ಗಯಾ(ಬಿಹಾರ): ಮಹಾಮಾರಿ ಕೊರೊನಾದಿಂದ ಜನರು ನಲುಗಿ ಹೋಗಿದ್ದಾರೆ. ಇದರ ತಡೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿವೆ. ವಿಜ್ಞಾನಿಗಳು ಹಗಲು ರಾತ್ರಿ ಲಸಿಕೆ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಇದೆಲ್ಲದರ ಮಧ್ಯೆ ಕೋವಿಡ್ ನಿವಾರಣೆಗಾಗಿ ಇಲ್ಲೊಂದು ಗ್ರಾಮದ ಜನತೆ ಮೂಢನಂಬಿಕೆಯ ಮೊರೆಹೋಗಿದ್ದಾರೆ.
ಬಿಹಾರದ ಗಯಾದಲ್ಲಿನ ಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ತಾಂತ್ರಿಕನೋರ್ವ ಕೊರೊನಾ ನಿವಾರಣೆಗಾಗಿ ಪೂಜೆ ಮಾಡಿ ಕಾಳಿ ದೇವಿಗೆ ಮೇಕೆ ಬಲಿ ನೀಡಿದ್ದಾನೆ. ಈ ಸಂದರ್ಭದಲ್ಲಿ ಅನೇಕ ಗ್ರಾಮಸ್ಥರು ಹಾಜರಿದ್ದರು.
ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಲ್ಲಿ ಮನೆ - ಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಿ: ನಮೋ ಆದೇಶ
ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಬಂದಾಗ ಇಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದ್ದು, ಈ ಹಿಂದೆ ಕೂಡ ಅನೇಕ ಸಲ ಇಲ್ಲಿ ಪ್ರಾಣಿ ಬಲಿ ನೀಡಲಾಗಿದೆ. ವಿಶ್ವ ಶಾಂತಿ ಹಾಗೂ ಕೊರೊನಾದಿಂದ ಸ್ವಾತಂತ್ರ್ಯ ಪಡೆದುಕೊಳ್ಳುವ ಸಲುವಾಗಿ ತಾಂತ್ರಿಕ ವಿಶೇಷ ಪೂಜೆ ನಡೆಸಿ, ಪ್ರಾಣಿ ಬಲಿ ನೀಡಿದ್ದಾರೆ. ಓರ್ವ ಭಕ್ತ ಮೇಕೆ ನೀಡಿದ್ದಾಗಿ ತಿಳಿದು ಬಂದಿದೆ.