ETV Bharat / bharat

Telangana: ಇಂದಿನ ಸಂಪುಟ ಸಭೆಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ನಿರ್ಧಾರ, ಓವೈಸಿ ವಿರೋಧ - ಲಾಕ್ ಡೌನ್​ ವಿಸ್ತರಣೆ

ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೆಲಂಗಾಣದ ಲಾಕ್‌ಡೌನ್​ ಭವಿಷ್ಯ ನಿರ್ಧಾರವಾಗಲಿದೆ. ಮೇ 12 ರಿಂದ ರಾಜ್ಯದಲ್ಲಿ ಲಾಕ್​ ಡೌನ್​ ಜಾರಿಯಲ್ಲಿದೆ.

Telangana lockdown extension
ತೆಲಂಗಾಣ ಲಾಕ್​ ಡೌನ್
author img

By

Published : May 30, 2021, 11:50 AM IST

ಹೈದರಾಬಾದ್: ಲಾಕ್‌ಡೌನ್​ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಇಂದು ಮಧ್ಯಾಹ್ನ 2 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಇಂದಿನ ಸಭೆಯಲ್ಲಿ ಲಾಕ್ ಡೌನ್​ ವಿಸ್ತರಣೆ ಅಥವಾ ಇತರೆ ಕ್ರಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ನಡುವೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಲಾಕ್ ಡೌನ್​ ವಿಸ್ತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಕೋವಿಡ್ ಸ್ಥಿತಿಗತಿಯ ಕುರಿತು ಸಿಎಂಗೆ ವರದಿ ನೀಡಲಿದ್ದಾರೆ. ಇದನ್ನು ಆಧರಿಸಿ ಸಿಎಂ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಹೈಕೋರ್ಟ್ ನಿರ್ದೇಶನದಂತೆ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯದಲ್ಲಿ ಮೇ 12 ರಿಂದ ಲಾಕ್ ಡೌನ್​ ಜಾರಿಗೊಳಿಸಲಾಗಿದೆ.

  • Telganana's Cabinet will be meeting today to discuss the extension of lockdown. I must reiterate my opposition. It's not a strategy to combat COVID-19. It APPEARS as a "hard on pandemic" strategy but all it does is destroy the lives of poor. 1/5

    — Asaduddin Owaisi (@asadowaisi) May 30, 2021 " class="align-text-top noRightClick twitterSection" data=" ">

ಓವೈಸಿ ವಿರೋಧ: ಲಾಕ್‌ಡೌನ್​ ಕೋವಿಡ್ ನಿಯಂತ್ರಿಸುವ ಬದಲಾಗಿ, ಬಡ ಜನರ ಜೀವನವನ್ನು ನಾಶಪಡಿಸುತ್ತಿದೆ. ದತ್ತಾಂಶ ತೋರಿಸಿದಂತೆ, ಮೇ 12 ರಂದು ಲಾಕ್​ ಡೌನ್​ ಜಾರಿಯಾಗುವ ಮೊದಲೇ ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿತ್ತು. ಆದ್ದರಿಂದ ಲಾಕ್​ ಡೌನ್​ನಿಂದ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಲಾಕ್​ ಡೌನ್​ ಮಾಡದೆಯೂ ಸೋಂಕು ನಿಯಂತ್ರಣ ಮಾಡಬಹುದು ಎಂಬುವುದು ಇದರಿಂದ ಸ್ಪಷ್ಟ ಎಂದು ಓವೈಸಿ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್‌ ವೇಳೆ ನೂತನ ಸಂಸತ್‌ ಭವನ, ಪಿಎಂ ನಿವಾಸವಿರುವ 'ಸೆಂಟ್ರಲ್‌ ವಿಸ್ತಾ' ಬೇಕೇ? ನಾಳೆ ದೆಹಲಿ ಹೈಕೋರ್ಟ್‌ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.