ETV Bharat / bharat

ದೇಶದಲ್ಲಿ ಶೌಚಾಲಯವೂ ಸೇಫ್​ ಅಲ್ಲ : ಕದ್ದು ಮಾರಾಟ ಮಾಡಿದ ಖದೀಮರು!

author img

By

Published : Mar 22, 2022, 3:39 PM IST

ಮತ್ತೋರ್ವ ಆರೋಪಿ ಅರುಣ್​ ಕುಮಾರ್​ ಗ್ರೇಟರ್​ ಹೈದ್ರಾಬಾದ್​ ಮಹಾನಗರ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೋರ್ವ ಆರೋಪಿ ಭಿಕ್ಷಾಪತಿ ಎಂಬುವವ ಜೈನ್ ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಸೂಪರ್​ವೈಸರ್​ ಆಗಿದ್ದಾನೆ. ಸದ್ಯ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

A man arrested in toilet stolen case
A man arrested in toilet stolen case

ಹೈದ್ರಾಬಾದ್​(ತೆಲಂಗಾಣ): ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆ ಬದಿ ಇಟ್ಟಿದ್ದ ಮೊಬೈಲ್​ ಶೌಚಾಲಯವನ್ನೇ ಕಿರಾತಕರ ತಂಡ ಕದ್ದು ಅದನ್ನು ಮಾರಾಟ ಮಾಡಿರುವ ಘಟನೆ ತೆಲಂಗಾಣದ ಸಿಕಂದ್ರಾಬಾದ್​​ನ ಮಲ್ಕಜ್​ಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಪ್ರಕರಣ ಸಂಬಂಧ ಒಬ್ಬ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, ಶೌಚಾಲಯ ಮಾರಾಟ ಮಾಡಿದ್ದರಿಂದ ಬಂದ 45 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇಲ್ಲಿನ ಸಫೀಲ್​ಗೂಡ ಚೌರಸ್ತಾ ಸಮೀಪ ಕಬ್ಬಿಣದಿಂದ ಕೂಡಿದ್ದ ಸ್ವಚ್ಛ ಶೌಚಾಲಯವನ್ನು ಕಟ್ಟಿಸಲಾಗಿತ್ತು.

ಆದರೆ, ಮಾರ್ಚ್‌ 16ರಿಂದ ಅದು ಕಾಣೆಯಾಗಿದೆ. ಇದನ್ನು ಗಮನಿಸಿದ ಓರ್ವ ಪೌರ ಕಾರ್ಮಿಕ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆಗ ಅಧಿಕಾರಿಗಳು, ಪೊಲೀಸರಿಗೆ​ ದೂರು ನೀಡಿದ್ದರು. ಅಂತೆಯೇ ಪೊಲೀಸರು, ಶೌಚಾಲಯವಿದ್ದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು.

ಈ ವೇಳೆ ಎಂ.ಜೋಗಯ್ಯ ಎಂಬ ಆರೋಪಿಯನ್ನು ಪತ್ತೆ ಹೆಚ್ಚಿದ್ದು, ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕಳ್ಳತನಕ್ಕೆ ನೆರವಾದ ಅರುಣ್​ ಕುಮಾರ್​ ಮತ್ತು ಭಿಕ್ಷಾಪತಿ ಎಂಬ ಮತ್ತಿಬ್ಬರ ಹೆಸರನ್ನೂ ಬಾಯಿಬಿಟ್ಟಿದ್ದಾನೆ. ಅಲ್ಲದೇ, ಕದ್ದ ಶೌಚಾಲಯವನ್ನು ಹಣಕ್ಕೆ ಮಾರಾಟ ಮಾಡಿರುವುದನ್ನೂ ಬಹಿರಂಗಪಡಿಸಿದ್ದಾನೆ.

ಮತ್ತೋರ್ವ ಆರೋಪಿ ಅರುಣ್​ ಕುಮಾರ್​ ಗ್ರೇಟರ್​ ಹೈದ್ರಾಬಾದ್​ ಮಹಾನಗರ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೋರ್ವ ಆರೋಪಿ ಭಿಕ್ಷಾಪತಿ ಎಂಬುವವ ಜೈನ್ ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಸೂಪರ್​ವೈಸರ್​ ಆಗಿದ್ದಾನೆ. ಸದ್ಯ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಲಸ ಕೊಟ್ಟ ಮಾಲೀಕನ ಅಂಗಡಿಯಲ್ಲಿ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳು ಅಂದರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.