ಹೈದರಾಬಾದ್: ತೆಲಂಗಾಣ ಸರ್ಕಾರ ಮೂರು ವರ್ಷಗಳ ಹಿಂದೆ ರೈತ ಬಂಧು ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆ ಮೂಲಕ ರೈತರ ಖಾತೆಗಳಿಗೆ 50,000 ಕೋಟಿ ರೂ.ಗಳನ್ನು ಜಮಾ ಮಾಡಿದೆ. ಈ ಹಿನ್ನೆಲೆ ಈ ವಾರ ಪೂರ್ತಿ ಆಚರಣೆಗೆ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕರೆ ನೀಡಿದೆ.
ಜನವರಿ 3 ರಿಂದ ಜನವರಿ 10 ರವರೆಗೆ ರಾಜ್ಯಾದ್ಯಂತ ರೈತ ಬಂಧು ಆಚರಣೆಯನ್ನು ಟಿಆರ್‌ಎಸ್ ಪಕ್ಷ ಆಯೋಜಿಸಿದೆ. ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಕೃಷಿ ಸಚಿವ ಸಿಂಗಿರೆಡ್ಡಿ ನಿರಂಜನ್ ರೆಡ್ಡಿ, ರೈತ ಬಂಧು ಸಮಿತಿ ಅಧ್ಯಕ್ಷ ಪಲ್ಲಾ ರಾಜೇಶ್ವರ್ ರೆಡ್ಡಿ ಅವರು ಭಾನುವಾರ ಟಿಆರ್‌ಎಸ್ ಶಾಸಕರು, ಸಂಸದರು, ಎಂಎಲ್‌ಸಿಗಳು, ಜಿಪಿಟಿಸಿಗಳು, ರೈತ ಬಂಧು ಸಮಿತಿಯ ಜಿಲ್ಲಾಧ್ಯಕ್ಷರೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿ ಮುಂದಿನ ಕ್ರಮಗಳ ಕುರಿತು ನಿರ್ದೇಶನ ನೀಡಿದರು. ಕೋವಿಡ್ ನಿರ್ಬಂಧಗಳನ್ನು ಅನುಸರಿ ಆಚರಣೆ ನಡೆಸುವಂತೆ ಸೂಚಿಸಿದರು.
ಓದಿ: ಅಳವಿನಂಚಿಲ್ಲಿದ್ದ ಮೆಕ್ಸಿಕನ್ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!
ರಾಮರಾವ್ ಎಂದೇ ಜನಪ್ರಿಯರಾಗಿರುವ ಕೆಟಿಆರ್, ರೈತ ಬಂಧುಗಳಂತಹ ಯೋಜನೆಯನ್ನು ದೇಶದ ಯಾವುದೇ ರಾಜ್ಯವು ತಂದಿಲ್ಲ ಎಂದು ಹೇಳಿದ್ದಾರೆ. ಟಿಆರ್‌ಎಸ್ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಈ ಬಗ್ಗೆ ಮಾತನಾಡಿ, ರೈತ ಸಮುದಾಯದ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. 70 ವರ್ಷಗಳ ಭಾರತೀಯ ಇತಿಹಾಸದಲ್ಲಿ ಇಂತಹ ಮಹತ್ತರವಾದ ಯೋಜನೆಯನ್ನು ಎಲ್ಲಿಯೂ ಪರಿಚಯಿಸಲಾಗಿಲ್ಲ ಎಂದು ಬಣ್ಣಿಸಿಕೊಂಡಿದ್ದಾರೆ.
ಕೃಷಿ ಕ್ಷೇತ್ರದ ಕಲ್ಯಾಣಕ್ಕಾಗಿ ಉಪಕ್ರಮಗಳ ಅನುಷ್ಠಾನಕ್ಕೆ ಬಂದಾಗ ತೆಲಂಗಾಣ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಖ್ಯಮಂತ್ರಿಗಳು ರೈತ ಬಂಧು, ರೈತ ಭೀಮಾ ಮುಂತಾದ ವಿವಿಧ ಯೋಜನೆಗಳನ್ನು ಪರಿಚಯಿಸಿದ್ದಾರೆ ಮತ್ತು ರಾಜ್ಯದಲ್ಲಿ ನೀರಾವರಿಗಾಗಿ ವ್ಯಾಪಕವಾಗಿ ನೀರನ್ನು ಒದಗಿಸುವ ಕಾಳೇಶ್ವರಂ ಯೋಜನೆಯನ್ನು ಸಹ ಕೊಟ್ಟಿದ್ದಾರೆ ಎಂದು ಕೆಟಿಆರ್ ಹೇಳಿದರು.
