ಪಣಜಿ(ಗೋವಾ) : ಐದು ರಾಜ್ಯಗಳ ಚುನಾವಣೆ ಪೈಕಿ ಗೋವಾ ವಿಧಾನಸಭೆಗೂ ಮತದಾನ ನಡೆಯಲಿದೆ. ಎಲ್ಲ 40 ಕ್ಷೇತ್ರಗಳಿಗೆ ಫೆ.14ರಂದು ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ.
ಅದಕ್ಕಾಗಿ ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎಎಪಿ ಸರ್ವಸನ್ನದ್ಧವಾಗಿವೆ. ಇದರ ಬೆನ್ನಲ್ಲೇ ಶಿವಸೇನೆ- ಎನ್ಸಿಪಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿವೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ-ಎನ್ಸಿಪಿ ಮೈತ್ರಿ ಖಚಿತಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಸೀಟು ಹಂಚಿಕೆ ಕೂಡ ಅಂತಿಮಗೊಳ್ಳಲಿದೆ ಎಂದು ತಿಳಿಸಿವೆ.
-
We made an offer to Congress to jointly contest Goa polls, but in vain. They neither said yes nor no ... NCP & Shiv Sena will jointly fight Goa polls, not all 40 seats, but a substantial number. First list may be released tomorrow followed by other lists: NCP leader Praful Patel pic.twitter.com/2T1v1gZFUY
— ANI (@ANI) January 19, 2022 " class="align-text-top noRightClick twitterSection" data="
">We made an offer to Congress to jointly contest Goa polls, but in vain. They neither said yes nor no ... NCP & Shiv Sena will jointly fight Goa polls, not all 40 seats, but a substantial number. First list may be released tomorrow followed by other lists: NCP leader Praful Patel pic.twitter.com/2T1v1gZFUY
— ANI (@ANI) January 19, 2022We made an offer to Congress to jointly contest Goa polls, but in vain. They neither said yes nor no ... NCP & Shiv Sena will jointly fight Goa polls, not all 40 seats, but a substantial number. First list may be released tomorrow followed by other lists: NCP leader Praful Patel pic.twitter.com/2T1v1gZFUY
— ANI (@ANI) January 19, 2022
ಮೈತ್ರಿಗೆ ಸಂಬಂಧಿಸಿದಂತೆ ಪಣಜಿಯಲ್ಲಿ ಶಿವಸೇನೆಯ ಸಂಜಯ್ ರಾವತ್, ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಹಾಗೂ ಜಿತೇಂದ್ರ ಅವಾದ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿರುವ ಪ್ರಫುಲ್ ಪಟೇಲ್, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದೆವು.
ಆದರೆ, ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಕಾರಣ ಇದೀಗ ನಾವಿಬ್ಬರು ಜೊತೆಯಾಗಿ ಚುನಾವಣೆ ಎದುರಿಸಲಿದ್ದೇವೆ ಎಂದರು. ಎಲ್ಲ 40 ಕ್ಷೇತ್ರಗಳಲ್ಲೂ ನಾವು ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಕೆಲವೊಂದು ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದು, ನಾಳೆ ಮೊದಲ ಪಟ್ಟಿ ರಿಲೀಸ್ ಆಗಲಿದೆ ಎಂದರು.
ಇದನ್ನೂ ಓದಿರಿ: ವಿಷಕಾರಿ ಹೊಗೆ ಸೇವನೆ: ಮನೆಯಲ್ಲಿ ತಾಯಿ, ನಾಲ್ವರು ಮಕ್ಕಳು ಶವವಾಗಿ ಪತ್ತೆ!
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಜಯ ಸಾಧಿಸುವ ಕನಸು ಕಾಣುತ್ತಿದೆ. ನಮ್ಮ ಜೊತೆಗಿನ ಮೈತ್ರಿಗೆ ಅದು ಹಿಂದೇಟು ಹಾಕಿದ್ದು, ನಾವು ಒಟ್ಟಿಗೆ ಸ್ಪರ್ಧೆ ಮಾಡಲಿದ್ದೇವೆ. ಗೋವಾದಲ್ಲಿ ಆಯಾ ರಾಮ್, ಗಯಾ ರಾಮ್ (aaya ram, gaya ram) ಸರ್ಕಾರವಿದ್ದು, ಅದು ಬದಲಾಗಬೇಕಾಗಿದೆ ಎಂದು ಸಂಜಯ್ ರಾವತ್ ತಿಳಿಸಿದರು.