ETV Bharat / bharat

SpiceJet ಪ್ರಯಾಣಿಕರಿಗೆ ಇನ್ಮುಂದೆ ವಿಮಾನದಲ್ಲೇ ಕ್ಯಾಬ್ ಬುಕ್ ಮಾಡಲು ಅವಕಾಶ

ಸ್ಪೈಸ್‌ಸ್ಕ್ರೀನ್‌ನಲ್ಲಿ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಿದ ನಂತರ, ಅವರು ಎಸ್‌ಎಂಎಸ್, ವಾಟ್ಸಾಪ್ ಮೂಲಕ ಕ್ಯಾಬ್ ಬುಕಿಂಗ್ ಒಟಿಪಿ ಸಂದೇಶವನ್ನು ಪಡೆಯುತ್ತಾರೆ ಮತ್ತು ವಿಮಾನ ಲ್ಯಾಂಡ್ ಆದ ಬಳಿಕ ತಮ್ಮ ಮೊಬೈಲ್ ಫೋನ್‌ನಲ್ಲಿ ಸ್ವಯಂಚಾಲಿತ ಕರೆಯ ಮೂಲಕ ದೃಢೀಕರಣವನ್ನು ಪಡೆಯುತ್ತಾರೆ. ಆನ್‌ಲೈನ್ ಅಥವಾ ನಗದು ಪಾವತಿಗೆ ಅವಕಾಶವಿದೆ.

SpiceJet
SpiceJet
author img

By

Published : Aug 12, 2021, 3:25 PM IST

ಮುಂಬೈ: ಸ್ಪೈಸ್​ಜೆಟ್​ನ ವಿಮಾನಯಾನ ಮನರಂಜನಾ ವೇದಿಕೆಯಾದ ಸ್ಪೈಸ್‌ಸ್ಕ್ರೀನ್ ಬಳಸಿ ಪ್ರಯಾಣಿಕರು ಈಗ ವಿಮಾನ ಹಾರಾಟದ ಸಮಯದಲ್ಲಿ ಕ್ಯಾಬ್‌ಗಳನ್ನು ಬುಕ್ ಮಾಡಬಹುದು ಎಂದು ಕಂಪೆನಿ ಹೇಳಿದೆ.

ಮೊದಲ ಹಂತದಲ್ಲಿ ಈ ಹೊಸ ಸೇವೆಯು ಇಂದಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಬಳಿಕ ಮುಂಬೈ, ಬೆಂಗಳೂರು, ಹೈದರಾಬಾದ್, ಗೋವಾ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಪುಣೆ ಮತ್ತು ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹಂತ ಹಂತವಾಗಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.

ದೇಶೀಯ ವಾಯುಯಾನ ಉದ್ಯಮದಲ್ಲಿ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಪ್ರಯಾಣಿಕರು ತಮ್ಮ ಕ್ಯಾಬ್​ಗಾಗಿ ಕಾಯುವುದನ್ನು ತಪ್ಪಿಸುತ್ತದೆ ಎಂದು ಸ್ಪೈಸ್​ಜೆಟ್​ ಏರ್‌ಲೈನ್ಸ್​ ಹೇಳಿದೆ.

ಸ್ಪೈಸ್‌ಸ್ಕ್ರೀನ್‌ನಲ್ಲಿ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಿದ ನಂತರ, ಅವರು ಎಸ್‌ಎಂಎಸ್, ವಾಟ್ಸಾಪ್ ಮೂಲಕ ಕ್ಯಾಬ್ ಬುಕಿಂಗ್ ಒಟಿಪಿ ಸಂದೇಶವನ್ನು ಪಡೆಯುತ್ತಾರೆ ಮತ್ತು ವಿಮಾನ ಲ್ಯಾಂಡ್ ಆದ ಬಳಿಕ ತಮ್ಮ ಮೊಬೈಲ್ ಫೋನ್‌ನಲ್ಲಿ ಸ್ವಯಂಚಾಲಿತ ಕರೆಯ ಮೂಲಕ ದೃಢೀಕರಣವನ್ನು ಪಡೆಯುತ್ತಾರೆ.

ಪ್ರಯಾಣದ ಕೊನೆಯಲ್ಲಿ ಯಾವುದೇ ಪಾವತಿ ಆಯ್ಕೆಗಳ ಮೂಲಕ (ಆನ್‌ಲೈನ್ ಅಥವಾ ನಗದು) ಪಾವತಿಸಲು ಗ್ರಾಹಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಸ್ಪೈಸ್​ಜೆಟ್ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.