ರೈತ ಬಂಧು ಸಕ್ಸಸ್ ಸೆಲೆಬ್ರೇಷನ್ ವೇಳೆ ಕೋವಿಡ್ ನಿರ್ಬಂಧಗಳನ್ನು ಕಡ್ಡಾಯವಾಗಿ ಅನುಸರಿಬೇಕು ಎಂದು ಕೆಟಿಆರ್ ಜನರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಟಿಆರ್‌ಎಸ್ ಸರ್ಕಾರ ಕೃಷಿ ಕ್ಷೇತ್ರಕ್ಕೆ ಮಾಡಿರುವ ಯೋಜನೆಗಳು ಮತ್ತು ಕಾರ್ಯಗಳ ಕುರಿತು ಕರಪತ್ರಗಳನ್ನು ಹಂಚಿಕೊಳ್ಳಲು ಪಕ್ಷದ ಮುಖಂಡರನ್ನು ಕೋರಿದರು.
ಓದಿ: 24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ, ಇದ್ದಕ್ಕಿದ್ದಂತೆ ಮಹಾರಾಷ್ಟ್ರದಲ್ಲಿ ಹೆಚ್ಚಾದ ಸೋಂಕಿತರು!
63 ಲಕ್ಷ ರೈತರಿಗೆ ಸರ್ಕಾರ ರೈತ ಬಂಧು ನಿಧಿಯನ್ನು ನೀಡುತ್ತಿದೆ ಎಂದು ನಿರಂಜನರೆಡ್ಡಿ ಇದೇ ವೇಳೆ ಯೋಜನೆಯ ಬಗ್ಗೆ ವಿವರಣೆ ನೀಡಿದರು. 2018 ರ ಮೇ ತಿಂಗಳಲ್ಲಿ ಪ್ರಾರಂಭವಾದ ರೈತರಿಗೆ ಬಂಡವಾಳ ಬೆಂಬಲ ಯೋಜನೆಯಡಿ ಸರ್ಕಾರವು ಎಲ್ಲಾ ರೈತರಿಗೆ ಪ್ರತಿ ವರ್ಷ ಎರಡು ಬೆಳೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ.
ಯೋಜನೆಯನ್ನು ಪ್ರಾರಂಭಿಸಿದಾಗ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ 8,000 ರೂ (ರಾಬಿ ಮತ್ತು ಖಾರಿಫ್ ಎರಡೂ ಋತುಗಳಿಗೆ) ಮತ್ತು ಟಿಆರ್‌ಎಸ್ ಸರ್ಕಾರವು 2019 ರಿಂದ 10,000 ರೂ.ಗೆ ಹೆಚ್ಚಿಸಿದೆ. ಪ್ರತಿ ಬೆಳೆ ಹಂಗಾಮಿನ ಆರಂಭಕ್ಕೂ ಮುನ್ನ ಪ್ರತಿ ಎಕರೆಗೆ 5 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ.
ಮುಂಬರುವ ರಾಬಿ ಋತುವಿಗಾಗಿ 7,646 ಕೋಟಿ ರೂಪಾಯಿಗಳ ವಿತರಣೆಯು ಕಳೆದ ವಾರದಿಂದ ಪ್ರಾರಂಭವಾಗಿದೆ. ಮತ್ತು ಜನವರಿ 10 ರಂದು ಯೋಜನೆ ಅಡಿ ಸಂಚಿತ ನೆರವು 50,000 ಕೋಟಿ ರೂಪಾಯಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಹರ್ಷಾಚರಣೆಗೆ ಕರೆ ನೀಡಿದೆ.