ETV Bharat / bharat

ರಾಮ ಮಂದಿರ ಉದ್ಘಾಟನೆ: ಕಂಚಿ ಪೀಠದಲ್ಲಿ 40 ದಿನ ಪೂಜಾ, ಹವನ ಕಾರ್ಯಕ್ರಮ - ram temple

ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಕಂಚಿ ಪೀಠದಲ್ಲಿ 40 ದಿನ ಪೂಜೆ, ಹವನ ನಡೆಯಲಿದೆ.

ರಾಮ ಮಂದಿರ ಉದ್ಘಾಟನೆ
ರಾಮ ಮಂದಿರ ಉದ್ಘಾಟನೆ
author img

By ETV Bharat Karnataka Team

Published : Jan 13, 2024, 8:12 AM IST

ಕಾಂಚೀಪುರಂ (ತಮಿಳುನಾಡು): ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾಲ್ಕು ಪೀಠಗಳ ಶಂಕರಾಚಾರ್ಯರು ಗೈರಾಗಲಿದ್ದಾರೆ ಎಂಬ ಮಾಹಿತಿಯ ನಡುವೆ, ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮಕೋಟಿ ಮಠವು, ಮಂದಿರ ಉದ್ಘಾಟನೆ ನಿಮಿತ್ತ ಯಜ್ಞಶಾಲೆಯಲ್ಲಿ 40 ದಿನಗಳ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಘೋಷಿಸಿದೆ.

"ಶ್ರೀರಾಮನ ಕೃಪೆಯೊಂದಿಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಜನವರಿ 22 ರಂದು ನಡೆಯಲಿದೆ. ಕಾಶಿ ಮಠದ ಯಜ್ಞಶಾಲೆಯಲ್ಲಿ 40 ದಿನಗಳ ಕಾಲ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ. ಇದು ಮಂದಿರ ಉದ್ಘಾಟನೆ ಕಾರ್ಯಕ್ರಮದ ಭಾಗವಾಗಿದೆ. ಲಕ್ಷ್ಮೀಕಾಂತ ದೀಕ್ಷಿತ್ ಸೇರಿದಂತೆ ವೈದಿಕ ವಿದ್ವಾಂಸರ ನೇತೃತ್ವದಲ್ಲಿ ಈ ಪೂಜೆ ನಡೆಯಲಿದೆ" ಎಂದು ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯರು ಹೇಳಿದ್ದಾರೆ. ಈ ಮೂಲಕ ಮಂದಿರ ಉದ್ಘಾಟನೆಗೆ ತಮ್ಮ ವಿರೋಧವಿಲ್ಲ ಎಂಬುದನ್ನು ಸೂಚಿಸಿದ್ದಾರೆ.

100ಕ್ಕೂ ಹೆಚ್ಚು ವಿದ್ವಾಂಸರು ಪೂಜೆ, ಹವನ ನಡೆಸಲಿದ್ದಾರೆ. ಪೀಠದ ಯಜ್ಞಶಾಲೆಯಲ್ಲಿ ಜಪ-ತಪಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಯಾತ್ರಾ ಸ್ಥಳಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕೇದಾರನಾಥ ಮತ್ತು ಕಾಶಿ ವಿಶ್ವನಾಥ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.

ಶಂಕರಾಚಾರ್ಯರ ಗೈರು?: ರಾಮಮಂದಿರ ಇನ್ನೂ ಪೂರ್ಣವಾಗದ ಕಾರಣ, ತ್ವರಿಗತಿಯಲ್ಲಿ ಉದ್ಘಾಟನೆ ಮಾಡುತ್ತಿರುವುದಕ್ಕೆ ನಾಲ್ವರು ಶಂಕರಾಚಾರ್ಯರ ವಿರೋಧವಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ನಾನಾ ಕಾರಣಗಳಿಂದಾಗಿ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ತಿಳಿಸಿದೆ. ಕಾಂಗ್ರೆಸ್​ ಸೇರಿದಂತೆ ಕೆಲ ವಿಪಕ್ಷಗಳು ಈಗಾಗಲೇ ಅಂದಿನ ಉದ್ಘಾಟನೆಯಿಂದ ದೂರವುಳಿಯುವುದಾಗಿ ಘೋಷಿಸಿವೆ.

ವಿಶ್ವವೇ ಕಾತುರದಿಂದ ಕಾಯುತ್ತಿರುವ ದಿವ್ಯ ಕಾರ್ಯಕ್ರಮವು ಜನವರಿ 16 ರಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿವ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಅದಕ್ಕಾಗಿ ಅವರು 11 ದಿನಗಳ ವಿಶೇಷ ವ್ರತ ಆರಂಭಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್​ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದು, ಐತಿಹಾಸಿಕ ಮತ್ತು ಶುಭಕರ ಗಳಿಗೆಗೆ ಸಾಕ್ಷಿಯಾಗುತ್ತಿರುವ ನಾನು ಅದೃಷ್ಟಶಾಲಿ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಭಾವುಕ ಭಾವನೆಯನ್ನು ಅನುಭವಿಸುತ್ತಿದ್ದೇನೆ. ಇದು ನನಗೆ ಸಾಕ್ಷಾತ್ಕಾರದ ಕ್ಷಣವಾಗಿದೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಶತಮಾನಗಳ ಕನಸು ನನಸಾಗುತ್ತಿರುವುದು ನನ್ನನ್ನು ರೋಮಾಂಚನಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಿಸಲು ಶ್ರೀರಾಮನಿಂದ ಭಕ್ತ ಮೋದಿ ಆಯ್ಕೆ: ಅಡ್ವಾಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.