ನವದೆಹಲಿ: ತೆಲುಗು ಖ್ಯಾತ ನಟಿ ಹಾಗೂ ಮಾಜಿ ಶಾಸಕಿ ಜಯಸುಧಾ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಸಮ್ಮುಖದಲ್ಲಿ ನಟಿ ಜಯಸುಧಾ ಬಿಜೆಪಿ ಸೇರಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಜಯಸುಧಾ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಇಂದು ಕೇಸರಿ ಪಕ್ಷದ ಬಾವುಟವನ್ನು ಅವರು ಹಿಡಿದಿದ್ದಾರೆ. ಬಿಜೆಪಿ ಸೇರಿದ ಬಳಿಕ ಪ್ರತಿಕ್ರಿಯಿಸಿರುವ ಜಯಸುಧಾ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ದೇಶಕ್ಕೆ ಸೇವೆ ಸಲ್ಲಿಸಬೇಕಾಗಿದೆ. ಇಂದು ನಾವು ಭಾರತದಿಂದ ಹೊರಗೆ ಹೋದಾಗ ಜನರು ಭಾರತದ ಬಗ್ಗೆ ಮಾತನಾಡುತ್ತಾರೆ.. ಇದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಹೇಳಿದ್ದಾರೆ.
-
#WATCH | Delhi: Telugu actor and former MLA, Jayasudha joins BJP in the presence of Telangana BJP President G Kishan Reddy & BJP national secretary Tarun Chug. pic.twitter.com/dDzI9JxuJi
— ANI (@ANI) August 2, 2023 " class="align-text-top noRightClick twitterSection" data="
">#WATCH | Delhi: Telugu actor and former MLA, Jayasudha joins BJP in the presence of Telangana BJP President G Kishan Reddy & BJP national secretary Tarun Chug. pic.twitter.com/dDzI9JxuJi
— ANI (@ANI) August 2, 2023#WATCH | Delhi: Telugu actor and former MLA, Jayasudha joins BJP in the presence of Telangana BJP President G Kishan Reddy & BJP national secretary Tarun Chug. pic.twitter.com/dDzI9JxuJi
— ANI (@ANI) August 2, 2023
2022ರ ಆಗಸ್ಟ್ನಲ್ಲಿ ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜಯಸುಧಾ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆಗ ಜಯಸುಧಾ ಅವರನ್ನು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಈಟಾಳ ರಾಜೇಂದ್ರ ಭೇಟಿ ಮಾಡಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ಜಯಸುಧಾ ಬಿಜೆಪಿಯ ಮುಂದೆ ಕೆಲ ಷರುತ್ತುಗಳನ್ನಿಟ್ಟಿದ್ದರು. ಇವುಗಳಿಗೆ ಒಪ್ಪಿದರೆ ಪಕ್ಷಕ್ಕೆ ಸೇರುವುದಾಗಿ ಜಯಸುಧಾ ತಿಳಿಸಿದ್ದಾರೆ. ಹೀಗಾಗಿಯೇ ಹೈಕಮಾಂಡ್ ಸೂಚನೆಗಾಗಿ ತೆಲಂಗಾಣ ಬಿಜೆಪಿಯ ನಾಯಕರು ಕಾಯುತ್ತಿದ್ದಾರೆ ಎಂದು ವರದಿಯಾಗಿತ್ತು.
1970 ಮತ್ತು 1980ರ ದಶಕಗಳಲ್ಲಿ ಅನೇಕ ಚಲನಚಿತ್ರಗಳಲ್ಲಿ ನಾಯಕ ನಟಿಯಾಗಿ ಹಾಗೂ ಪ್ರಮುಖ ಪಾತ್ರಗಳನ್ನು ಜಯಸುಧಾ ನಿರ್ವಹಿಸಿದ್ದಾರೆ. ಹಲವು ಹಿರಿಯ ನಟರೊಂದಿಗೆ ಬೆಳ್ಳಿ ಪರದೆಯನ್ನು ಅವರು ಹಂಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಹೊಂದಿದ್ದಾರೆ. ಅಂದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ದಿ.ವೈ. ಎಸ್.ರಾಜಶೇಖರ್ ರೆಡ್ಡಿ ಆಹ್ವಾನದ ಮೇರೆಗೆ 2009ರಲ್ಲಿ ರಾಜಕೀಯಕ್ಕೆ ಬಂದಿದ್ದರು. ಇದೇ ವರ್ಷ ಸಿಕಂದರಾಬಾದ್ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗಿದ್ದರು.
-
#WATCH | "...We have to serve this country under the leadership of PM Modi. Today when we go out of India, people talk about India...What we are today is because of PM Modi...," says Telugu actor and former MLA, Jayasudha who joined BJP today. pic.twitter.com/zQMyV5y7Cy
— ANI (@ANI) August 2, 2023 " class="align-text-top noRightClick twitterSection" data="
">#WATCH | "...We have to serve this country under the leadership of PM Modi. Today when we go out of India, people talk about India...What we are today is because of PM Modi...," says Telugu actor and former MLA, Jayasudha who joined BJP today. pic.twitter.com/zQMyV5y7Cy
— ANI (@ANI) August 2, 2023#WATCH | "...We have to serve this country under the leadership of PM Modi. Today when we go out of India, people talk about India...What we are today is because of PM Modi...," says Telugu actor and former MLA, Jayasudha who joined BJP today. pic.twitter.com/zQMyV5y7Cy
— ANI (@ANI) August 2, 2023
ಆದಾಗ್ಯೂ, 2014ರ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಜಯಸುಧಾ ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ 2016ರಲ್ಲಿ ಕಾಂಗ್ರೆಸ್ ಬಿಟ್ಟು ಟಿಡಿಪಿಗೆ ಸೇರಿದ್ದರು. ಆದರೆ, ರಾಜಕೀಯದಲ್ಲಿ ಅಷ್ಟೊಂದು ಸಕ್ರಿಯರಾಗಿ ಇರಲಿಲ್ಲ. 2019ರಲ್ಲಿ ತಮ್ಮ ಮಗ ನಿಹಾರ್ ಕಪೂರ್ ಅವರೊಂದಿಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
ಇದನ್ನೂ ಓದಿ: ಬಿಜೆಪಿ ಸೇರ್ತಾರಾ ತೆಲುಗಿನ ಖ್ಯಾತ ನಟಿ ಜಯಸುಧಾ?