ಬಟಿಂಡಾ (ಪಂಜಾಬ್) : ಭಾರತೀಯ ಪ್ರಾಚೀನ ಸಂಸ್ಕೃತಿಯಿಂದ ಇಲ್ಲಿವರೆಗೆ ಸತಾತನ ಧರ್ಮದ ಪ್ರತೀಕ ಗೋವು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಭಾರತದಲ್ಲಿ ಗೋವಿಗೆ ತಾಯಿ ಸ್ಥಾನವನ್ನೂ ನೀಡಲಾಗಿದೆ. ಇಂದು ಗೋವುಗಳ ರಕ್ಷಣೆಗಾಗಿ ದೊಡ್ಡ ಮಟ್ಟದಲ್ಲೇ ಹೋರಾಟ ನಡೆಯುತ್ತಿದ್ದು, ಸರ್ಕಾರ ಕೂಡ ಈ ಹೋರಾಟದ ಬೆನ್ನಿಗೆ ನಿಂತಿದೆ.
ಅದರಂತೆ ಇಲ್ಲೊಂದು ಯಾವುದೇ ಪ್ರತಿಫಲ ಬಯಸದೆ ಗೋ (ಆಸ್ಪತ್ರೆ) ದವಾಖಾನೆಯನ್ನು ತೆರೆದು ಗೋವಿನ ಸಂತತಿಯನ್ನು ನಿರ್ವಹಣೆ ಮಾಡುತ್ತಿದೆ. ಹೌದು, ಅಪಘಾತಕ್ಕೊಳಗಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಎಲ್ಲಾ ಗೋವುಗಳನ್ನು ಆರೈಕೆ ಮಾಡಲು ಗೋ ಸೇವಾ ಸದನದಿಂದ ಪಂಜಾಬ್ನ ಬಟಿಂಡಾ ಜಿಲ್ಲೆಯ ಡಬ್ವಾಲಿ ರಸ್ತೆಯಲ್ಲಿರುವ ಗೋಶಾಲೆಯಲ್ಲಿ ವಿಶೇಷವಾದ ದವಾಖಾನೆ ತೆರೆಯಲಾಗಿದೆ. ಗೋ ಶಾಲೆಯಲ್ಲಿ ಗೋವುಗಳಿಗೆ ವಿಶೇಷ ಔಷಧಾಲಯವನ್ನು ಸ್ಥಾಪಿಸಲಾಗಿದೆ
ಈ ಕುರಿತು ಮಾತನಾಡಿದ ಗೋ ಶಾಲಾ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಾಧು ರಾಮ್ ಖುಸ್ಲಾ, ನಮ್ಮ ಗೋ ಶಾಲೆಯಲ್ಲಿ ನಗರದ ರಸ್ತೆಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಸ್ವಸ್ಥವಾಗಿ ಬಿದ್ದಿರುವ ಹಾಗೂ ಅಪಘಾತಕ್ಕೀಡಾಗಿರುವ ಸುಮಾರು 3,100 ಹಸುಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿ ಪಾಲನೆ ಮಾಡಲಾಗುತ್ತಿದೆ. ವಿಶೇಷವಾಗಿ ಪ್ರಾಣಿ ಕಲ್ಯಾಣ ಮಂಡಳಿ ನೀಡಿದ ನೆರವಿನಿಂದ ಗೋ ಶಾಲೆಯಲ್ಲಿ ಔಷಧಾಲಯ ನಿರ್ಮಿಸಲಾಗಿದ್ದು, ಈ ಮೂಲಕ ಸಂಕಷ್ಟದಲ್ಲಿರುವ ಹಸುಗಳ ಪ್ರಾಣ ಉಳಿಸುವ ಸಲುವಾಗಿ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗೋವುಗಳ ಚಿಕಿತ್ಸೆಗೆ ವಿಶೇಷ ತಂಡ ರಚನೆ : ಸಾವು ನೋವುಗಳ ಮಧ್ಯೆ ಹೋರಾಡುತ್ತಿರುವ ಗೋವುಗಳ ನೆರೆವಿಗೆ ಗೋಶಾಲೆಯಿಂದ ವಿಶೇಷ ತಂಡ ರಚಿಸಲಾಗಿದ್ದು, ಎಲ್ಲಿ ಗೋವುಗಳು ಆನಾರೋಗ್ಯದಿಂದ ಕಂಡು ಬರುತ್ತದೆಯೋ ಆ ಸ್ಥಳದಿಂದ ಆಂಬ್ಯುಲೆನ್ಸ್ ಮೂಲಕ ಈ ದವಾಖಾನೆಗೆ ಕರೆತರುವ ಕೆಲಸ ನಿರ್ವಹಿಸುತ್ತಿದೆ. ಗೋಶಾಲೆಯಿಂದಲೇ ನಿಯೋಜಿತವಾಗಿರುವ ಫಾರ್ಮಸಿಸ್ಟ್ಗಳೇ ಗೋವುಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದಲ್ಲದೇ ಚಳಿಗಾಲದಲ್ಲಿ ದವಾಖಾನೆಗೆ ಚಿಕಿತ್ಸೆಗೆಂದು ಬರುವ ಹಸುಗಳನ್ನು ಚಳಿಯಿಂದ ರಕ್ಷಣೆ ಮಾಡಲು ಕಂಬಳಿ ಹಾಗೂ ಪ್ರತ್ಯೇಕವಾದ ಒಂದು ಕೊಠಡಿಯಲ್ಲಿ ಶಾಖ ಹೆಚ್ಚಿಸಿ ರಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗಾಗಿ ಬೆಲ್ಲ ಮತ್ತು ಸಕ್ಕರೆಯ ದ್ರಾವಣವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಇದಲ್ಲದೇ ನಗರದ ದೇವಸ್ಥಾನಗಳಲ್ಲಿ ಉಳಿದ ರೊಟ್ಟಿಗಳನ್ನು ಸಂಗ್ರಹಿಸಿ ಗೋವುಗಳಿಗೆ ಆಹಾರವಾಗಿ ನೀಡಲಾಗುತ್ತದೆ.
ಸರಕಾರದಿಂದ ನೆರವಿನ ಹಣಕ್ಕಾಗಿ ಆಗ್ರಹ : ಇದಲ್ಲದೇ ಕಾಲಕಾಲಕ್ಕೆ ಬಂದು ಗೋವುಗಳನ್ನು ತಪಾಸಣೆ ಮಾಡಿ ಅವುಗಳ ಯೋಗಕ್ಷೇಮ ನೋಡುತ್ತಿರುವ ವೈದ್ಯರು ನಿರಂತರವಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಕೆಲವೊಂದು ತುರ್ತು ಸಂದರ್ಭಗಳಲ್ಲಿ, ಸರ್ಕಾರಿ ಪಶುವೈದ್ಯರು ಸಹ ತಮ್ಮ ಸೇವೆಯನ್ನು ಇಲ್ಲಿ ಕೂಡ ಒದಗಿಸುತ್ತಾರೆ. ನಿತ್ಯ 4ರಿಂದ 5 ಹಸುಗಳನ್ನು ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ಇತ್ಯಾದಿಗಳಿಗೆ ಜನ ಆಸರೆಯಾಗುತ್ತಿದ್ದು, ರಕ್ತ ಪೂರೈಕೆಯ ಕೊರತೆಯಿಂದ ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವರೆಗೂ 35 ರಿಂದ 40 ಅಸ್ವಸ್ಥ ಮತ್ತು ಗಾಯಗೊಂಡ ಹಸುಗಳಿಗೆ ಈ ದವಾಖಾನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವುಗಳು ಆಕಾಲಿಕವಾಗಿ ಸತ್ತಾಗ 500 ರಿಂದ 1000 ರೂಪಾಯಿ ನೀಡುವುದರಿಂದ ಹಸುವಿಗೆ ಮುಕ್ತಿ ನೀಡಬೇಕು ಎಂದು ಸಾಧು ರಾಮ್ ಪಸ್ಲಾ ಹೇಳಿದರು.
ಇದನ್ನೂ ಓದಿ : ಯಾವುದೇ ಕಾರಣವಿಲ್ಲದೇ ದೀರ್ಘಕಾಲ ಸಂಗಾತಿಯ ಲೈಂಗಿಕ ಕ್ರಿಯೆಗೆ ನಿರಾಕರಣೆ... ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್