ETV Bharat / bharat

ನಾಳೆ Sharad​ Pawar ನೇತೃತ್ವದಲ್ಲಿ 'ರಾಷ್ಟ್ರಮಂಚ್​' ಸಭೆ: ಕೇಂದ್ರದ ವಿರುದ್ಧ ನಡೀತಿದ್ಯಾ ಪ್ಲಾನ್​!

ಶರದ್ ಪವಾರ್ ಅವರು ನಾಳೆ ಸಂಜೆ 4 ಗಂಟೆಗೆ 15 ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಮನೀಶ್ ತಿವಾರಿ ಮತ್ತು ಶತ್ರುಘ್ನ ಸಿನ್ಹಾ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ.

Sharad Pawar met Prashant Kishor
ಶರದ್​ ಪವಾರ್​ ನೇತೃತ್ವದಲ್ಲಿ 'ರಾಷ್ಟ್ರಮಂಚ್​' ಸಭೆ
author img

By

Published : Jun 21, 2021, 7:59 PM IST

ನವದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದಾರೆ. ಈ ಹಿಂದೆ ಇಬ್ಬರೂ ಮುಂಬೈನ ಪವಾರ್ ನಿವಾಸದಲ್ಲಿ ಭೇಟಿಯಾಗಿದ್ದರು. ಈಗ ಇವರಿಬ್ಬರು ಮತ್ತೆ ಭೇಟಿಯಾದ ಕಾರಣ, ರಾಜಕೀಯ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ಈ ಸಭೆಯನ್ನು ನೋಡಲಾಗುತ್ತಿದೆ.

ಈ ಮಧ್ಯೆ ಶರದ್ ಪವಾರ್ ಅವರು ನಾಳೆ ಸಂಜೆ 4 ಗಂಟೆಗೆ 15 ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಮನೀಶ್ ತಿವಾರಿ ಮತ್ತು ಶತ್ರುಘ್ನ ಸಿನ್ಹಾ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ.

ಖಾಸಗಿ ಕೆಲಸದಿಂದಾಗಿ ಅವರು ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಶರದ್ ಪವಾರ್ ಜೂನ್ 23ರವರೆಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶರದ್ ಪವಾರ್ ಅವರನ್ನು ಬಿಜೆಪಿ ವಿರೋಧಿ ಮೈತ್ರಿಕೂಟದ ಪ್ರಮುಖ ನಾಯಕರಾಗಿ ನೋಡಲಾಗುತ್ತಿದೆ.

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿರುದ್ಧ ದೊಡ್ಡ ವಿರೋಧ ಪಕ್ಷವನ್ನು ನಿರ್ಮಿಸುವ ಕಾರ್ಯತಂತ್ರದ ಕುರಿತು ಅವರು ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಅವರು ಎರಡು ಬಾರಿ ಭೇಟಿ ಮಾಡಿದ್ದಾರೆ. ಹಾಗಾದರೆ ಬಂಗಾಳ ಮಾದರಿಯನ್ನು ಈಗ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ ಅನ್ವಯಿಸಬಹುದೇ? ಇದನ್ನು ಚರ್ಚಿಸಲಾಗುತ್ತಿದೆ.

ನಾಳೆ ಸಂಜೆ 4 ಗಂಟೆಗೆ ದೆಹಲಿಯ ಎನ್‌ಸಿಪಿ ಮುಖ್ಯಸ್ಥರ ನಿವಾಸದಲ್ಲಿ 'ರಾಷ್ಟ್ರಮಂಚ್' ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಪವಾರ್ ಮೊದಲ ಬಾರಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪವಾರ್ ಮತ್ತು ಯಶ್ವಂತ್ ಸಿನ್ಹಾ ಅವರಲ್ಲದೇ, ಕೆಲವು ವಿರೋಧ ಪಕ್ಷದ ನಾಯಕರು ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ರಾಷ್ಟ್ರಮಂಚ್ ರಾಜಕೀಯ ವೇದಿಕೆಯಲ್ಲ. ಆದರೆ, ಭವಿಷ್ಯದಲ್ಲಿ ಈ ಮೂಲಕ ಮೂರನೇ ಆಯ್ಕೆಯನ್ನು ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಏಕೆಂದರೆ ಮಂಚ್ ಸರ್ಕಾರ ವಿರೋಧಿ ರಾಜಕೀಯ ಸೇರಿದಂತೆ ವಿಷಯಗಳನ್ನು ಚರ್ಚಿಸುತ್ತದೆ.

ರಾಷ್ಟ್ರಮಂಚ್ ಎಂದರೇನು?

ರಾಷ್ಟ್ರಮಂಚ್ ಸ್ಥಾಪಕ ಯಶ್ವಂತ್ ಸಿನ್ಹಾ ಈಗ ಟಿಎಂಸಿಯ ಉಪಾಧ್ಯಕ್ಷರಾಗಿದ್ದಾರೆ. ಸಭೆಯಲ್ಲಿ ಸಿನ್ಹಾ ಟಿಎಂಸಿಯ ಪ್ರತಿನಿಧಿಯಾಗಿ ಮತ್ತು ರಾಷ್ಟ್ರಮಂಚ್ ಸಂಸ್ಥಾಪಕರಾಗಿ ಭಾಗವಹಿಸಲಿದ್ದಾರೆ. ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಸಿನ್ಹಾ 2018ರಲ್ಲಿ ರಾಷ್ಟ್ರ ಮಂಚ್ ಅನ್ನು ಪ್ರಾರಂಭಿಸಿದರು.

ವಿರೋಧ ಪಕ್ಷದ ನಾಯಕರಲ್ಲದೇ, ರಾಜಕೀಯೇತರ ಜನರು ಸಹ ಭಾಗವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತುವುದು ರಾಷ್ಟ್ರ ಮಂಚ್​ನ ಉದ್ದೇಶ.

ಇದಕ್ಕೂ ಮುನ್ನ ಪ್ರಶಾಂತ್ ಕಿಶೋರ್ ಮತ್ತು ಶರದ್ ಪವಾರ್ ಜೂನ್ 11 ರಂದು ಭೇಟಿಯಾಗಿದ್ದರು. ಪ್ರಶಾಂತ್ ಕಿಶೋರ್ ಅವರು ಶರದ್ ಪವಾರ್ ಅವರನ್ನು ಮುಂಬೈನ 'ಸಿಲ್ವರ್ ಓಕ್'ನಲ್ಲಿ ಭೇಟಿಯಾದರು. ಉಭಯ ನಾಯಕರ ನಡುವಿನ ಸಭೆ ಸುಮಾರು ಮೂರು ಗಂಟೆಗಳ ಕಾಲ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.