಾರ್ ಮನೋಜ್​​ ಎಂಬುವವರಿಗೆ ಗುತ್ತಿಗೆ ನೀಡಿದ್ದರು. ಆದರೆ, 2010ರಲ್ಲಿ ಅಂದಿನ ಎಂಐಡಿಸಿ ಅಧಿಕಾರಿಗಳ ಮೂಲಕ ಮನೋಜ್​, ನಕಲಿ ನೋಟರಿ ಮಾಡಿಸಿಕೊಂಡು ತನ್ನ ಹೆಸರಿಗೆ ಜಮೀನು ಮಾಡಿಕೊಂಡು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮೊಹಾದಿ ಪೊಲೀಸ್ ಠಾಣೆಯಲ್ಲಿ ಶೀತಲ್ ಹಲವು ಬಾರಿ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೇ, ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಹತಾಶೆಯಿಂದ ಸಚಿವಾಲಯದ ಎದುರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಪೊಲೀಸರು ಶೀತಲ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮತ್ತೊಬ್ಬ ಮಹಿಳೆಯಿಂದಲೂ ಆತ್ಮಹತ್ಯೆ ಯತ್ನ: ನವಿ ಮುಂಬೈನ ಉಲ್ವೆ ಪ್ರದೇಶದ ಸಂಗೀತಾ ದಾವಾರೆ ಎಂಬುವವರು ಕೂಡ ಸಚಿವಾಲಯದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗೀತಾ ಅವರ ಪತಿ ಹನುಮಂತ್ ದವಾರೆ ನವಿ ಮುಂಬೈ ಪೊಲೀಸ್ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕರ್ತವ್ಯದಲ್ಲಿದ್ದಾಗ ಅಪಘಾತಕ್ಕೀಡಾಗಿದ್ದರು.

ಈ ಅಪಘಾತದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ಫಲಕಾರಿಯಾಗದೆ ಪತಿ ಮೃತಪಟ್ಟಿದ್ದಾರೆ. ಆದರೆ, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಂಗೀತಾ ಆಸ್ಪತ್ರೆಯ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೂ, ನ್ಯಾಯ ಸಿಗುತ್ತಿಲ್ಲ ಎಂದು ಸಂಗೀತಾ ಸಚಿವಾಲಯದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಸಂಗೀತಾಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆತ್ಮಹತ್ಯೆಗೆ ಯತ್ನಿಸಿದ ವಿಶೇಷ ಚೇತನ ವ್ಯಕ್ತಿ: ಇದೇ ವೇಳೆ ಪುಣೆಯ ಮಾವಲ್ ನಿವಾಸಿ, ವಿಶೇಷ ಚೇತನ ವ್ಯಕ್ತಿ ರಮೇಶ್ ಮೋಹಿತೆ (48) ಎಂಬುವವರೂ ಕೂಡ ಸಚಿವಾಲಯದ ಮುಖ್ಯ ದ್ವಾರದ ಆತ್ಮಹತ್ಯೆಗೆ ಯತ್ನಿಸಿದ್ದರು. ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಇದರಿಂದ ಅನಾಹುತ ತಪ್ಪಿದೆ.

ಇದನ್ನೂ ಓದಿ: ಕೋರ್ಟ್​ ಆವರಣದಲ್ಲೇ ಕೊಲೆ ಪ್ರಕರಣದ ಕೈದಿಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ

Last Updated : Mar 29, 2023, 2:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.