ಮುಂಬೈ: ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಈಕ್ವಿಟಿ ಬೆಂಚ್ಮಾರ್ಕ್ನಲ್ಲಿ 511.37 ಪಾಯಿಂಟ್ಗಳ ಏರಿಕೆ ಕಂಡು ಸೆನ್ಸೆಕ್ಸ್ 61,817.32 ಅಂಕ ತಲುಪಿದ್ದರೆ, ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 130.20 ಅಂಕಗಳ ಏರಿಕೆಯೊಂದಿಗೆ 18,468.75 ಅಂಕಗಳಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ತೆರಿಗೆ ಕಡಿತ ಮಾಡಿ, ಪೆಟ್ರೋಲ್ ದರ ಇಳಿಕೆ: ಸಿಎಂ ಭರವಸೆ
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿಸಿ ಲಿಮಿಟೆಟ್ ಟಾಪ್ ಗೇನರ್ ಆಗಿದ್ದು, ಶೇಕಡಾ 2.89 ರಷ್ಟು ಲಾಭ ಗಳಿಸಿದೆ. ಹೆಚ್ಡಿಎಫ್ಸಿ ಬ್ಯಾಂಕ್, ಟಾಟಾ ಸ್ಟೀಲ್ ತಲಾ ಶೇ.2 ರಷ್ಟು ಲಾಭ ಗಳಿಸಿದ್ದರೆ, ಇದರ ನಂತರ ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎನ್‌ಟಿಪಿಸಿ ಲಾಭ ಕಂಡ ಕಂಪನಿಗಳಾಗಿವೆ.