ETV Bharat / bharat

'ದಿ ಕೇರಳ ಸ್ಟೋರಿ' ಚಿತ್ರ ತಂಡದ ಸದಸ್ಯನಿಗೆ ಬೆದರಿಕೆ: ಮುಂಬೈ ಪೊಲೀಸರಿಂದ ಭದ್ರತೆ

author img

By

Published : May 9, 2023, 10:50 AM IST

'ದಿ ಕೇರಳ ಸ್ಟೋರಿ' ಚಿತ್ರ ತಂಡದ ಸದಸ್ಯನಿಗೆ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.

The Kerala Story
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್​

ಮುಂಬೈ (ಮಹಾರಾಷ್ಟ್ರ): 'ದಿ ಕೇರಳ ಸ್ಟೋರಿ' ಚಿತ್ರ ತಂಡದ ಸಿಬ್ಬಂದಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 'ದಿ ಕೇರಳ ಸ್ಟೋರಿ' ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಸಿಬ್ಬಂದಿಯೊಬ್ಬರು ಅಪರಿಚಿತ ಸಂಖ್ಯೆಯಿಂದ ಸಂದೇಶ ಸ್ವೀಕರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಹಾಗಾಗಿ, ಸಿಬ್ಬಂದಿಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಲಿಖಿತ ದೂರು ಸ್ವೀಕರಿಸದ ಕಾರಣ ಎಫ್‌ಐಆರ್ ದಾಖಲಿಸಿಲ್ಲ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಮೇ 8 ರಂದು ರಾಜ್ಯದಲ್ಲಿ "ದ್ವೇಷ ಮತ್ತು ಹಿಂಸಾಚಾರ" ದ ಘಟನೆಗಳನ್ನು ತಪ್ಪಿಸಲು ಮತ್ತು ಶಾಂತಿಯ ನಿರ್ವಹಣೆಯನ್ನು ಉಲ್ಲೇಖಿಸಿ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ನಿಷೇಧಿಸಿದೆ. ಪಶ್ಚಿಮ ಬಂಗಾಳ ಈ ಚಲನಚಿತ್ರವನ್ನು ನಿಷೇಧಿಸಿದ ಮೊದಲ ರಾಜ್ಯವಾಗಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದ್ದರೂ ಸಹ ಚಿತ್ರದ ಸುತ್ತ ರಾಜಕೀಯ ಕೂಗು ಮುಂದುವರಿದಿದೆ.

ಇದನ್ನೂ ಓದಿ: ದ್ವೇಷ ಉಂಟುಮಾಡಲು 'ಕೇರಳ ಸ್ಟೋರಿ' ಸಿನಿಮಾ ನಿರ್ಮಾಣ: ಸಿಎಂ ಪಿಣರಾಯಿ ವಿಜಯನ್

ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ, ನಿರ್ಧಾರದ ವಿರುದ್ಧ ಕಾನೂನು ಸಮರ ಮುಂದುವರಿಸುವುದಾಗಿ ಹೇಳಿದ್ದಾರೆ. "ರಾಜ್ಯ ಸರ್ಕಾರ ನಮ್ಮ ಮನವಿ ಕೇಳದಿದ್ದರೆ, ನಾವು ಕಾನೂನು ಮಾರ್ಗಗಳನ್ನು ಅನುಸರಿಸುತ್ತೇವೆ" ಎಂದು ತಿಳಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ ಚಲನಚಿತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಅವರು "ಆರ್‌ಎಸ್‌ಎಸ್ ಪ್ರಚಾರ" ಎಂದು ಕರೆದಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ

ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಾಗಣದಲ್ಲಿ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖರಾಗಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ. ಕೇರಳದಿಂದ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಮತ್ತು ಇವರು ಭಯೋತ್ಪಾದಕ ಗುಂಪು ಐಸಿಸ್‌ಗೆ ಸೇರಿದ್ದಾರೆ ಎಂದು ಚಿತ್ರದ ಟ್ರೇಲರ್​ನಲ್ಲಿ ಹೇಳಲಾಗಿತ್ತು. ಇದರಿಂದ ವಿವಾದ ಎದ್ದಿತ್ತು. ತೀವ್ರ ಟೀಕೆಗಳ ನಂತರ ಅದರ ಸಂಖ್ಯೆಯನ್ನು 3ಕ್ಕೆ ಬದಲಾಯಿಸಲಾಗಿತ್ತು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ ತಮ್ಮ ಮೇಲಿನ ದಾಳಿಯೆಂದು ಭಾವಿಸಿದವರು ಭಯೋತ್ಪಾದಕರು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.