ETV Bharat / bharat

ಪಂಢರಾಪುರ ಪಾದಯಾತ್ರಿಗಳಿಗೆ ಕಾರು ಡಿಕ್ಕಿ: ವಿಠ್ಠಲನ ಪಾದ ಸೇರಿದ 7 ಜನ ಭಕ್ತರು

ಕಾರು ಡಿಕ್ಕಿ ಹೊಡೆದ ಪರಿಣಾಮ ಪಂಢರಾಪುರ ಪುಣ್ಯ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದ 7 ಭಕ್ತರು ಸಾವನ್ನಪ್ಪಿದ್ದಾರೆ.

ಪಂಢರಾಪುರ
ಪಂಢರಾಪುರ
author img

By

Published : Oct 31, 2022, 9:24 PM IST

Updated : Oct 31, 2022, 10:50 PM IST

ಪಂಢರಾಪುರ: ಮಹಾರಾಷ್ಟ್ರದ ಪಂಢರಾಪುರ ಪುಣ್ಯ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 7 ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 8 ಜನ ಭಕ್ತರು ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲ್ಹಾಪುರ ಜಿಲ್ಲೆಯ ಸಂಗೋಲಾ ತಾಲೂಕಿನಲ್ಲಿ ಪಂಢರಾಪುರ ಮೀರಜ್ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ. ಭಕ್ತರ ದಿಂಡಿಗೆ ಕಾರು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಐವರು ಮಹಿಳೆಯರು, ಓರ್ವ ಮಗು ಸೇರಿ ಒಟ್ಟು 7 ಭಕ್ತರು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನಾವಿಸ್ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

(ಓದಿ: ಛತ್ ಆಚರಣೆ ವೇಳೆ ಅನಾಹುತ: ಕುಸಿದ ಕಾಲುವೆ-ಪ್ರಾಣಾಪಾಯದಿಂದ ಪಾರಾದ ಜನ)

Last Updated : Oct 31, 2022, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.