ಆಕ್ಸ್‌ಫರ್ಡ್ (ಲಂಡನ್): ''ತೆಲಂಗಾಣದ ಸಮಗ್ರ ಅಭಿವೃದ್ಧಿ ಮಾದರಿ ಅತ್ಯಂತ ಸಮೃದ್ಧವಾಗಿದೆ. ಮುಂಬರುವ ರಾಜ್ಯ ಚುನಾವಣೆಯಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸ್ಪರ್ಧಿಸಿ ಮೂರನೇ ಬಾರಿಗೆ ಭಾರಿ ಬಹುಮತದೊಂದಿಗೆ ಗೆಲ್ಲಲಿದೆ'' ಎಂದು ಪಕ್ಷದ ನಾಯಕಿ ಕಲ್ವಕುಂಟ್ಲ ಕವಿತಾ ಹೇಳಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಅವರು, ಸೋಮವಾರ ಸಂಜೆ ವಿವಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಎಕ್ಸ್‌ಪ್ಲೋರಿಂಗ್ ಇನ್‌ಕ್ಲೂಸಿವ್ ಡೆವಲಪ್‌ಮೆಂಟ್: ದ ತೆಲಂಗಾಣ ಮಾದರಿ' ಎಂಬ ವಿಷಯದ ಉಪನ್ಯಾಸ ನೀಡಿದರು.
''ತೆಲಂಗಾಣ ರಾಜ್ಯವು ಜೂನ್ 2014ರಲ್ಲಿ ಸ್ಥಾಪನೆ ಆದಾಗಿಂದಲೂ ತಮ್ಮ ತಂದೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ಹಲವಾರು ನೀತಿಗಳನ್ನು ಜಾರಿಗೆ ತಂದಿದ್ದಾರೆ. ಅಷ್ಟೇ ಅಲ್ಲ ಹಲವು ಕಾರ್ಯತಂತ್ರಗಳು ಮತ್ತು ಉಪಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇದು ಈ ಪ್ರದೇಶದ ಅದೃಷ್ಟವನ್ನು ಪುನರುಜ್ಜೀವನಗೊಳಿಸಲು ಮತ್ತು ಸ್ಪ್ರಿಂಗ್‌ಬೋರ್ಡ್ ಅನ್ನು ರಚಿಸಲು ಸಹಾಯ ಮಾಡಿತು. ಭವಿಷ್ಯದಲ್ಲಿ ದೊಡ್ಡ ಬೆಳವಣಿಗೆ ಆಗಲಿದೆ'' ಎಂದ ಅವರು, ''ತೆಲಂಗಾಣ ಮಾದರಿಯು ಅತ್ಯಂತ ಪರಿಣಾಮಕಾರಿಯಾದ ಮಾದರಿಯಾಗಿದೆ. ಇದರಿಂದ ತೆಲಂಗಾಣದ ಜನರು ತಮ್ಮ ಜೀವನ ಮಟ್ಟದಲ್ಲಿ ಮುಂದಿನ ಹಂತಕ್ಕೆ ಹೋಗಲು ಸಹಾಯ ಮಾಡಿದೆ'' ಎಂದು ಕೆ.ಕವಿತಾ ಹೇಳಿದ್ದಾರೆ.
ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ''ತೆಲಂಗಾಣ ರಾಜ್ಯದಲ್ಲಿ ಬಹಳ ಆಳವಾಗಿ ಬೇರೂರಿರುವ, ಎಲ್ಲರನ್ನೂ ಒಳಗೊಳ್ಳುವಂತಹ ಬೆಳವಣಿಗೆ ನಡೆದಿದೆ. ತೆಲಂಗಾಣ ಜನರು ಕಳೆದ ಎರಡು ಅವಧಿಗಳಲ್ಲಿ ಬಿಆರ್‌ಎಸ್ ಪಕ್ಷವನ್ನು ಆಶೀರ್ವದಿಸಿದ್ದಾರೆ. ನಾವು ಪ್ರಣಾಳಿಕೆಯಲ್ಲೂ ನೀಡದ ಹಲವು ಭರವಸೆಗಳನ್ನು ಈಡೇರಿಸಿದ್ದೇವೆ. ಜನರಿಗೆ ಅಗತ್ಯವಿರುವ ಅನೇಕ ವಿಷಯಗಳನ್ನು ನಾವು ಜಾರಿಗೊಳಿಸಿದ್ದೇವೆ. ಆದ್ದರಿಂದ, ಜನರು ಕೆಸಿಆರ್ ಅವರ ಹಿತೈಷಿ ಎಂದು ಅರ್ಥ ಮಾಡಿಕೊಂಡಿದ್ದಾರೆ. ಜನರು ಮತ್ತೆ ನಮ್ಮನ್ನು ಬೆಂಬಲಿಸುತ್ತಾರೆ ಎಂದು ನಾವು ಬಲವಾಗಿ ನಂಬುತ್ತೇವೆ. ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆ ಹಿನ್ನೆಲೆ ನಾವು ಸಿದ್ಧರಿದ್ದೇವೆ. ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ'' ಎಂದು ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಸಮಾಜಕ್ಕಾಗಿ ತೆಲಂಗಾಣ ಅಭಿವೃದ್ಧಿ ಮಾದರಿ ಸಿದ್ಧ: ತೆಲಂಗಾಣ ಅಭಿವೃದ್ಧಿ ಮಾದರಿಯನ್ನು ಸಂಕಷ್ಟ ಮತ್ತು ಒತ್ತಡದಲ್ಲಿರುವ ಸಮಾಜಕ್ಕಾಗಿ ರೂಪಿಸಲಾಗಿದೆ. ಅದನ್ನು ಸಕಾರಾತ್ಮಕ ಬೆಳವಣಿಗೆಯಾಗಿ ಪರಿವರ್ತಿಸಲು, ನಾವು ನಿಜವಾಗಿಯೂ ನಮಗೆ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅಗತ್ಯವಿದೆ. ನಮಗೆ ಲಭ್ಯವಿರುವ ಮಾನವ ಸಂಪನ್ಮೂಲಗಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ನಾವು ರೂಪಿಸಿದ ಕಾರ್ಯಕ್ರಮಗಳಿಗೆ ಅತ್ಯಂತ ವ್ಯವಸ್ಥಿತವಾಗಿ ಹೂಡಿಕೆ ಮಾಡುವ ದೃಷ್ಟಿಯಿಂದ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮತ್ತು ಯಾವುದೇ ಭ್ರಷ್ಟಾಚಾರವಿಲ್ಲದೇ ಕಾರ್ಯವನ್ನು ಮಾಡಿ ತೋರಿಸಿದ್ದಾರೆ ಎಂದ ಕವಿತಾ ಅವರು, ರೈತರಿಗೆ ಉಚಿತ ವಿದ್ಯುತ್ ಮತ್ತು ನೀರಿನ ಪೂರೈಕೆಯ ಭದ್ರತೆಯನ್ನು ನೀಡಲು ರಾಜ್ಯದ ಕೃಷಿ ಆರ್ಥಿಕತೆಗೆ ಮಾಡಿದ ಮಹತ್ವದ ಹೂಡಿಕೆಗಳನ್ನು ಎತ್ತಿ ತೋರಿಸಿದರು.
