ಮೊಗ (ಪಂಜಾಬ್): ಗುರುದ್ವಾರ ಖಾಲ್ಸಾ ಸಾಹಿಬ್ ರಸ್ತೆಯಲ್ಲಿ ವಾರಿಸ್ ಪಂಜಾಬ್ ಸಂಘಟನೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಮೃತಪಾಲ್ ಸಿಂಗ್ ಅವರಿಗೆ ಪೇಟ ತೊಡಿಸಿ, ಅವರನ್ನು ವಾರಿಸ್ ಪಂಜಾಬ್ ಸಂಘಟನೆಯ ನಾಯಕರನ್ನಾಗಿ ನೇಮಿಸಲಾಯಿತು.
ವಾರಿಸ್ ಪಂಜಾಬ್ ಸಂಘಟನೆ ನಾಯಕ ಅಮೃತಪಾಲ್ ಸಿಂಗ್ ಮೇಲೆ ಹಲವು ಆರೋಪಗಳು ಇದೀಗ ಕೇಳಿ ಬರುತ್ತಿವೆ. ಅವರು ಖಲಿಸ್ತಾನಿ ಬೆಂಬಲಿಗರನ್ನು ಪ್ರಚೋದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನೂ ಈ ಬಗ್ಗೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರನ್ನು ಕೇಳಿದಾಗ ಅವರು, ಅಮೃತಪಾಲ್‌ನಲ್ಲಿ ಏನಾದರೂ ದೋಷವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ. ಅವರು ದೇಶ ವಿರೋಧಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸರ್ಕಾರದ ತನಿಖೆಯಿಂದ ತಿಳಿಯಲಿದೆ ಎಂದರು.
ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತ ಮುಖಂಡರ ಪ್ರತಿಭಟನೆ: ಪಂಜಾಬ್ನಲ್ಲೂ ರೈತರಿಂದ ರಸ್ತೆ ತಡೆ
ದಿವಂಗತ ಪಂಜಾಬಿ ನಟ ದೀಪ್ ಸಿಧು ಅವರ ಕಾಲದಲ್ಲಿ ವಾರಿಸ್ ಪಂಜಾಬ್ ಸಂಘಟನೆ ಹುಟ್ಟಿಕೊಂಡಿತ್ತು. ದೀಪ್ ಸಿಧು ಅವರನ್ನು ಈ ಸಂಘಟನೆಯ ನಾಯಕನನ್ನಾಗಿ ಮಾಡಲಾಗಿದೆ. ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅವರನ್ನು ದೀಪ್ ಸಿಧು ಕೂಡ ಬಹಿರಂಗವಾಗಿ ಬೆಂಬಲಿಸಿದ್ದರು.