ನವದೆಹಲಿ: ಎಐಎಂಐಎಂ ಮುಖಂಡ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
-
Police held five people in custody following an incident of vandalism outside Hyderabad (Telangana) MP and AIMIM chief Asaduddin Owaisi's house, in Delhi: Delhi Police pic.twitter.com/YkrrBSttsi
— ANI (@ANI) September 21, 2021 " class="align-text-top noRightClick twitterSection" data="
">Police held five people in custody following an incident of vandalism outside Hyderabad (Telangana) MP and AIMIM chief Asaduddin Owaisi's house, in Delhi: Delhi Police pic.twitter.com/YkrrBSttsi
— ANI (@ANI) September 21, 2021Police held five people in custody following an incident of vandalism outside Hyderabad (Telangana) MP and AIMIM chief Asaduddin Owaisi's house, in Delhi: Delhi Police pic.twitter.com/YkrrBSttsi
— ANI (@ANI) September 21, 2021
ಮನೆಯ ಕಿಡಿಕಿ, ಗೇಟ್ ಸೇರಿದಂತೆ ಅನೇಕ ಪರಿಕರ ಒಡೆದು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದ ದೆಹಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಅಸಾದುದ್ದೀನ್ ಓವೈಸಿ ಈ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಿಳೆಯಿಂದ ಪುರುಷ, ಪುರುಷನಿಂದ ಮಹಿಳೆಯರಿಗೆ ಮಸಾಜ್ ನಿಷೇಧ : ದೆಹಲಿಯಲ್ಲಿ ಹೊಸ ರೂಲ್ಸ್!
ಓವೈಸಿ ಅಧಿಕೃತ ನಿವಾಸದ ಉಸ್ತುವಾರಿಯನ್ನು ದೀಪಾ ನೋಡಿಕೊಳ್ಳುತ್ತಿದ್ದು, ಅವರು ತಿಳಿಸಿರುವ ಪ್ರಕಾರ 7-8 ದಾಳಿಕೋರರು ಮನೆಯೊಳಗೆ ಇಟ್ಟಿಗೆ ಎಸೆದಿದ್ದಾಗಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳು ದೆಹಲಿಯ ಮಂಡೋಲಿ ಪ್ರದೇಶದ ನಿವಾಸಿಗಳು ಎಂದು ಹೇಳಲಾಗುತ್ತಿದ್ದು, ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.