ETV Bharat / bharat

ವೈಟ್‌ ಟೀ ಕೇಳಿದ್ದೀರಾ? 1 ಕೆಜಿ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ! ಆರೋಗ್ಯಕ್ಕೂ ಹಲವು ಲಾಭ - ಭಾರತದ ಅತಿ ಹೆಚ್ಚು ಬೆಲೆಯ ಟೀ

ಸೂರತ್​ನಲ್ಲಿ ಬಿಳಿ ಚಹಾ ಫೇಮಸ್. ಇಲ್ಲಿ ಕೇವಲ ಒಂದು ಕೆ.ಜಿ ಟೀ ಪೌಡರ್‌ಗೆ ಲಕ್ಷಗಟ್ಟಲೆ ರೂಪಾಯಿ ಕೊಡಬೇಕು. ಒಂದು ಕಪ್ ಚಹಾದ ಬೆಲೆಯೂ ಕಡಿಮೆ ಏನಿಲ್ಲ ಬಿಡಿ.

International Tea Day 2022
ಅಂತರರಾಷ್ಟ್ರೀಯ ಚಹಾ ದಿನ 2022
author img

By

Published : May 22, 2022, 7:18 AM IST

Updated : May 22, 2022, 8:23 AM IST

ಗುಜರಾತ್: ವಿಶ್ವಾದ್ಯಂತ ಚಹಾಪ್ರಿಯರಿಗೆ ಕೊರತೆ ಇಲ್ಲ. ಬಹುತೇಕರಿಗೆ ಟೀ ಅಂದರೆ ಅಚ್ಚುಮೆಚ್ಚು. ಇನ್ನೂ ಕೆಲವರಿಗೆ ಚಹಾ ಇಲ್ಲವಾದರೆ ಆಗೋದೇ ಇಲ್ಲ. ಭಾರತದಲ್ಲೂ ಚಹಾಪ್ರಿಯರ ಸಂಖ್ಯೆ ದೊಡ್ಡದಿದೆ. ಇಲ್ಲಿ ವೈವಿಧ್ಯಮಯ ಚಹಾವನ್ನು ನಾವು ಕಾಣಬಹುದು.

ಗುಜರಾತ್​ನ ಸೂರತ್‌ನಲ್ಲಿ ಸಹ ಅತಿ ಹೆಚ್ಚು ಸಂಖ್ಯೆಯ ಚಹಾಪ್ರೇಮಿಗಳಿದ್ದಾರೆ. ಆದರೆ ಇಲ್ಲಿ ಸಿಗುವ ವಿಶೇಷ ಚಹಾ ಪೌಡರ್‌ ಹಾಗು ತಾಜಾ ಚಹಾದ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಕೇವಲ ಒಂದು ಕೆ.ಜಿ ಟೀ ಪೌಡರ್‌ಗೆ 5 ಲಕ್ಷ ರೂಪಾಯಿ ಬೆಲೆ ಇದೆ. ಒಂದು ಕಪ್ ಚಹಾದ ಬೆಲೆ 250 ರೂ. ಇದೆ. ಹಾಗಂತ, ಬೆಲೆ ಜಾಸ್ತಿಯಾದರೂ ಜನರು ಚಹಾ ಕುಡಿಯುವುದನ್ನು ನಿಲ್ಲಿಸುವುದಿಲ್ಲ.

ಸೂರತ್‌ನಲ್ಲಿ ಈ 'ಬಿಳಿ ಚಹಾ' ಹೆಚ್ಚು ಜನಪ್ರಿಯ. ಇಲ್ಲಿನ ಪಿಪ್ಲೋಡ್‌ನಲ್ಲಿರುವ ಕ್ಯಾಸಲ್ ಟೀ ಅಂಗಡಿಯಲ್ಲಿ (Castle Tea) ದೊರೆಯುವ ವೈಟ್ ಟೀ ಇತರೆ ಚಹಾಕ್ಕಿಂತ ಭಿನ್ನ. ಹಾಗಾಗಿ ಒಂದು ಕಪ್ ಚಹಾ ಬೆಲೆ ಬೆಲೆ ಇಷ್ಟೊಂದು ದುಬಾರಿ.

ಇದನ್ನೂ ಓದಿ: ಕೇದಾರನಾಥ ದೇಗುಲಕ್ಕೆ ಸಾಕುನಾಯಿ ಕರೆದುಕೊಂಡು ಹೋಗಿದ್ದ ಬ್ಲಾಗರ್​ ವಿರುದ್ಧ ಎಫ್​ಐಆರ್​

ಆರೋಗ್ಯಕ್ಕೆ ಬಿಳಿ ಚಹಾ ಉತ್ತಮ. ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಈ ಚಹಾ ಸೇವನೆಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಲ್ಲುಗಳಲ್ಲಿನ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲೂ ಇದು ಸಹಕಾರಿಯಂತೆ.

Last Updated : May 22, 2022, 8:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.