ತೆಲಂಗಾಣವನ್ನು ರಚಿಸಿದಾಗಿನಿಂದ ತಲಾ ಆದಾಯ ದ್ವಿಗುಣಗೊಳ್ಳುತ್ತಿದೆ. ಇದು ನಾರ್ಡಿಕ್ ದೇಶಗಳಿಗೆ ಸಮಾನವಾದ ಬೆಳವಣಿಗೆಯ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ರಾಜ್ಯದ ನೀತಿಗಳ ಪ್ರಯೋಜನವನ್ನು ಬಡವರು ಪಡೆಯುತ್ತಿದ್ದಾರೆ ಎಂಬುದನ್ನು ಅಂಕಿ ಸಂಖ್ಯೆಗಳು ತಿಳಿಸುತ್ತವೆ. ನವೀಕರಿಸಬಹುದಾದ ಶಕ್ತಿಯ ಮೇಲೆ ಗಮನ ಕೇಂದ್ರೀಕರಿಸುವುದು, ಸಸ್ಯಗಳನ್ನು ಪೋಷಿಸಿ ಪ್ರೋತ್ಸಾಹಿಸಲು ಮತ್ತು ಅರಣ್ಯ ರಕ್ಷಣೆ, ಸರ್ಕಾರದ ನೇತೃತ್ವದ ಇನ್ಕ್ಯುಬೇಟರ್ ಯೋಜನೆಗಳು, ಉದ್ದೇಶಿತ ಆರೋಗ್ಯ ಉಪಕ್ರಮಗಳು ಜಾರಿ ಮತ್ತು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳ ನಿರ್ಮಾಣವು ರಾಜ್ಯದ ಅಂತರ್ಗತ ಅಭಿವೃದ್ಧಿ ಮಾದರಿಯ ಘಟಕಗಳಾಗಿವೆ. ಈ ಅಭಿವೃದ್ಧಿ ಮಾದರಿಗೆ ತಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಮತ್ತು ನಾವು ಅದ್ಭುತವಾಗಿ ಕಾರ್ಯನಿರ್ವಹಿಸಿದ್ದೇವೆ. ನಾವು ಹೋರಾಟಗಾರರು ಎಂದು ನಾನು ನಂಬುತ್ತೇನೆ, ನಾವು ತೆಲಂಗಾಣಕ್ಕಾಗಿ ಹೋರಾಡಿದ್ದೇವೆ ಮತ್ತು ನಾವು ತೆಲಂಗಾಣದ ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ ಎಂದು ಕವಿತಾ ಹೇಳಿದ್ದಾರೆ.
ಕೆಸಿಆರ್ ಅವರ ಸಮರ್ಥ ನಾಯಕತ್ವದಲ್ಲಿ, ನಾವು ಅದನ್ನು ಅವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇವೆ. ಯಾವುದೇ ರಾಜ್ಯದ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ರಾಷ್ಟ್ರದ ಅಭಿವೃದ್ಧಿ ಅಡಗಿದೆ. ಭಾರತವೂ ದೊಡ್ಡದಾಗಿ ಬೆಳೆಯುತ್ತಿದೆ. ಕೆಸಿಆರ್ ಅವರಂತಹ ನಾಯಕರೊಂದಿಗೆ, ತೆಲಂಗಾಣದಂತಹ ಮಾದರಿಗಳೊಂದಿಗೆ ರಾಷ್ಟ್ರಕ್ಕೆ, ಜಗತ್ತಿಗೆ ಸಾರ್ವತ್ರಿಕವಾಗಿ ಅನ್ವಯಿಸಬಹುದು. ನಾವು ದೇಶವಾಗಿ ಬೆಳೆಯುತ್ತೇವೆ ಎಂದು ನನಗೆ ಖಾತ್ರಿಯಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಿಂಗೂರ್ ಘಟಕ ನಷ್ಟ: ಟಾಟಾ ಮೋಟಾರ್ಸ್ಗೆ ₹766 ಕೋಟಿ ನೀಡುವಂತೆ ಪಶ್ಚಿಮಬಂಗಾಳ ಸರ್ಕಾರಕ್ಕೆ ಆದೇಶ