ETV Bharat / bharat

ಜೂನ್ 24ರಂದು AICC, ರಾಜ್ಯ ಉಸ್ತುವಾರಿಗಳ ಸಭೆ ಕರೆದ ಸೋನಿಯಾ ಗಾಂಧಿ - ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದ ಕಾಂಗ್ರೆಸ್

ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧುವಿಗೆ ನಿಷ್ಠರಾಗಿರುವ ಬಣಗಳ ನಡುವಿನ ಬಿರುಕಿನ ಹಿನ್ನೆಲೆ ರಚಿಸಲಾದ ಮೂವರು ಸದಸ್ಯರ ಸಮಿತಿಯನ್ನು ಜೂನ್ ಆರಂಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಭೇಟಿ ಮಾಡಿದ್ದರು. ಸಮಿತಿ ಪಕ್ಷದ ಶಾಸಕರು, ಸಂಸದರು ಮತ್ತು ಇತರ ಮುಖಂಡರನ್ನು ಭೇಟಿ ಮಾಡಿ ನಂತರ ಸಮಿತಿ ಸದಸ್ಯರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದರು..

sonia
sonia
author img

By

Published : Jun 21, 2021, 6:05 PM IST

ನವದೆಹಲಿ : ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್​ 24ರಂದು ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಾಧ್ಯಕ್ಷರ ಸಭೆ ಕರೆದಿದ್ದಾರೆ. ಈ ಸಭೆ ವರ್ಚುವಲ್​ ಮೂಲಕ ನಡೆಯಲಿದೆ. ಮೂಲಗಳ ಪ್ರಕಾರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾಂಗ್ರೆಸ್​ ನಾಯಕ ಮತ್ತು ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಸಹ ಎಐಸಿಸಿ ಸದಸ್ಯರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್​ ಶಾಸಕ ನವಜೋತ್ ಸಿಂಗ್​ ಸಿಧು ಮತ್ತು ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ನಡುವಿನ ಬಿರುಕು ಹಿನ್ನೆಲೆ ರಚಿಸಲಾದ ಮೂವರು ಸದಸ್ಯರ ಸಮಿತಿಯನ್ನು ಪಂಜಾಬ್​ ಸಿಎಂ ಜೂನ್​ ಮೊದಲ ವಾರ ಭೇಟಿ ಮಾಡಿದ್ದರು. ಸಮಿತಿ ಪಕ್ಷದ ಶಾಸಕರು, ಸಂಸದರು ಮತ್ತು ಇತರ ಮುಖಂಡರನ್ನು ಭೇಟಿ ಮಾಡಿ ನಂತರ ಸಮಿತಿ ಸದಸ್ಯರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದೆ.

sonia
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧುವಿಗೆ ನಿಷ್ಠರಾಗಿರುವ ಬಣಗಳ ನಡುವಿನ ಬಿರುಕಿನ ಹಿನ್ನೆಲೆ ರಚಿಸಲಾದ ಮೂವರು ಸದಸ್ಯರ ಸಮಿತಿಯನ್ನು ಜೂನ್ ಆರಂಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಭೇಟಿ ಮಾಡಿದ್ದರು. ಸಮಿತಿ ಪಕ್ಷದ ಶಾಸಕರು, ಸಂಸದರು ಮತ್ತು ಇತರ ಮುಖಂಡರನ್ನು ಭೇಟಿ ಮಾಡಿ ನಂತರ ಸಮಿತಿ ಸದಸ್ಯರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದರು.

ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕರ್ಜುನ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಹರೀಶ್ ರಾವತ್ ಮತ್ತು ಮಾಜಿ ಸಂಸದ ಜೆ ಪಿ ಅಗರ್ವಾಲ್ ಅವರನ್ನೊಳಗೊಂಡ ಸಮಿತಿ ತಮ್ಮ ವರದಿಯನ್ನು ಸಲ್ಲಿಸಿದ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಎರಡು ಬಾರಿ ಭೇಟಿ ಮಾಡಿದೆ. ಇನ್ನು, ಜೂನ್ 24ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳ ನೇಮಕ ಮತ್ತು ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯೂ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.