ETV Bharat / bharat

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ - ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ

ಉದ್ಯೋಗ ಅರಸಿ ಹೈದರಾಬಾದ್​ನಿಂದ ಉತ್ತರಪ್ರದೇಶದ ಲಕ್ನೋಗೆ ಆಗಮಿಸಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

telangana-woman-who-landed-in-lucknow-on-job-promise-gangraped-3-held
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ
author img

By ETV Bharat Karnataka Team

Published : Oct 19, 2023, 11:38 AM IST

ಲಖನೌ(ಉತ್ತರಪ್ರದೇಶ) : ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಹೈದರಾಬಾದ್​ನಿಂದ ಉತ್ತರಪ್ರದೇಶದ ಲಕ್ನೋಗೆ ಕರೆಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನೀಡಿದ ದೂರಿನ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮನೀಷ್​ ಶರ್ಮ, ತುಕಾರಾಮ್​, ಅಭಿಷೇಕ್ ಎಂದು ಗುರುತಿಸಲಾಗಿದೆ.

ಸಂತ್ರಸ್ತ ಯುವತಿಯ ಪ್ರಕಾರ, ಹೈದರಾಬಾದ್​ ಮೂಲದ ಮನೀಷ್​ ಶರ್ಮ ಹಾಗೂ ಸಂತ್ರಸ್ತ ಯುವತಿ ಸ್ನೇಹಿತರಾಗಿದ್ದಾರೆ. ಈ ಮನೀಷ್ ಯುವತಿಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. ಈತನ ಮಾತನ್ನು ನಂಬಿದ ಯುವತಿ ಹೈದರಾಬಾದ್​ನಿಂದ ನೇರವಾಗಿ ವಿಮಾನದಲ್ಲಿ ಲಕ್ನೋಗೆ ಆಗಮಿಸಿದ್ದಳು.

ಲಕ್ನೋಗೆ ಆಗಮಿಸಿದ ಯುವತಿಯನ್ನು ಆರೋಪಿ ಮನೀಷ್ ಶರ್ಮ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದ. ಬಳಿಕ ಆಕೆಯನ್ನು ಅಲ್ಲಿಂದ ನೇರವಾಗಿ ಜಾನಕಿಪುರಂನ ತನ್ನ ಮನೆಯ ಪಕ್ಕದಲ್ಲಿರುವ ​ಸ್ಟಾರ್​ ಫೀಲ್ಡ್​ ಹೋಟೆಲ್​​ಗೆ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿ ಕೊಠಡಿಯನ್ನು ಕಾಯ್ದಿರಿಸಿ ಅಲ್ಲೇ ಉಳಿಯುವಂತೆ ಸೂಚಿಸಿದ್ದ. ಬಳಿಕ ಮನೀಷ್​ ಅಲ್ಲಿಂದ ತೆರಳಿದ್ದ. ನಂತರ ಬುಧವಾರ ಮತ್ತೆ ಯುವತಿ ಇದ್ದ ಹೋಟೆಲ್​ಗೆ ಆಗಮಿಸಿದ್ದ ಆರೋಪಿ ಮನೀಷ್,​ ತನ್ನೊಂದಿಗೆ ಇನ್ನಿಬ್ಬರು ಗೆಳೆಯರನ್ನು ಕರೆತಂದಿದ್ದ. ಈ ಮೂವರು ಸೇರಿ ತನ್ನೊಂದಿಗೆ ಮಾತನಾಡಿ, ನಂತರ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಈ ಬಗ್ಗೆ ಮಾಹಿತಿ ನೀಡಿದ ಜಾನಕೀಪುರ ಪೊಲೀಸ್​ ಅಧಿಕಾರಿ, ಕಳೆದ ಕೆಲವು ದಿನಗಳ ಹಿಂದೆಯೇ ಸಂತ್ರಸ್ತ ಯುವತಿ ಹೈದರಾಬಾದ್​ನಿಂದ ಲಕ್ನೋಗೆ ಬಂದಿದ್ದಳು. ಈ ವೇಳೆ ಆರೋಪಿ ಮನೀಷ್​ ಶರ್ಮನನ್ನು ಭೇಟಿ ಮಾಡಿದ್ದಳು. ಯುವತಿಯ ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಪ್ರಕರಣ 376 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದರು.

ಇತ್ತೀಚಿನ ಪ್ರಕರಣ- ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ : ವಾಕಿಂಗ್​ ಹೊರಟಿದ್ದ ಬಾಲಕಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿತ್ತು. ಕಳೆದ ಅಕ್ಟೋಬರ್​ 15ರಂದು ಸಂತ್ರಸ್ತ ಬಾಲಕಿ ಮತ್ತು ಸ್ನೇಹಿತರು ಒಟ್ಟಿಗೆ ವಾಕಿಂಗ್​ ಹೋಗುವಾಗ ಘಟನೆ ನಡೆದಿತ್ತು. ಈ ಸಂಬಂಧ ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದು, ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರು ಜನರಲ್ಲಿ ಐವರು ಅಪ್ರಾಪ್ತರು ಎಂದು ತಿಳಿದುಬಂದಿದೆ. ಬಾಲಕಿಯು ಹರಿದ ಬಟ್ಟೆಯಲ್ಲೇ ಬಂದು ಪೊಲೀಸರಿಗೆ ದೂರು ನೀಡಿದ್ದಳು.

ಇದನ್ನೂ ಓದಿ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ: ಬಾಲಕಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.