ETV Bharat / bharat

ತಮ್ಮ ಶಕ್ತಿ ವೃದ್ಧಿಸಿಕೊಳ್ಳಲು ಕೊರೊನಾವಧಿ ಬಳಸಿಕೊಂಡ ಭಯೋತ್ಪಾದಕ ಸಂಸ್ಥೆಗಳು - ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ (ಇಂಟರ್‌ಪೋಲ್)

ಭಯೋತ್ಪಾದಕ ಗುಂಪುಗಳು ಸ್ಥಳೀಯ ಜನಸಂಖ್ಯೆ ಅಥವಾ ಬಾಹ್ಯ ಆರ್ಥಿಕ ಸಂಪನ್ಮೂಲಗಳನ್ನು ಮತ್ತಷ್ಟು ವಿಸ್ತರಿಸಲು ಕೊರೊನಾ ಸಮಯದ ಅವಧಿಯನ್ನು ಬಳಸಿಕೊಂಡಿವೆ ಎಂದು ಇಂಟರ್​ಪೋಲ್​​ ವರದಿ ಹೇಳಿದೆ.

interpol
ಇಂಟರ್​ಪೋಲ್
author img

By

Published : Dec 24, 2020, 9:45 PM IST

ನವದೆಹಲಿ: ತಮ್ಮ ಶಕ್ತಿ ಮತ್ತು ಪ್ರಭಾವ ಮತ್ತಷ್ಟು ಬಲಪಡಿಸಿಕೊಳ್ಳುವ ಸಲುವಾಗಿ ಭಯೋತ್ಪಾದಕ ಸಂಘಟನೆಗಳು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಉಪಯೋಗಿಸಿಕೊಳ್ಳುತ್ತಿವೆ ಎಂದು ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ (ಇಂಟರ್‌ಪೋಲ್) ಹೇಳಿದೆ. ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಮತ್ತು ಸಂಬಂಧಿಸಿದ ಮಾಹಿತಿಯನ್ನೂ ವಿನಿಮಯ ಮಾಡಿಕೊಂಡಿವೆ ಎಂಬ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ.

ಭಾರತ ಸೇರಿದಂತೆ 194 ಸದಸ್ಯ ರಾಷ್ಟ್ರಗಳಿಗೆ ನೀಡಿರುವ ನೋಟಿಸ್‌ನಲ್ಲಿ ಕೆಲವು ಪ್ರದೇಶಗಳಲ್ಲಿ ಕಡಿಮೆ ಮತ್ತು ಕೆಲವೆಡೆ ಅಧಿಕವಾಗುವ ಕೊರೊನಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಭಯೋತ್ಪಾದಕ ಜಾಲಗಳು, ಹಿಂಸಾತ್ಮಕ ಉಗ್ರಗಾಮಿ ಗುಂಪುಗಳು ಮತ್ತು ಇತರ ಅಪಾಯಕಾರಿ ಎನ್ಎಸ್ಎಗಳಿಗೆ ತಕ್ಕ ಪ್ರತಿಕ್ರಿಯೆ ನೀಡಬೇಕಿದೆ ಎಂದು ಸೂಚಿಸಿದೆ.

ಕೊರೊನಾ ಗುಣಲಕ್ಷಣ ಮತ್ತು ವೈದ್ಯಕೀಯ ಪ್ರಗತಿ, ಜಾಗತಿಕ ಅಥವಾ ರಾಷ್ಟ್ರೀಯ ಪ್ರತಿಕ್ರಿಯೆ, ಸಾಮಾಜಿಕ ವಾತಾವರಣ, ಭದ್ರತಾ ಉಪಕರಣಗಳ ಸ್ಥಿತಿಸ್ಥಾಪಕತ್ವ ಈ ಐದು ಭಯೋತ್ಪಾದಕರ ಬೆದರಿಕೆಯ ಪ್ರಮುಖ ಅಂಶಗಳಾಗಿವೆ. ಅದಕ್ಕಾಗಿ ಎನ್​​​ಎಸ್​​​​​ಎಎಸ್​ ಸೇರಿದಂತೆ ಉಗ್ರಗಾಮಿ ಸಂಘಟನೆಗಳು ತಮ್ಮ ಸಾಮರ್ಥ್ಯ ತೋರಿಸಲು ಹಲವು ಕಾರ್ಯತಂತ್ರಗಳನ್ನು ರೂಪಿಸಿಕೊಂಡಿವೆ. ಈ ಕುರಿತು ಮೌಲ್ಯಮಾಪನ ಅಗತ್ಯ ಎಂದು ನೋಟಿಸ್ ತಿಳಿಸಿದೆ.

ಇದನ್ನೂ ಓದಿ...ಆಧಾರ ರಹಿತ ಆರೋಪಗಳ ವಿರುದ್ಧ ನಾವು ಶಕ್ತವಾದ ಪ್ರತಿಭಟನೆ ಮಾಡ್ತೇವೆ: ಪ್ರತಿಪಕ್ಷಗಳ ಜಂಟಿ ಹೇಳಿಕೆ

ತಮ್ಮ ಶಕ್ತಿ ಮತ್ತು ಪ್ರಭಾವವನ್ನು ಗಟ್ಟಿಗೊಳಿಸಲು ಕೆಲ ಭಯೋತ್ಪಾದಕ ಗುಂಪುಗಳು ಸ್ಥಳೀಯ ಜನಸಂಖ್ಯೆ ಅಥವಾ ಬಾಹ್ಯ ಆರ್ಥಿಕ ಸಂಪನ್ಮೂಲಗಳನ್ನು ಮತ್ತಷ್ಟು ವಿಸ್ತರಿಸಲು ಕೊರೊನಾ ಸಮಯದ ಅವಧಿಯನ್ನು ಬಳಸಿಕೊಂಡಿವೆ ಎಂದು ವರದಿ ಹೇಳಿದೆ. ಜಾಗತಿಕ ಆರ್ಥಿಕತೆಯ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವಂತೆಯೂ ಮಾಡಿವೆ ಎಂದೂ ತಿಳಿಸಿದೆ.

ವಿಕಸಿಸುತ್ತಿರುವ ಬೆದರಿಕೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಕಾನೂನು ಜಾರಿಗೊಳಿಸಲು ನಮ್ಮ ಭಯೋತ್ಪಾದನಾ ಮೌಲ್ಯಮಾಪನ ವರದಿ ಸಹಾಯ ಮಾಡಿದೆ ಎಂದು ಇಂಟರ್‌ಪೋಲ್ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.