ETV Bharat / bharat

ಸೆ. 23-24 ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ವಿವಾಹ: ಹೇಗಿದೆ ಗೊತ್ತಾ ಮದುವೆ ತಯಾರಿ? - ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ

ರಾಜಸ್ಥಾನದ ಉದಯಪುರದಲ್ಲಿ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಜೋಡಿ ಮದುವೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ
author img

By ETV Bharat Karnataka Team

Published : Sep 5, 2023, 9:55 PM IST

Updated : Sep 5, 2023, 10:22 PM IST

ಮುಂಬೈ : ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಾರ್ಟಿ ನಾಯಕ, ಸಂಸದ ರಾಘವ್​ ಚಡ್ಡಾ ಅವರ ವಿವಾಹ ಇದೇ ತಿಂಗಳು ರಾಜಸ್ಥಾನದ ಉದಯಪುರದಲ್ಲಿರುವ ಲೇಕ್ ಸಿಟಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್​ 23 ಮತ್ತು 24 ರಂದು ಹೋಟೆಲ್​ ಲೀಲಾ ಪ್ಯಾಲೇಸ್​ ಹಾಗು ಉದಯವಿಲಾಸ್‌ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಸಲು ತೆರೆಮರೆಯಲ್ಲಿ ಸಿದ್ದತೆ ನಡೆಯುತ್ತಿದ್ದು, ಇದೊಂದು ಅದ್ಭುತವಾದ ಪಂಜಾಬಿ ಮದುವೆ ಸಮಾರಂಭವಾಗಲಿದೆ.

ಮೂಲಗಳ ಪ್ರಕಾರ ಸೆ. 23 ರಿಂದ ಮೆಹೆಂದಿ, ಹಲ್ದಿ ಮತ್ತು ಸಂಗೀತ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಅಲ್ಲದೇ ಮದುವೆಯ ನಂತರ ಗುರುಗ್ರಾಮ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇನ್ನು ಸೆ.24 ರಂದು ಮದುವೆ ಸಮಾರಂಭ ಮುಕ್ತಾಯವಾಗುತ್ತದೆ. ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಅವರು ರಾಜಕೀಯ, ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಗುರುತನ್ನು ಹೊಂದಿದ್ದಾರೆ.

ಹೀಗಾಗಿ ಮದುವೆ ಸಮಾರಂಭದಲ್ಲಿ ಪರಿಣಿತಿ ಅವರ ಸಹೋದರಿ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಮತ್ತು ದೆಹಲಿ ಮತ್ತು ಇತರ ರಾಜ್ಯಗಳ ರಾಜಕೀಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೋಟೆಲ್​ನಲ್ಲಿ ವಧು ವರ ಆಪ್ತ ಕುಟುಂಬಸ್ಥರು ಹಾಗು ಸ್ನೇಹಿತರಿಗೆ ಮಾತ್ರ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಗಣ್ಯರು ಮದುವೆ ಆಗಮಿಸುವುದರಿಂದ ಹೋಟೆಲ್‌ಗೆ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲು ತಿಳಿಸಲಾಗಿದೆ.

ಇದನ್ನೂ ಓದಿ : ಸಹೋದ್ಯೋಗಿಗಳು 'ಪರಿ'ಣಿತಿ ಹೆಸರೇಳಿ ನನ್ನನ್ನು ಚುಡಾಯಿಸುತ್ತಿದ್ದರು: ಸಂಸದ ರಾಘವ್​ ಚಡ್ಡಾ

ಇದೇ ವರ್ಷದ ಮಾರ್ಚ್​ ತಿಂಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಡೇಟಿಂಗ್​ ವದಂತಿಗಳು ಪ್ರಾರಂಭವಾದವು. ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆದರೂ ರೂಮರ್ಸ್​ಗೆ ರಿಯಾಕ್ಷನ್​ ಕೊಟ್ಟಿರಲಿಲ್ಲ. ಮದುವೆ ಬಗ್ಗೆ ರಾಘವ್ ಚಡ್ಡಾ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದ ವೇಳೆ, ರಾಜನೀತಿ ಬಗ್ಗೆ ಪ್ರಶ್ನಿಸಿ, ಪರಿಣಿತಿ ಬಗ್ಗೆ ಅಲ್ಲ ಎಂದು ತಿಳಿಸಿದ್ದರು. ಮದುವೆ ಬಗ್ಗೆ ಏನಾದರು ನಿರ್ಧಾರವಾದರೆ ಮಾಹಿತಿ ಕೊಡುತ್ತೇನೆ ಎಂದು ಉತ್ತರಿಸಿದ್ದರಷ್ಟೇ.

ಇವೆಲ್ಲದರ ನಡುವೆ ಪರಿಣಿತಿ ಚೋಪ್ರಾ ಬಾಲಿವುಡ್​ನ ಖ್ಯಾತ ಡಿಸೈನರ್​ ಮನೀಷ್ ಮಲ್ಹೋತ್ರಾ ಅವರನ್ನೂ ಭೇಟಿ ಆಗಿದ್ದರು. ತಮ್ಮ ವಿಶೇಷ ದಿನಕ್ಕಾಗಿ ವಿಭಿನ್ನ ಉಡುಗೆ ತೊಡುವ ಸಲುವಾಗಿ ವಸ್ತ್ರ ವಿನ್ಯಾಸಕರನ್ನು ಭೇಟಿಯಾಗಿದ್ದಾರೆಂದು ಹೇಳಲಾಗಿತ್ತು. ಈ ಘಟನೆ ನಡೆದ ಕೆಳದಿನಗಳ ನಂತರ ಮೇ. 13 ರಂದು ದೆಹಲಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಅಂದು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ವದಂತಿಗಳು ನಿಜ ಎಂದರು. ಬಳಿಕ ತಮ್ಮ ಬ್ಯುಸಿ ಶೆಡ್ಯೂಲ್​ನಿಂದ ಫ್ರೀ ಮಾಡಿಕೊಂಡು ಆಗಾಗ ಭೇಟಿಯಾಗುವ ಮೂಲಕ ಗಮನ ಸೆಳೆದರು. ಇದೀಗ ವಿವಾಹ ಸಮಾರಂಭ ಸಲುವಾಗಿ ಅಭಿಮಾನಿಗಳ ಮನದಲ್ಲಿದ್ದಾರೆ.

ಇದನ್ನೂ ಓದಿ : ವಿಡಿಯೋ: ಅಮೃತ್​ಸರದ ಸಚ್‌ಖಂದ್​​ ಶ್ರೀ ಹರ್ಮಂದಿರ್ ಸಾಹಿಬ್‌ಗೆ ರಾಘವ್​ ಪರಿಣಿತಿ ಭೇಟಿ

Last Updated : Sep 5, 2023, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.